HEALTH TIPS

ಯಾವುದೇ ಶೀರ್ಷಿಕೆಯಿಲ್ಲ

   ನೆರವಿನ ಆಶಯದೊಂದಿಗೆ ನೀಚರ್ಾಲಿನಲ್ಲಿ ಇಂದು "ಕದಿರೆದ ಕಾಂಚನ" ಯಕ್ಷಗಾನ ಬಯಲಾಟ
  ಬದಿಯಡ್ಕ: ಸಮಾಜದಲ್ಲಿ ಸಂಕಷ್ಟಕ್ಕೊಳಗಾಗಿರುವ ಜನರನ್ನು ಗುರುತಿಸಿ, ಅವರಿಗೆ ನೆರವು ನೀಡುವ ಉದ್ದೇಶಗಳೊಂದಿಗೆ ಯಕ್ಷಮಿತ್ರರು ನೀಚರ್ಾಲು ನೇತೃತ್ವದಲ್ಲಿ ಯಕ್ಷತುಳು ಪರ್ಬ ಮಂಗಳೂರು ಮತ್ತು ಅತಿಥಿ ಕಲಾವಿದರುಗಳ ಕೂಡುವಿಕೆಯಲ್ಲಿ ಇಂದು(ಸೆ.30) ಮಧ್ಯಾಹ್ನ 1 ರಿಂದ ನೀಚರ್ಾಲು ಶಾಲಾ ವಠಾರದಲ್ಲಿ ಗೆಜ್ಜೆದ ಪೂಜೆ ಖ್ಯಾತಿಯ ಡಿ.ಮನೋಹರ್ ಕುಮಾರ್ ವಿರಚಿತ "ಕದಿರೆದ ಕಾಂಚನ" ಯಕ್ಷಗಾನ ಬಯಲಾಟ ಆಯೋಜಿಸಲಾಗಿದೆ.
   ದಶಕಗಳ ಹಿಂದೆ ದಕ್ಷಿಣ ಕನ್ನಡ-ಉಡುಪಿ-ಕಾಸರಗೋಡು ಜಿಲ್ಲೆಗಳಲ್ಲಿ ಜನಜನಿತ ಪ್ರಸಂಗವಾಗಿ, ಪ್ರೇಕ್ಷಕರ ಮನಗೆದ್ದಿದ್ದ ಕುತೂಹಲ ಕಥಾನಕವಾದ ಕದಿರೆದ ಕಾಂಚನ ಯಕ್ಷಪ್ರಸಂಗದ ಹಿಮ್ಮೇಳದಲ್ಲಿ ಕಡಬ ರಾಮಚಂದ್ರ ರೈ, ಪಟ್ಲ ಸತೀಶ ಶೆಟ್ಟಿ, ರವಿಚಂದ್ರ ಕನ್ನಡಿಕಟ್ಟೆ, ಜಯರಾಮ ಅಡೂರು(ಭಾಗವತರುಗಳು), ವಿನಯ ಆಚಾರ್ಯ ಕಡಬ, ಹರೀಶ್ ಆಚಾರ್ಯ(ಮದ್ದಳೆ), ಅಡೂರು ಲಕ್ಷ್ಮೀನಾರಾಯಣ ರಾವ್, ಪ್ರಕಾಶ್ ವಿಟ್ಲ,ಪ್ರಶಾಂತ್ ವಗೆನಾಡು(ಚೆಂಡೆ),ಹಾಗೂ ಮುಖ್ಯಪ್ರಾಣ ಕಿನ್ನಿಗೋಳಿ, ಕಡಬ ದಿನೇಶ್ ರೈ, ಪ್ರಜ್ವಲ್ ಕುಮಾರ್, ದಿನೇಶ್ ಕೋಡಪದವು, ವಿ.ಕೆ.ಜೈನ್ ವಾಮದಪದವು(ಹಾಸ್ಯ), ಅಂಬಾ ಪ್ರಸಾದ್ ಪಾತಾಳ, ಅಕ್ಷಯಕುಮಾರ್ ಮಾನರ್ಾಡು, ಶ್ರೀಧರ ಮಲ್ಲೂರು, ರವಿಚಂದ್ರ ಚೆಂಬು(ಸ್ತ್ರೀವೇಶ)ಪಾತ್ರಗಳಲ್ಲಿ ಸಹಕರಿಸುವರು.
   ಮುಮ್ಮೇಳದಲ್ಲಿ ಕೆ.ಎಚ್.ದಾಸಪ್ಪ ರೈ, ಡಿ.ಮನೋಹರ ಕುಮಾರ್, ಸರಪಾಡಿ ಅಶೋಕ ಶೆಟ್ಟಿ, ವಿಶ್ವನಾಥ ರೈ ಬೆಳ್ಳಾರೆ, ಜನಾರ್ಧನ ಗುಡಿಗಾರ್, ಪೆರ್ಲ ಜಗನ್ನಾಥ ರೈ, ವಿನೋದ್ ರೈ ಸೊರಕೆ, ಸಂತೋಷ್ ಕುಮಾರ್ ಮಾನ್ಯ, ತಿಲಕ್ ಹೆಗ್ಡೆ, ನಾಗಪ್ಪ ಪಡುಮಲೆ, ಕೃಷ್ಣ ರೈ ನೀಚರ್ಾಲು, ರಾಹುಲ್ ಶೆಟ್ಟಿ ಕುಡ್ಲ, ಕೃಷ್ಣಕುಮಾರ್ ಗೋಣಿಬೀಡು, ಪ್ರಕಾಶ್ ನೀಚರ್ಾಲು, ರವಿ ಇರ್ವತ್ತೂರು ವಿವಿಧ ಪಾತ್ರಗಳ ಮೂಲಕ ಕಥಾನಕವನ್ನು ಬಿಚ್ಚಿಟ್ಟು ಪ್ರೇಕ್ಷಕರ ಮನತಣಿಸುವರು. ಯಕ್ಷಗಾನ ಕಲಾವಿದ ಶಬರೀಶ ಮಾನ್ಯ ಅವರ ಸಂಯೋಜನೆಯ ಯಕ್ಷಗಾನ ಪ್ರದರ್ಶನಕ್ಕೆ 500/,300/ ಹಾಗೂ 200/ ರೂ.ಗಳ ಪ್ರವೇಶ ಶುಲ್ಕ ನಿಗದಿಪಡಿಸಲಾಗಿದ್ದು, ಸಹೃದಯ ಪ್ರೇಕ್ಷಕರ ಸಹಕಾರದೊಂದಿಗೆ ಉಳಿಕೆಯ ಮೊತ್ತ ಆಶ್ರಿತರ ನೆರವಿಗಾಗಿ ನೀಡಲಾಗುವುದು.ಹೆಚ್ಚಿನ ಮಾಹಿತಿಗೆ 9633281391, 9946579564, 9846727269 ಸಂಪರ್ಕ ಸಂಖ್ಯೆಯನ್ನು ಸಂಪಕರ್ಿಸಬಹುದಾಗಿದೆ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries