ಸಮಾಜಕ್ಕಾಗಿ ಒಂದಷ್ಟು ಸಮಯ ಮೀಸಲು: ಸುರೇಶ್ ಕೆ.ಎಂ.
ಪೆರ್ಲ:ಸಮಾಜಕ್ಕಾಗಿ ಒಂದಷ್ಟು ಸಮಯವನ್ನು ಮೀಸಲಿಡುವ ಗುಣಗಳನ್ನು ಪ್ರತಿಯೊಬ್ಬನೂ ಅಳವಡಿಸಿ ಕೊಳ್ಳಬೇಕಾಗಿದೆ ಎಂದು ನಾಲಂದ ಮಹಾವಿದ್ಯಾಲಯದ ಎನ್ ಎಸ್ ಎಸ್ ಯೋಜನಾಧಿಕಾರಿ ಸುರೇಶ್ ಕೆ.ಎಂ.ಹೇಳಿದರು.
ಪೆರ್ಲ ನಾಲಂದ ಮಹಾ ವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ 49ನೇ ಘಟಕದ ವತಿಯಿಂದ ಪೆರ್ಲದ ಬಡ್ಸ್ ಶಾಲೆಯಲ್ಲಿ ಸೋಮವಾರ ಆಚರಿಸಲಾದ ಎನ್ ಎಸ್ ಎಸ್ ದಿನಾಚರಣೆ ಕಾರ್ಯಕ್ರಮದ ಅವರು ಮಾತನಾಡಿದರು.
ಎನ್ ಎಸ್ ಎಸ್ ಘಟಕವು 'ನಾನಲ್ಲ ನೀನು'( ನೋಟ್ ಮಿ ಬಟ್ ಯು) ಪರಿಕಲ್ಪನೆಯಲ್ಲಿ ಪ್ರವರ್ತನೆ ನಡೆಸುತ್ತಿದ್ದು, ಹಲವಾರು ಸಾಮಾಜಿಕ ಕಾರ್ಯಗಳನ್ನು ಹಮ್ಮಿಕೊಂಡು ಬಂದಿದೆ ಎಂದರು.
ಎಣ್ಮಕಜೆ ಗ್ರಾ.ಪಂ. ಅಧ್ಯಕ್ಷೆ ಶಾರದಾ ವೈ. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಸಮಾಜಮುಖಿ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತಿರುವ ನಾಲಂದ ಮಹಾ ವಿದ್ಯಾಲಯದ ಎನ್ ಎಸ್ ಎಸ್ ಘಟಕಕ್ಕೆ ಅಭಿನಂದನೆ ವ್ಯಕ್ತ ಪಡಿಸಿದರು.
ಗ್ರಾಮ ಪಂಚಾಯಿತಿ ಆರೋಗ್ಯ,ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಆಯಿಶಾ ಎ.ಎ. ಅಧ್ಯಕ್ಷತೆ ವಹಿಸಿದರು.ಪಂಚಾಯಿತಿ ಉಪಾಧ್ಯಕ್ಷ ಅಬೂಬಕರ್ ಸಿದ್ದಿಕ್ ಖಂಡಿಗೆ, ಅಭಿವೃದ್ಧಿ ಸ್ಥಾಯೀ ಸಮಿತಿ ಅಧ್ಯಕ್ಷೆ ಜಯಶ್ರೀ ಕುಲಾಲ್, ಎನ್ ಎಸ್ ಎಸ್ ಕಾರ್ಯದಶರ್ಿ ರೂಪ ಕೆ., ವಿನಾಯಕ್ ಡಿ.ಚಂದ್ರನ್ ಶುಭಾಶಂಸನೆ ಗೈದರು.ಬಡ್ಸ್ ಶಾಲಾ ಶಿಕ್ಷಕಿ ಜ್ಯೋತಿ ವಂದಿಸಿದರು. ಎನ್ ಎಸ್ ಎಸ್ ಸದಸ್ಯೆ ಶಿಲ್ಪಾ ನಿರೂಪಿಸಿದರು.
ಬಡ್ಸ್ ಶಾಲಾ ಮಕ್ಕಳು ಹಾಗೂ ಎನ್ ಎಸ್ ಎಸ್ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಬಡ್ಸ್ ಶಾಲಾ ಮಕ್ಕಳಿಗೆ ಹಣ್ಣು ಹಂಪಲು ವಿತರಿಸಲಾಯಿತು.