ಸಾಹಿತ್ಯ ಬರಹಗಳು ಕಾಲಘಟ್ಟದ ದಿಕ್ಸೂಚಿ-ಡಾ.ಬನಾರಿ
ಚಾತುಮರ್ಾಸ್ಯ ಸಾಂಸ್ಕೃತಿಕ ಸಂಜೆಯಲ್ಲಿ ಕಾವ್ಯ-ಹಾಸ್ಯ ಸೌರಭ ಅಧ್ಯಕ್ಷತೆ ವಹಿಸಿ ಹೇಳಿಕೆ
ಬದಿಯಡ್ಕ: ಕಾವ್ಯ ಕಟ್ಟುವ ಪ್ರಕ್ರಿಯೆಯು ನೂಲಿನೆಳೆಯ ನಡೆಯಾಗಿದ್ದು, ಭೂತ-ವರ್ತಮಾನ-ಭವಿಷ್ಯತ್ತಿನ ನೋಟಗಳೊಂದಿಗೆ ಸಾರ್ವಕಾಲಿಕ ಮೌಲ್ಯಗಳಿಂದೊಡಗೂಡಿ ಸಮೃದ್ದ ಸಮಾಜ ಕಟ್ಟುವ ಶಕ್ತಿ ಹೊಂದಿರುತ್ತದೆ. ಕವಿತೆ ಹುಟ್ಟುವ ಹೊತ್ತಿಗೆ ಕವಿಯೊಬ್ಬನ ಸೊತ್ತಾಗಿರುವ ಅದು ಬಳಿಕ ಸಾರ್ವಜನಿಕವಾಗುವುದರಿಂದ ಕವಿಗೆ ಸೂಕ್ಷ್ಮ ಪ್ರಜ್ಞೆ ಅಗತ್ಯ ಎಂದು ಹಿರಿಯ ವೈದ್ಯ, ಸಾಹಿತಿ ಡಾ.ರಮಾನಂದ ಬನಾರಿ ಅಭಿಪ್ರಾಯ ವ್ಯಕ್ತಪಡಿಸಿದರು.
ಶ್ರೀಮದ್ ಎಡನೀರು ಮಠಾಧೀಶ ಶ್ರೀಕೇಶವಾನಂದ ಭಾರತೀ ಶ್ರೀಗಳ 58ನೇ ಚಾತುಮರ್ಾಸ್ಯದ ಅಂಗವಾಗಿ ಶುಕ್ರವಾರ ಸಂಜೆ ಶ್ರೀಮಠದ ಸಭಾಂಗಣದಲ್ಲಿ ವಿಶೇಷವಾಗಿ ಆಯೋಜಿಸಲಾಗಿದ್ದ ಕಾವ್ಯ-ಹಾಸ್ಯ ಸೌರಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗಡಿನಾಡು ಕಾಸರಗೋಡು ಸಾಹಿತ್ತಿಕವಾಗಿ ಸಮೃದ್ದವಾದ ನೆಲವಾಗಿದ್ದು, ಜನಸಾಮಾನ್ಯರನ್ನು ಕ್ರಿಯಾತ್ಮಕತೆಯೆಡೆಗೆ ಪ್ರಚೋಧಿಸುವ ಶಕ್ತಿ ಸಾಹಿತ್ಯಕ್ಕಿದೆ. ಒಂದೊಂದು ಓದಿಗೂ ವ್ಯತ್ಯಸ್ತ ಅರ್ಥ ನೀಡುವ ಸಾಹಿತ್ಯ ಬರಹಗಳು ಆಯಾ ಕಾಲಘಟ್ಟದ ಜನ ಜೀವನದ ನಾಡಿಮಿಡಿತಗಳನ್ನು ಅಥರ್ೈಸಿ ದಿಕ್ಸೂಚಿಯಾದಾಗ ಸಾರ್ಥಕತೆ ಮೂಡುತ್ತದೆ ಎಂದು ಅವರು ತಿಳಿಸಿದರು.
ಆಧುನಿಕ ಜೀವನ ಶೈಲಿಯ ಮಧ್ಯೆ ಹದಗೆಟ್ಟಿರುವ ಆರೋಗ್ಯಗಳನ್ನು ಸಮಸ್ಥಿತಿಗೆ ತರುವಲ್ಲಿ ಹಾಸ್ಯ ಪ್ರಜ್ಞೆ ಬೆಳೆಯಬೇಕು. ಗಂಭೀರತೆಯಿಂದಾಚೆ ನಗುವ ಪರಿಸರ-ಪ್ರಪಂಚ ಗೆಲುವಿನ ಭವಿಷ್ಯಕ್ಕೆ ಪೂರಕವಾಗಿರುತ್ತದೆ ಎಂದು ಅವರು ತಿಳಿಸಿದರು. ನಿತ್ಯ ಬದುಕಿನ ಆಗು-ಹೋಗುಗಳಲ್ಲಿ ಬಂದು ಮರೆಯಾಗುವ ಹಾಸ್ಯ ವಿಚಾರಗಳನ್ನು ಅಂತರಂಗದೊಳಗೆ ಗ್ರಹಿಸುವ ಮೂಲಕ ಅಂತಃಕರಣದ ಶುದ್ದಿಗೆ ಸಾಧ್ಯವಾಗುವುದೆಂದು ಅವರು ಈ ಸಂದರ್ಭ ತಿಳಿಸಿದರು.
ಸಮಾರಂಭದಲ್ಲಿ ಕವಿಗಳಾದ ಡಾ.ವಸಂತಕುಮಾರ ಪೆರ್ಲ, ಡಾ.ರಾಧಾಕೃಷ್ಣ ಬೆಳ್ಳೂರು, ಎಸ್.ವಿ.ಭಟ್ ಕಾಸರಗೋಡು, ರಾಧಾಕೃಷ್ಣ ಕೆ.ಉಳಿಯತ್ತಡ್ಕ, ಟಿ.ಎನ್.ಎ.ಖಂಡಿಗೆ, ವಿಜಯಲಕ್ಷ್ಮೀ ಶಾನುಭೋಗ್, ಡಾ.ನರೇಶ್ ಮುಳ್ಳೇರಿಯ, ಹರೀಶ್ ಸುಲಾಯ ಒಡ್ಡಂಬೆಟ್ಟು, ಪುರುಷೋತ್ತಮ.ಭಟ್.ಕೆ, ವಿರಾಜ್ ಅಡೂರ್, ಸತ್ಯವತಿ ಕೊಳಚಪ್ಪು, ವೆಂಕಟ ಭಟ್ ಎಡನೀರು ಸ್ವರಚಿತ ಕವನಗಳನ್ನು ವಾಚಿಸಿದರು. ಉಪನ್ಯಾಸಕ ಡಾ.ರತ್ನಾಕರ ಮಲ್ಲಮೂಲೆ ಕಾವ್ಯ ಸೌರಭ ನಿರ್ವಹಿಸಿದರು.
ಬಳಿಕ ಉಡುಪಿಯ ಸಂಧ್ಯಾ ಶೆಣೈ ಅವರಿಂದ ಹಾಸ್ಯ ಸೌರಭ ಕಾರ್ಯಕ್ರಮ ಪ್ರಸ್ತುತಿಗೊಂಡಿತು. ಅವರು ಲಘುದಾಟಿಯ ಮಾತುಗಳ ಮೂಲಕ ಕಚಗುಳಿಯಿಟ್ಟು ಮಾತನಾಡಿ, ಎಷ್ಟೇ ದೊಡ್ಡ ವ್ಯಕ್ತಿತ್ವ ನಮ್ಮದಾದರೂ ಹೃದಯದ ಭಾಷೆಯನ್ನು ಕೇಳುವ ವ್ಯವಧಾನ ಪ್ರತಿಯೊಬ್ಬನಲ್ಲೂ ಇದ್ದಾಗ ಎಲ್ಲವನ್ನೂ ಹಗುರಗೊಳಿಸುತ್ತದೆ. ಪ್ರತಿಯೊಂದನ್ನೂ ಸೂಕ್ಷ್ಮವಾಗಿ ಗ್ರಹಿಸುವ ಮೂಲಕ ಗುಣಗ್ರಾಹಿಗಳಾಗಿ ಬೆಳೆಯಲು ಸಾಧ್ಯವಿದ್ದು, ಸುಖ ಶಾಂತಿ ನೆಮ್ಮದಿ ಪ್ರಾಪ್ತವಾಗುತ್ತದೆ ಎಂದು ತಿಳಿಸಿದರು. ಪ್ರತಿಯೊಬ್ಬರೂ ಮೊದಲು ಮನುಷ್ಯರಾಗಲು ಕಲಿಯಬೇಕಿದ್ದು, ನಂಬಿಕೆ, ವಿಶ್ವಾಸಗಳನ್ನು ಕ್ರಿಯಾಶೀಲಗೊಳಿಸಿ ಪರಸ್ಪರ ಅಥರ್ೈಸುವ, ಹೊಂದಾಣಿಕೆಯಿಂದ ಬದುಕುವ, ನಿರಾಳತೆಯಿಂದ ಇರುವ ಪ್ರವೃತ್ತಿಯನ್ನು ಮೈಗೂಡಿಸಬೇಕು ಎಂದು ತಿಳಿಸಿದರು.
ಶ್ರೀಮದ್ ಎಡನೀರು ಮಠಾಧೀಶ ಶ್ರೀಕೇಶವಾನಂದ ಭಾರತೀ ಶ್ರೀಗಳು ಉಪಸ್ಥಿತರಿದ್ದು ಶುಭ ಹಾರೈಸಿದರು. ಪ್ರೊ.ಎ.ಶ್ರೀನಾಥ್ ಸ್ವಾಗತಿಸಿ, ರಾಜೇಂದ್ರ ಕಲ್ಲೂರಾಯ ಎಡನೀರು ವಂದಿಸಿದರು.
ಶನಿವಾರ ಸಂಜೆ ಬಡಗುತಿಟ್ಟಿನ ಹಿರಿಯ ಕಲಾವಿದರಿಂದ ಅಂಬಾ ಶಪಥ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು. ಭಾನುವಾರ ಸಂಜೆ 6.30 ರಿಂದ ವೆಳ್ಳಿನ್ನೇರಿ ಸುಬ್ರಹ್ಮಣ್ಯಂ ಮತ್ತು ಭರದ್ವಾಜ ಸುಬ್ರಹ್ಮಣ್ಯಂ ಅವರಿಂದ ಸಂಗೀತ ಕಚೇರಿ ನಡೆಯಲಿದೆ. ಗಣರಾಜ್ ಕಾಲರ್ೆ(ವಯಲಿನ್), ನಿಶ್ಚಿತ್ ಪುತ್ತೂರು(ಮೃದಂಗ), ಟ್ರಿಚ್ಚಿ ಕೆ.ಆರ್.ಕುಮಾರ್(ಘಟಂ)ನಲ್ಲಿ ಸಹಕರಿಸುವರು.