ರಾಜ್ಯ ಪ್ರವಾಹ ಸಂತ್ರಸ್ತರ ಪಾಲಿನ ಹೀರೋ ಜೈಸಲ್ಗೆ ಮಹೀಂದ್ರದಿಂದ ಭರ್ಜರಿ ಗಿಫ್ಟ್!
ತಿರುವನಂತಪುರ: ರುದ್ರ ಮಹಾಜಲಪ್ರಳಯಕ್ಕೆ ತತ್ತರಿಸಿದ್ದ ಕೇರಳದಲ್ಲಿ ಪ್ರವಾಹದ ವೇಳೆ ಸಂತ್ರಸ್ತರ ಪಾಲಿನ ಹೀರೋ ಆಗಿದ್ದ ಜೈಸಲ್ ಗೆ ಮಹೀಂದ್ರ ಸಂಸ್ಧೆ ಭರ್ಜರಿ ಗಿಫ್ಟ್ ನೀಡಿದೆ.
ಪ್ರವಾಹದ ವೇಳೆ ಸಂತ್ರಸ್ತರು ದೋಣಿಯನ್ನು ಹತ್ತಲು ನೆರವಾಗಲು ಜೈಸಲ್ ನೀರಿನ ಮಧ್ಯೆ ನೆಲಕ್ಕೆ ಬಾಗಿ ಬೆನ್ನು ನೀಡಿದ್ದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಅಲ್ಲದೆ ಜೈಸಲ್ ನಡೆಗೆ ಪ್ರಶಂಸೆಯ ಮಹಾಪೂರವೇ ಹರಿದು ಬಂದಿತ್ತು.
ಇದೀಗ ಮಹೀಂದ್ರ ಸಂಸ್ಧೆ ತನ್ನ ಹೊಸ ಉತ್ಪನ್ನ ಕಳೆದ ವಾರವಷ್ಟೇ ಮಾರುಕಟ್ಟೆಗೆ ಬಂದಿದ್ದ ಮಹಿಂದ್ರ ಮರಾಜೋ ಕಾರನ್ನು ಮಹೀಂದ್ರ ಕಾರು ಮಾರಾಟ ಘಟಕ ಈರಂ ಮೋಟಾಸರ್್ ವತಿಯಿಂದ ಜೈಸಲ್ ಗೆ ನೀಡಿದೆ.