ಅಕ್ಷರ ದೀಪ-ದೀಪದ ಹಾಡು
ಪೆರ್ಲ: ಸಮಾಜಮುಖೀ ಆಶಯ ಸುಂದರ ಸಮಾಜ ಕಟ್ಟುವುದರೊಂದಿಗೆ ಪ್ರಜ್ಞಾವಂತರನ್ನು ನಿಮರ್ಿಸಬಹುದು. ಸಮಾಜದ ಅಂಕುಡೊಂಕುಗಳನ್ನು ಹೋಗಲಾಡಿಸುವ ಅಂತಹ ಆಶಯಗಳನ್ನು ಕಾಲಾಕಾಲಕ್ಕೆ ನೀಡುವ ಗ್ರಂಥಾಲಯಗಳು ಈ ಮಣ್ಣಿನ ನಿಜವಾದ ಶಿಲ್ಪಿಯಾಗಿದೆ ಎಂದು ಯುವ ಸಾಂಸ್ಕೃತಿಕ ಪ್ರವರ್ತಕ ವಿಷ್ಣುರಮೇಶ್ ಕೊಲ್ಲಂ ಅಭಿಪ್ರಾಯ ವ್ಯಕ್ತಪಡಿಸಿದರು.
ಪೆರ್ಲದ ನೇತಾಜಿ ಸಾರ್ವಜನಿಕ ಗ್ರಂಥಾಲಯ ಇತ್ತೀಚೆಗೆ ಗ್ರಂಥಾಲಯ ದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ ಅಕ್ಷರ ದೀಪ-ದೀಪದ ಹಾಡು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬಲಿಷ್ಠ ಸಮಾಜವನ್ನು ನಿಮರ್ಿಸುವಲ್ಲಿ ಜ್ಞಾನ, ಅರಿವುಗಳು ಪ್ರಧಾನ ಪಾತ್ರವಹಿಸುವವುಗಳಾಗಿದ್ದು, ಗ್ರಂಥಾಲಯಗಳ ಮೂಲಕ ಅದರ ಸಾಕಾರತೆ ಸಾಧ್ಯವಾಗುವುದೆಂದು ಅವರು ತಿಳಿಸಿದರು.
ಸಾಮಾಜಿಕ ಕಾರ್ಯಕರ್ತ ವಿನೋದ್ ಅಮೆಕ್ಕಳ ಅಧ್ಯಕ್ಷತೆ ವಹಿಸಿದ್ದರು. ಮಂಜೇಶ್ವರ ತಾಲೂಕು ಲೈಬ್ರರಿ ಕೌನ್ಸಿಲ್ ಸದಸ್ಯ ಉದಯ ಸಾರಂಗ್ ದೀಪದ ಹಾಡು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಬೆಳಕು ನೀಡುವ ದೀಪ ನಿರಂತರವಾಗಿ ಬೇಧಗಳಿಲದೆ ಬೆಳಕು ನೀಡುವಂತೆ ಜಾತಿ, ಮತ, ಧರ್ಮಗಳ ಗೋಡೆಗಳಿಂದ ಹೊರಬಂದು ಸಾಮಾಜಿಕ ಚಿಂತನೆಗಳ ದೀವಿಗೆಗಳಾಗಬೇಕು ಎಂದು ತಿಳಿಸಿದರು.
ವಿಶ್ವರಾಜ್, ಕೌಶಿಕ್ ಉಪಸ್ಥಿತರಿದ್ದರು. ಕವಯಿತ್ರಿ ಶಮರ್ಿಳಾ ಬಜಕ್ಕೂಡ್ಳು, ಅಶೋಕ್ ಚವಕರ್ಾಡು, ಸುನೀತಾ ಖಂಡಿಗೆ ಬಳಗದವರಿಂದ ದೀಪದ ಹಾಡು ಸಾಂಸ್ಕೃತಿಕ ವೈವಿಧ್ಯ ಗಮನ ಸೆಳೆಯಿತು. ಸಚಿತಾ ರೈ ಸ್ವಾಗತಿಸಿ, ಮಣಿಕಂಠ ವಂದಿಸಿದರು.