HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                 ಕೆಡೆಂಜಿ ಶ್ರೀ ಮಹಾವಿಷ್ಣು ದೇವಾಲಯದಲ್ಲಿ ಕೃಷ್ಣ ಗಾಥ ಪಾರಾಯಣ ಸಮಾಪ್ತಿ.
    ಬದಿಯಡ್ಕ: ಕೆಡೆಂಜಿ ಶ್ರೀ ಮಹಾ ವಿಷ್ಣು ದೇವಾಲಯದಲ್ಲಿ ಒಂದು ತಿಂಗಳಿನಿಂದ ನಡೆಯುತ್ತಿರುವ ಶ್ರೀ ಕೃಷ್ಣ ಗಾಥಾ ಪಾರಾಯಣವು ಸೋಮವಾರ   ಸಂಜೆ ಸಮಾಪ್ತಿಗೊಂಡಿತು.
  ವಿಷ್ಣುಪ್ರಿಯ ಭಜನಾ ಸಂಘ ಕೆಡೆಂಜಿ ಇದರ ನೇತೃತ್ವದಲ್ಲಿ ಪ್ರತೀ ದಿನ ಸಂಜೆ ಸುಮಾರು ಒಂದೂವರೆ ಗಂಟೆಗಳ ಕಾಲ ಕೃಷ್ಣ ಗಾಥಾ ಪಾರಾಯಣವನ್ನು ಶ್ರೀ ರಾಮ ಮಾಸ್ತರ್ ಇಕ್ಕೇರಿ ಇವರು ನಡೆಸುತ್ತಿದ್ದರು. ಶ್ರೀ ಕೃಷ್ಣ ಹುಟ್ಟಿದ ಶ್ರಾವಣ ಮಾಸದಲ್ಲಿ ಕೇರಳದ ತೆಂಕಣ ಭಾಗದ ದೇವಾಲಯಗಳಲ್ಲಿ ಕೃಷ್ಣ ಗಾಥಾ ಪಾರಾಯಣವನ್ನು ನಡೆಸುತ್ತಾರೆ. ಆದರೆ ಕಾಸರಗೋಡು ಜಿಲ್ಲೆಯಲ್ಲಿ ಪ್ರತ್ಯೇಕವಾಗಿ ಬದಿಯಡ್ಕದಲ್ಲಿ ಇದು ಪ್ರಥಮ ಎಂದು ರಾಮ ಮಾಸ್ತರ್ ತಿಳಿಸಿದ್ದಾರೆ. ಕನ್ನಡದಲ್ಲಿ ಜೈಮಿನಿ ಭಾರತ ಪಾರಾಯಣ ನಡೆಸಿದರೆ ಮಲಯಾಳದಲ್ಲಿ ಕೃಷ್ಣ ಗಾಥಾ ಎನ್ನುತ್ತಾರೆ.
    ಸಮಾರೋಪದಲ್ಲಿ ಉಪಸ್ಥಿತರಿದ್ದ ಭಜನಾ ಸಂಘದ ಕಾರ್ಯದಶರ್ಿ ಶ್ರೀ ಈಶ್ವರ ಮಾಸ್ತರ್ ಪೆರಡಾಲ 'ಕೃಷ್ಣ ಗಾಥಾ ಪಾರಾಯಣವನ್ನು ಕೇಳುವುದರಿಂದ ಮನಸ್ಸು ಚಂಚಲತೆಯನ್ನು ಬಿಟ್ಟು ಏಕಾಗ್ರತೆಗೊಳ್ಳುತ್ತದೆ. ಮನಃಶಾಂತಿ ಲಭಿಸುತ್ತದೆ' ಎಂದು ನುಡಿದರು.
      ರಾಮ ಮಾಸ್ತರ್ ಇಕ್ಕೇರಿ ಇವರು ಕಳೆದ 23 ವರ್ಷಗಳಿಂದ ರಾಮಾಯಣ ಪಾರಾಯಣ ಹಾಗೂ ಕೃಷ್ಣ ಗಾಥಾ ಪಾರಾಯಣವನ್ನು ಮಾಡುತ್ತಿದ್ದಾರೆ. ಸಮಾರೋಪದ ಅಂಗವಾಗಿ ರಾಮ ಮಾಸ್ತರ್ ಅವರಿಗೆ ಶ್ರೀ ಕೃಷ್ಣನ ವಿಗ್ರಹವನ್ನು ನೀಡಿ ಈಶ್ವರ ಮಾಸ್ತರ್ ಪೆರಡಾಲ ಇವರು ಗೌರವಿಸಿದರು.
   

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries