ಕವಿ, ಸಾಹಿತಿಗಳನ್ನು ಗೌರವಿಸುವ ಕರ್ತವ್ಯ ಸಮಾಜಕ್ಕಿದೆ-ವಿ.ಬಿ.ಅತರ್ಿಕಜೆ
ಬದಿಯಡ್ಕ: ಸುದೃಢ ಸಮಾಜ ನಿಮರ್ಾಣದಲ್ಲಿ ಸಾಹಿತ್ಯ ಕ್ಷೇತ್ರದ ಕೊಡುಗೆ ಮಹತ್ವಪೂರ್ಣವಾದುದು. ಸಾಹಿತ್ಯ ಕೃತಿಗಳ ಓದುವಿಕೆ ಮತ್ತು ಪ್ರಕಟಣೆಗಳಿಗೆ ಸ್ಪಂಧನ ಇನ್ನಷ್ಟು ಬಲಗೊಳಿಸುವ ನಿಟ್ಟಿನಲ್ಲಿ ಪ್ರಯತ್ನಗಳಾಗಬೇಕು ಮತ್ತು ಯುವ ಸಮೂಹ ಜವಾಬ್ದಾರಿ ವಹಿಸುವ ಅಗತ್ಯವಿದೆ ಎಂದು ನಿವೃತ್ತ ಪ್ರಾಧ್ಯಾಪಕ, ಪತ್ರಕರ್ತ ಪ್ರೊ.ವಿ.ಬಿ.ಅತರ್ಿಕಜೆ ಅಭಿಪ್ರಾಯ ವ್ಯಕ್ತಪಡಿಸಿದರು.
ಬೆಂಗಳೂರಿನ ಕನರ್ಾಟಕ ರಾಜ್ಯ ಯುವ ಬರಹಗಾರರ ಒಕ್ಕೂಟದ ನೇತೃತ್ವದಲ್ಲಿ ಕಾಸರಗೋಡು ಜಿಲ್ಲಾ ಘಟಕದ ಉದ್ಘಾಟನೆಯನ್ನು ಶನಿವಾರ ಅಪರಾಹ್ನ ಪೆರಡಾಲ ನವಜೀವನ ಫ್ರೌಢಶಾಲಾ ಸಭಾಂಗಣದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.
ಹೊಸ ಸಾಮಾಜಿಕ ಕಳಕಳಿಯ ಕೃತಿಗಳು ಮೂಡಿಬರಬೇಕು. ಈ ನಿಟ್ಟಿನಲ್ಲಿ ಯುವ ಸಮೂಹಕ್ಕೆ ಅಗತ್ಯದ ಮಾರ್ಗದರ್ಶನದ ನೀಡುವಲ್ಲಿ ಹಿರಿಯ ಸಾಹಿತಿಗಳು ಕೈಜೋಡಿಸಬೇಕು ಎಂದು ಅವರು ತಿಳಿಸಿದರು. ಬರವಣಿಗೆಯ ಮೂಲಕ ಸಮಾಜ ಕಟ್ಟುವ ಕಾಯಕದ ಜವಾಬ್ದಾರಿಯನ್ನು ಕಡಿದು ಹಾಕಲು ಸಾಧ್ಯವಿಲ್ಲ. ವ್ಯಾಪಕ ಅವಕಾಶಗಳಿರುವ ಸಾಹಿತ್ಯ ಕ್ಷೇತ್ರದ ಬೆಳವಣಿಗೆಗೆ ನಿರಂತರ ಯೋಜನೆಗಳು ರೂಪುಗೊಳ್ಳಬೇಕು. ಗಡಿನಾಡು ಕಾಸರಗೋಡಿನ ಕನ್ನಡ ಅನನ್ಯತೆಯನ್ನು ಉಳಿಸುವ ನಿಟ್ಟಿನಲ್ಲೂ ಯುವ ಬರಹಗಾರರ ಒಕ್ಕೂಟ ಕಾರ್ಯಕ್ರಮ ಆಯೋಜಿಸಬೇಕು ಎಂದು ಅವರು ತಿಳಿಸಿದರು. ಕವಿ, ಸಾಹಿತಿಗಳಿಗೆ ಸ್ಪೂತರ್ಿ, ಬಲ ನೀಡುವ ನಿಟ್ಟಿನಲ್ಲಿ ಸಾಮಾಜಿಕ ಚಿಂತನೆ ಬದಲಾಗಬೇಕು ಎಂದು ಅವರು ಕರೆನೀಡಿದರು.
ಒಕ್ಕೂಟದ ಜಿಲ್ಲಾ ಒಕ್ಕೂಟದ ಅಧ್ಯಕ್ಷೆ ಪ್ರಭಾವತಿ ಕೆದಿಲಾಯ ಪುಂಡೂರು ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ರಾಜ್ಯ ಯುವ ಬರಹಗಾರರ ಒಕ್ಕೂಟದ ಕನರ್ಾಟಕ ರಾಜ್ಯಾಧ್ಯಕ್ಷ ಹೂಹಳ್ಳಿ ನಾಗರಾಜ್ ಮುಖ್ಯ ಅತಿಥಿಗಳಾಗಿ ಮಾತನಾಡಿ, ಯುವ ಬರಹಗಾರರ ಒಕ್ಕೂಟವು ಸಾಹಿತ್ಯ ಕ್ಷೇತ್ರದ ಸಮಗ್ರ ಅಭಿವೃದ್ದಿಗೆ ಮುಂದಾಗಿದ್ದು, ನವಂಬರ್ 1ರ ಕನ್ನಡಾಭಿಮಾನಿಗಳಾಗದೆ ನಂ.1 ಕನ್ನಡಿಗರಾಗಿಯೇ ಮುನ್ನಡೆಯುವುದು ನಮ್ಮ ಲಕ್ಷ್ಯವಾಗಿರಬೇಕು ಎಂದು ತಿಳಿಸಿದರು. ಯುವ ಬರಹಗಾರರ ಒಕ್ಕೂಟ ಈಗಾಗಲೇ ಕನರ್ಾಟಕ ರಾಜ್ಯದ ಹೊರತಾಗಿ ಗಡಿನಾಡಿನಲ್ಲಿ ಘಟಕಗಳನ್ನು ಹೊಂದಿದೆ.ಜೊತೆಗೆ ವಿದೇಶ ರಾಜ್ಯಗಳಾದ ಕಾಲಿಪೋನರ್ಿಯಾ, ಜರ್ಮನಿ, ಮಲೇಶ್ಯಾ, ಬ್ಯಾಂಕೋಕ್ ಗಳಲ್ಲೂ ಕನ್ನಡಿಗರನ್ನು ಒಗ್ಗೂಡಿಸಿ ಘಟಕ ರಚಿಸಲಾಗಿದೆ ಎಂದು ತಿಳಿಸಿದರು.
ಕಸಾಪ ಕೇರಳ ಗಡಿನಾಡ ಘಟಕಾಧ್ಯಕ್ಷ ಎಸ್.ವಿ.ಭಟ್, ಧಾಮರ್ಿಕ ಲೇಖಕಿ ಸುಗುಣಾ ಬಿ.ತಂತ್ರಿ ದೇಲಂಪಾಡಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದರು.
ಒಕ್ಕೂಟದ ಕಾಸರಗೋಡು ತಾಲೂಕು ಘಟಕಾಧ್ಯಕ್ಷ ವಿರಾಜ್ ಅಡೂರು, ಮಂಜೇಶ್ವರ ತಾಲೂಕು ಘಟಕಾಧ್ಯಕ್ಷೆ ಚೇತನಾ ಕುಂಬಳೆ ಉಪಸ್ಥಿತರಿದ್ದರು. ಶ್ಯಾಮಲಾ ರವಿರಾಜ್ ಕುಂಬಳೆ ಸ್ವಾಗತಿಸಿ, ಕಾಸರಗೋಡು ತಾಲೂಕು ಘಟಕ ಕಾರ್ಯದಶರ್ಿ ಶ್ರೀಶಕುಮಾರ್ ಪಂಜಿತ್ತಡ್ಕ ವಂದಿಸಿದರು. ಜಿಲ್ಲಾ ಒಕ್ಕೂಟದ ಕಾಯರ್ಾಧ್ಯಕ್ಷ ಜಯ ಮಣಿಯಂಪಾರೆ ಕಾರ್ಯಕ್ರಮ ನಿರೂಪಿಸಿದರು.ಜಯಶ್ರೀ ಅನಂತಪುರ ಪ್ರಾರ್ಥನಾ ಗೀತೆ ಹಾಡಿದರು.
ಬಳಿಕ ಹಿರಿಯ ಸಾಹಿತಿ ರಾಧಾಕೃಷ್ಣ ಉಳಿಯತ್ತಡ್ಕ ಅವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಿತು. ಹಿರಿಯ ಶಿಕ್ಷಣ ತಜ್ಞ ವಿ.ಬಿ.ಕುಳಮರ್ವ ಉದ್ಘಾಟಿಸಿದರು. ಶ್ರೀಕೃಷ್ಣಯ್ಯ ಅನಂತಪುರ, ದೇವರಾಜ್ ಆಚಾರ್ಯ ಕುಂಬಳೆ, ಶ್ವೇತಾ ಕಜೆ, ಲತಾ ಆಚಾರ್ಯ ಬನಾರಿ, ಕೆ.ನರಸಿಂಹ ಭಟ್ ಏತಡ್ಕ, ದಯಾನಂದ ರೈ ಕಳ್ವಾಜೆ, ಮಣಿರಾಜ್ ವಾಂತಿಚ್ಚಾಲ್ ಹರೀಶ್ ಪೆರ್ಲ ಮೊದಲಾದವರು ಭಾಗವಹಿಸಿದರು.