HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                  ಹೊಸಂಗಡಿಯಲ್ಲಿ ರಂಜಿಸಿದ  ಸಿನಿ ಸಂಭ್ರಮ
    ಮಂಜೇಶ್ವರ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಚಿತ್ರವು ಕನ್ನಡ ಪರ ಹೋರಾಟಕ್ಕೆ ಪ್ರೋತ್ಸಾಹ ನೀಡಿದ್ದು ಹೊಸಂಗಡಿಯ ಚಕ್ರವತರ್ಿ ಸಂಸ್ಥೆ ಈ ಸಿನಿಮಾ ಕಲಾವಿದರನ್ನು ಗೌರವಿಸುವ ಮೂಲಕ ಪ್ರತಿಭಾವಂತರಿಗೆ ಪ್ರೋತ್ಸಾಹ ನೀಡಿದಂತಾಗಿದೆ ಎಂದು ಧಾಮರ್ಿಕ ಮುಂದಾಳು ಶ್ರೀಕೃಷ್ಣ ಶಿವಕೃಪಾ ಕುಂಜತ್ತೂರು  ನುಡಿದರು.
   ಅವರು ಹೊಸಂಗಡಿ ಜಂಕ್ಷನ್ನಲ್ಲಿ ಮಂಜೇಶ್ವರ ಶ್ರೀ ಗಣೇಶೋತ್ಸವದ ವೈಭವದ ವಿಸರ್ಜನಾ ಮೆರವಣಿಗೆಯ ಶೋಭಯಾತ್ರೆಯಲ್ಲಿ ಚಕ್ರವತರ್ಿ ಹೊಸಂಗಡಿ ಸಂಸ್ಥೆಯ 38ನೇ ವರ್ಷದ ವಾಷರ್ಿಕೋತ್ಸವದ ಅಂಗವಾಗಿ ತೆರೆದ ಆಲಂಕೃತ ವಾಹನದಲ್ಲಿ ನಡೆದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು- ಕೊಡುಗೆ ರಾಮಣ್ಣ ರೈ ಎಂಬ ಚಲನಚಿತ್ರದ ಸಿನಿ ಸಂಭ್ರಮ ಕಾರ್ಯಕ್ರಮವನ್ನು ಉಧ್ಘಾಟಿಸಿ ಮಾತನಾಡಿದರು.
   ಸಭೆಯ ಅಧ್ಯಕ್ಷತೆಯನ್ನು ಸಂಸ್ಥೆಯ ಗೌರವಾಧ್ಯಕ್ಷ ಅನಿಲ್ ರಾಜ್ ಅಂಗಡಿಪದವು ವಹಿಸಿದರು. ಮಂಜೇಶ್ವರ ಶ್ರೀ ಗಣೇಶೋತ್ಸವ ಸಮಿತಿ ಉಪಾಧ್ಯಕ್ಷ ನ್ಯಾಯವಾದಿ ನವೀನ್ರಾಜ್ ಕೆ.ಜೆ ಹೊಸಂಗಡಿ, ಹೊಸಂಗಡಿ ಶ್ರೀ ಅಯ್ಯಪ್ಪ ಕ್ಷೇತ್ರದ ಸೇವಾ ಸಮಿತಿ ಪ್ರಧಾನ ಕಾರ್ಯದಶರ್ಿ ಆದಶರ್್ ಬಿ. ಎಮ್, ಸಾಮಾಜಿಕ ಕಾರ್ಯಕರ್ತ ಸಂಕಬೈಲ್ ಸತೀಶ್ ಅಡಪ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದು, ಚಲನಚಿತ್ರದ ಬಗ್ಗೆ ಮಾತನಾಡಿ ಮೆಚ್ಚುಗೆ ಸೂಚಿಸಿ ಚಿತ್ರ ತಂಡಕ್ಕೆ ಹಾಗೂ ಕಲಾವಿದರಿಗೆ ಶುಭ ಹಾರೈಸಿದರು. ಚಲನಚಿತ್ರ ತಂಡದ ಪರವಾಗಿ ಸಹ ನಿಮರ್ಾಪಕ ಹಾಗೂ ನಟ ಪ್ರದೀಪ್ ಆಳ್ವ ಕದ್ರಿ, ನಾಯಕಿ ನಟಿ ಸಪ್ತ ಪಾವೂರು, ಪ್ರಕಾಶ್ ತೂಮಿನಾಡು, ನಾಗರಾಜ ಪದಕಣ್ಣಾಯ, ಯೋಗಿಶ್ ಶೆಟ್ಟಿ ಕಡಂಬಾರ್ ಮೊದಲಾದವರು ತಮ್ಮ ಅನಿಸಿಕೆಗಳನ್ನು ವ್ಯಕ್ತ ಪಡಿಸಿದರು. ಈ ಸಂದರ್ಭದಲ್ಲಿ ಚಿತ್ರ ಕಲಾವಿದರನ್ನು ಸಂಸ್ಥೆಯ ವತಿಯಿಂದ ಶಾಲು ಹೊದೆಸಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು. ರಫೀಕ್ ಪ್ಲೆಕ್ಸ್ ಪಾಯಿಂಟ್ ಹೊಸಂಗಡಿ, ಫ್ರೆಂಡ್ಸ್ ಅರೆಂಜರ್ಸ್, ಮಂಜೇಶ್ವರದ ಲಕ್ಷಣ ಭಕ್ತ, ವರ್ಣ ಆಟ್ಸರ್್ ಕಲ್ಲಡ್ಕದ ಜಗದೀಶ್ರವರನ್ನು ಸಂಸ್ಥೆಯ ವತಿಯಿಂದ ಅಭಿನಂದಿಸಲಾಯಿತು. ಚಕ್ರವತರ್ಿ ಹೊಸಂಗಡಿ ಸಂಸ್ಥೆಯ ಅಧ್ಯಕ್ಷ ಹರೀಶ್ ಮಜಾಲು, ಉಪಾಧ್ಯಕ್ಷ ಶಿವಪ್ರಸಾದ್ ಪೆಲಪ್ಪಾಡಿ, ಪ್ರಧಾನ ಕಾರ್ಯದಶರ್ಿ ಸುರೇಶ್ ಗಾಣಿಂಜಾಲು ಕೋಶಾಧಿಕಾರಿ ದಿನೇಶ್  ಅಂಗಡಿಪದವು, ಪಧಾದಿಕಾರಿಗಳಾದ ಪ್ರದೀಪ್ ಗೋಳಿಯಡಿ, ಸತೀಶ್ ಕನಿಲ, ಸುರೇಂದ್ರ ಅಂಗಡಿಪದವು, ಸತೀಶ್ ಶಕ್ತಿನಗರ, ಸುನಿಲ್ ಹೊಸಂಗಡಿ, ಲೋಕೇಶ್ ಮಜಾಲು ಸಂತೋಷ್ ಪೆಲಪ್ಪಾಡಿ ಸಾಧುಕಿರಣ್, ರವಿ ಮಾಸ್ಟರ್, ತಾರನಾಥ ಅಂಗಡಿಪದವು, ಯೋಗೀಶ್ ಮೊರತ್ತಣೆ, ಸವಿರಾಜ್, ಮನೋಜ್, ಪ್ರವೀಣ್, ಅಶೋಕ, ರಾಜೇಶ್ ಮಜಿಬೈಲ್, ಚೇತನ್ ಸಹಿತ ಸಂಸ್ಥೆಯ ಸದಸ್ಯರು ಉಪಸ್ಥಿತರಿದ್ದರು. ಜಯ ಮಣಿಯಂಪಾರೆ ಸ್ವಾಗತಿಸಿ, ಪ್ರಸ್ತಾವಿಕ ಮಾತುಗಳನ್ನಾಡಿ, ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ಸದಸ್ಯ ರತನ್ ಕುಮಾರ್ ಹೊಸಂಗಡಿ ವಂದಿಸಿದರು.

  

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries