ಯಕ್ಷಗಾನ ಅಕಾಡಮಿ ಪ್ರಶಸ್ತಿ ಪ್ರಕಟ: ಬಲಿಪ ನಾರಾಯಣ ಭಾಗವತರಿಗೆ ಪಾತರ್ಿಸುಬ್ಬ ಪುರಸ್ಕಾರ
ಬೆಂಗಳೂರು: ಪ್ರಸಕ್ತ ಸಾಲಿನ ಕನರ್ಾಟಕ ಯಕ್ಷಗಾನ ಅಕಾಡಮಿ ಪ್ರಶಸ್ತಿಗಳು ಪ್ರಕಟವಾಗಿದ್ದು ಮೂಡಬಿದಿರೆಯ ಹಿರಿಯ ಯಕ್ಷಗಾನ ಪ್ರಸಂಗ ಕತರ್ೃ ಬಲಿಪ ನಾರಾಯಣ ಭಾಗವತರಿಗೆ ಪಾತರ್ಿಸುಬ್ಬ ಪುರಸ್ಕಾರ ಲಭಿಸಿದೆ.
ಮದ್ದಳೆ ವಾದಕರಾದ ಶಂಕರ ಭಾಗವತ, ತಾಳಮದ್ದಳೆ ಅರ್ಥಗಾರಿಕೆಯ ಬರೆ ಕೇಶವ ಭಟ್, ಬಡಗತಿಟ್ಟು ಯಕ್ಷಗಾನ ವಿದ್ವಾಂಸ ಎಚ್. ಶ್ರೀಧರ ಹಂದೆ, ಯಕ್ಷಗಾನ ಭಾಗವತ ಎ.ಎಂ. ಶಿವಶಂಕರಯ್ಯ, ಯಕ್ಷಗಾನ ಪಾತ್ರಧಾರಿ ಕರಿಯಣ್ಣ ಅವರುಗಳಿಗೆ ಈ ಸಾಲಿನ ಗೌರವ ಪುರಸ್ಕಾರ ಲಭಿಸಿದೆ.
ಕನರ್ಾಟಕ ಯಕ್ಷಗಾನ ಅಕಾಡಮಿ ಅಧ್ಯಕ್ಷ ಪ್ರೊ. ಎಂ.ಎ. ಹೆಗಡೆ ಸೋಮವಾರ ಪತ್ರಿಕಾಗೋಷ್ಥಿ ನಡೆಸಿ ಪ್ರಶಸ್ತಿ ಪುರಸ್ಕೃತರ ಪಟ್ಟಿ ಬಿಡುಗಡೆ ಮಾಡಿದರು. ಪಾತರ್ಿಸುಬ್ಬ ಪ್ರಶಸ್ತಿಗೆ ಒಂದು ಲಕ್ಷ ರೂ. ಗೌರವ ಧನ, ವಾಷರ್ಿಕ ಗೌರವ ಪ್ರಶಸ್ತಿಗಳಿಗೆ 50 ಸಾವಿರ ರೂ. ಗೌರವ ಧನ ಹಾಗೂ ಪ್ರಶಸ್ತಿ ಫಲಕ, ಪ್ರಮಾಣ ಪತ್ರಗಳನ್ನು ನೀಡಿ ಸನ್ಮಾನಿಸಲಾಗುತ್ತದೆ.
ಬಲಿಪ ನಾರಾಯಣ ಭಾಗವತರ "ಬಲಿಪರ ಜಯಲಕ್ಷ್ಮೀ" (ಪ್ರಸಂಗಗಳ ಸಂಕಲನ), ಪ್ರೊ. ಜಿ.ಎಸ್. ಭಟ್ಟರ "ಯಕ್ಷಗಾನ ಅಂಗೋಪಾಂಗ ಸಮತೋಲನ ವಿಚಾರ" (ಸಂಶೋಧನೆ ಗ್ರಂಥ) ಇವುಗಳನ್ನು ವಿಶೇಷ ಪುಸ್ತಕ ಬಹುಮಾನಕ್ಕಾಗಿ ಆಯ್ಕೆ ಮಾಡಲಾಗಿದೆ. ಈ ಪ್ರಶಸ್ತಿ ತಲಾ 25 ಸಾವಿರ ರೂ. ಗೌರವ ಧನವನ್ನು ಹೊಂದಿರಲಿದೆ.
ಪ್ರಶಸ್ತಿ ಪ್ರಧಾನ ಸಮಾರಂಭ ಇದೇ ಸೆಪ್ಟೆಂಬರ್ ಕಡೆ ವಾರ ಅಥವಾ ಅಕ್ಟೋಬರ್ ಮೊದಲ ವಾರದಲ್ಲಿ ಉಡುಪಿಯಲ್ಲಿ ನಡೆಯಲಿದೆ ಎಂದು ಅಕಾಡೆಮಿ ಅಧ್ಯಕ್ಷರು ತಿಳಿಸಿದ್ದಾರೆ.