ಪಾತೂರು ಶಾಲೆಯಲ್ಲಿ ಕಂಪ್ಯೂಟರ್ ಉದ್ಘಾಟನೆ
ಮಂಜೇಶ್ವರ: ಪಾತೂರಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನವಾಗಿ ಅಳವಡಿಸಲಾದ ಕಂಪ್ಯೂಟರ್ ಹಾಗೂ ಪ್ರಿಂಟರ್ ಗಳನ್ನು ಶುಕ್ರವಾರ ಸಂಸದ ಪಿ.ಕರುಣಾಕರನ್ ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾ.ಪಂ. ಸದಸ್ಯೆ ಗೀತಾ.ವಿ. ಸಾಮಾನಿ ವಹಿಸಿದ್ದರು. ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಅಬ್ದುಲ್ ಅಝೀಝ್ ಸಂಸದರಿಗೆ ಶಾಲು ಹೊದಿಸಿ ಗೌರವಿಸಿದರು. ಗ್ರಾ.ಪಂ. ಸದಸ್ಯೆಯರಾದ ಭಾರತಿ, ಇಂದಿರಾ, ಮಾತೃ ಸಂಘದ ಅಧ್ಯಕ್ಷೆ ರೇವತಿ, ಬೂಬ ನವೀನ್ ಮೊದಲಾದವರು ಸಭೆಯಲ್ಲಿ ಉಪಸ್ಥಿತರಿದ್ದರು. ಮಕ್ಕಳ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಶಾಲಾ ಮುಖ್ಯ ಶಿಕ್ಷಕ ಸುರೇಶ್ ಬಂಗೇರ ಸ್ವಾಗತಿಸಿ, ಶಿಕ್ಷಕಿ ಫಾತಿಮತ್ ಝೌರ ವಂದಿಸಿದರು. ಶಿಕ್ಷಕ ಅಬ್ದುಲ್ ಮಜೀದ್ ಕಾರ್ಯಕ್ರಮ ನಿರೂಪಿಸಿದರು.