ಇದು ಹೊಸತು-ಮಹಿಳೆಯರಂತೆ ಪುರುಷರಿಗೂ ರಾಷ್ಟ್ರೀಯ ಆಯೋಗ ಬೇಕು: ಬಿಜೆಪಿ ಸಂಸದ
ನವದೆಹಲಿ: ಭಾರತೀಯ ಜನತಾ ಪಾಟರ್ಿಯ (ಬಿಜೆಪಿ) ಲೋಕಸಭಾ ಸದಸ್ಯರೊಬ್ಬರು ಪತ್ನಿಯಿಂದ ಪೀಡನೆಗೊಳಗಾದ ಪುರುಷರಿಗಾಗಿ ರಾಷ್ಟ್ರೀಯ ಪುರುಷರ ಆಯೋಗ ರಚನೆಯಾಗಬೇಕು ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಉತ್ತರ ಪ್ರದೇಶದ ಬಿಜೆಪಿ ಸಂಸದ ಹರಿನಾರಾಯಣ್ ರಾಜ್ ಭರ್ ಈ ಅಭಿಪ್ರಾಯ ವ್ಯಕ್ತಪಡಿಸಿದ್ದು ಪುರುಷರ ಶಾಸನಬದ್ಧ ಸಂಸ್ಥೆ ಸಹ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಸಮನಾದ ಸ್ಥಾನ ಹೊಂದಿರಬೇಕು ಎಂದು ಒತ್ತಾಯಿಸಿದ್ದಾರೆ.
ರಾಷ್ಟ್ರೀಯ ಮಹಿಳಾ ಆಯೋಗದಂತೆಯೇ ಪುರುಷರ ಆಯೋಗವನ್ನೂ ರಚಿಸಬೇಕು.ನೊಂದ ಪುರುಷರಿಗೆ ಸಹ ಒಂದು ವೇದಿಕೆಯ ಅಗತ್ಯವಿದೆ. ಪ್ರಸ್ತುತ ಸಮಯದಲ್ಲಿ, ಪುರುಷರು ತಮ್ಮ ಹೆಂಡತಿಯರ ಬಳಿ ಎದುರಿಸುವ ಕಷ್ಟಗಳಿಗೆ ಪರಿಹಾರ ಸೂಚಿಸಲು ಯಾವುದೇ ಶಾಸನಬದ್ದ ಸಂಸ್ಥೆಗಳಿಲ್ಲ ಎಂದು ಎ ಎನ್ ಐಗೆ ನಿಡಿದ ಸಂದರ್ಶನದಲ್ಲಿ ರಾಜ್ ಭರ್ ಹೇಳಿದ್ದಾರೆ.
ಕಳೆದ ತಿಂಗಳು ನಡೆದ ಮಾನ್ಸೂನ್ ಅಧಿವೇಶನದಲ್ಲಿ ರಾಜ್ ಭರ್ ಈ ಪ್ರಸ್ತಾಪವನ್ನಿತ್ತಿದ್ದರು. ಇದರ ಬಳಿಕ ಅವರು ದೇಶಾದ್ಯಂತದ ಪುರುಷ ಸಮುದಾಯದ ವ್ಯಾಪಕ ಬೆಂಬಲ ಗಳಿಸಿಕೊಂಡಿದ್ದಾರೆ ಎಂದು ಅವರು ಹೇಳಿದರು.
ನಾನು ದೇಶದ ವಿವಿಧ ಭಾಗಗಳಿಂದ 5000 ಕ್ಕಿಂತ ಹೆಚ್ಚು ಸಂದೇಶಗಳನ್ನು ಪಡೆದಿದ್ದೇನೆ, ವಿದೇಶದಲ್ಲಿ ನೆಲೆಸಿದವರಲ್ಲಿ ಸಹ ಕೆಲವರು ಕಲ್ಪನೆಯನ್ನು ಬೆಂಬಲಿಸಿದರು ಮತ್ತು ಶಾಸನಬದ್ಧ ಆಯೋಗ ರಚನೆಗೆ ಸೂಚಿಸಿದ್ದಾರೆ ಅವರು ಹೇಳಿದರು.