HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                   ಹಾವನ್ನು ಎಸೆದು ಪರಾರಿಯಾದ ಭೂಪರು!
  ಬದಿಯಡ್ಕ: ಶನಿವಾರ ಮುಸ್ಸಂಜೆ ಚೆರ್ಕಳ-ಕಲ್ಲಡ್ಕ ರಾಜ್ಯ ಹೆದ್ದಾರಿಯ ಚರ್ಲಡ್ಕ-ನೆಲ್ಲಿಕಟ್ಟೆ ಪರಿಸರದ ವಸತಿ ಪ್ರದೇಶದ ಪರಿಸರದ ರಸ್ತೆಬದಿ ಗೋಣಿ ಚೀಲವೊಂದು ಅಲುಗಾಡುತ್ತಿರುವುದನ್ನು ಗಮನಿಸಿದ ಸ್ಥಳೀಯರು ಗಾಬರಿಗೊಂಡ ಘಟನೆ ನಡೆದಿದೆ.
   ಶನಿವಾರ ಮುಸ್ಸಂಜೆ 6.30ರ ವೇಳೆ ರಸ್ತೆಬದಿ ಗೋಣಿಚೀಲವೊಂದು ಅಲುಗಾಡುತ್ತಿರುವದನ್ನು ಗಮನಿಸಿದ ಸ್ಥಳೀಯರಾದ ವಿನು ಹಾಗೂ ಸುಧೀರ್ ಎಂಬವರು ಹತ್ತಿರ ತೆರಳಲು ಭಯಗೊಂಡು ಬಳಿಕ ಬದಿಯಡ್ಕ ಪೋಲೀಸರಿಗೆ ಮಾಹಿತಿ ನೀಡಿದರು. ಪೋಲೀಸರು ತಕ್ಷಣ ಆಗಮಿಸಿ ಗೋಣಿಚೀಲ ಕಟ್ಟಲ್ಪಟ್ಟ  ಹಗ್ಗ ತುಂಡರಿಸುವಷ್ಟರಲ್ಲಿ ಪೋಲೀಸರೇ ಹೌಹಾರುವಂತೆ ಬೃಹತ್ ಹೆಬ್ಬಾವೊಂದು ಹೊರಕ್ಕೆ ನೆಗೆಯಿತು. ಕುತ್ತಿಗೆಗೆ ಹಗ್ಗ ಬಿಗಿಯಲ್ಪಟ್ಟ ಹೆಬ್ಬಾವು ರಸ್ತೆಯ ಪೊದೆಗಳೆಡೆಯಲ್ಲಿ ಅವಿತಿರಲು ಯತ್ನಿಸಿತು. ಆದರೆ ಅದಕ್ಕೆ ಬಿಗಿಯಲ್ಪಟ್ಟ ಹಗ್ಗವನ್ನು ಹಿಡಿದು ತಪ್ಪಿಸಿಕೊಳ್ಳದಂತೆ ನೋಡಲಾಯಿತು. ಬಳಿಕ ನೆಲ್ಲಿಕಟ್ಟೆಯ ಹಾವು ಹಿಡಿಯುವುದರಲ್ಲಿ ನಿಪುಣರಾದ ವಿಜಯ ನಾಯ್ಕ ಆಗಮಿಸಿ ಹಾವನ್ನು ಮತ್ತೆ ಗೋಣಿಚೀಲದೊಳಗೆ ತುಂಬಿಸಿ ಸುರಕ್ಷಿತವಾಗಿ ಅರಣ್ಯಕ್ಕೆ ಬಿಟ್ಟರು.
   ಎಸೆದವರು ಯಾರು?
   ಜಿಲ್ಲೆಯ ಅಲ್ಲಲ್ಲಿ ಕಳೆದ 4 ತಿಂಗಳುಗಳಿಂದ ಹೆಬ್ಬಾವುಗಳು ದುತ್ತೆಂದು ಕಂಡುಬರುತ್ತಿದ್ದು, ಸ್ಥಳೀಯರು ಸೆರೆಹಿಡಿದು ಅರಣ್ಯ ಇಲಾಖೆಯ ಮೂಲಕ ಅರಣ್ಯಕ್ಕೆ ಸಾಗಿಸಲಾಗುತ್ತದೆ. ಆದರೆ ಶನಿವಾರ ಸಂಜೆ ಅಪರಿಚಿತರು ಯಾರೋ ಹೆಬ್ಬಾವನ್ನು ಸೆರೆಹಿಡಿದು ಗೋಣಿ ಚೀಲದಲ್ಲಿ ತುಂಬಿಸಿ ಪ್ರಧಾನ ರಸ್ತೆ ಬದಿ, ಜನವಸತಿಗಳಿರುವಲ್ಲಿ ಉಪೇಕ್ಷಿಸಿರುವುದು ಕುಟಿಲ ಮನೋಸ್ಥಿತಿಯ ಸಂಕೇತವಾಗಿ ಸಾರ್ವಜನಿಕರ ರೋಶಕ್ಕೆ ಕಾರಣವಾಯಿತು.

    

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries