ಹೊಸ ಅತಿಥಿ-ಗಾಯಗೊಂಡು ಬಿದ್ದ ಹಕ್ಕಿಗೆ ಮರು ಜೀವ
ಬದಿಯಡ್ಕ: ನೀಚರ್ಾಲು ಸಮೀಪದ ಬೇಳ ವಿಷ್ಣುಮೂತರ್ಿ ನಗರದಲ್ಲಿ ಅಪರೂಪದ ಗೂಬೆಯಂತಹ ಹಕ್ಕಿಯೊಂದು ಶನಿವಾರ ಬೆಳಿಗ್ಗೆ ಕೆಳಬಿದ್ದು ನೋವಲ್ಲಿ ತೊಳಲಾಡುತ್ತಿದ್ದುದು ಕಂಡುಬಂದಿದ್ದು, ಗಾಯಗೊಂಡ ಗೂಬೆಯನ್ನು ಸಾರ್ವಜನಿಕರು ಉಪಚರಿಸಿ ಮಾನವೀಯತೆ ಮೆರೆದ ಘಟನೆ ನಡೆದಿದೆ.
ಶನಿವಾರ ಬೇಳ ತಾಂತ್ರಿಕ ವಿದ್ಯಾಲಯದ ಎದುರು ಭಾಗದಲ್ಲಿ ರಸ್ತೆ ಬದಿ ವಿಶಿಷ್ಟ ಹಕ್ಕಿಯೊಂದು ಬಿದ್ದಿರುವುದು ಗಮನಕ್ಕೆ ಬಂದಿತ್ತು. ವಿಷಯ ತಿಳಿದು ತಕ್ಷಣ ಆಗಮಿಸಿದ ಸ್ಥಳೀಯ ನಿವಾಸಿ, ಚಿತ್ರಕಲಾ ಶಿಕ್ಷಕ ಜಯಪ್ರಕಾಶ್ ಶೆಟ್ಟಿ ಬೇಳ ಮತ್ತು ಸ್ನೇಹಿತರು ಆರೈಕೆ ಮಾಡಿದ್ದು, ಸ್ವಲ್ಪ ಚೇತರಿಸಿಕೊಂಡಂತೆ ಕಂಡುಬಂತು. ಈ ಬಗ್ಗೆ ಜಯಪ್ರಕಾಶ್ ಶೆಟ್ಟಿ ಬದಿಯಡ್ಕ ಪೋಲೀಸರಿಗೆ ಮಾಹಿತಿ ನೀಡಿದ್ದು, ಪೋಲೀಸರು ಅರಣ್ಯ ಇಲಾಖೆಗೆ ಮಾಹಿತಿ ನೀಡಲು ನಿದರ್ೇಶಿಸಿದರು. ಆದರೆ ಕ್ಲಪ್ತ ಸಮಯಕ್ಕೆ ಅರಣ್ಯ ಇಲಾಖೆಯ ಸಂಬಂಧಪಟ್ಟವರು ಸಂಪರ್ಕಕ್ಕೆ ಲಭ್ಯವಾಗದ್ದರಿಂದ ಬಳಿಕ ನಾಗರಿಕರು ಒಟ್ಟು ಸೇರಿ ಹೆಚ್ಚಿನ ಚಿಕಿತ್ಸೆಗೆ ತಳಂಗರೆ ವೆಟರ್ನರಿ ಆಸ್ಪತ್ರೆಗೆ ದಾಖಲು ಮಾಡಿರುವರು.