HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                      ಕೊಯಂಬತ್ತೂರಿನಲ್ಲಿ ಕನ್ನಡ ಸಂಸ್ಕ್ರತಿ ವೈಭವ
     ಮಂಜೇಶ್ವರ: ಇಂದಿನ ತ್ರೀಡಿ ತಂತ್ರಜ್ಞಾನದ ಬಳಕೆ ಮೂಲಕ ಶಿಲ್ಪಕಲೆಗೆ ಹೊಸ ಆಯಾಮದಿಂದ ಡಿಜಿಟಲ್ ಕೌಶಲ್ಯಯು ವೃತ್ತಿಪರತೆ ಹೆಚ್ಚಿಸುತ್ತದೆ. ಹೊಸ ಮಾರುಕಟ್ಟೆ ಸೃಷ್ಟಿಸುತ್ತದೆ. ಉದ್ಯೋಗಕ್ಕೆ ಹೊಸ ವೇಗ ದೊರಕುತ್ತದೆ. ಮತ್ತು ಇದೀಗ ತ್ರೀಡಿ ತಂತ್ರಜ್ಞಾನವನ್ನು ಪಾರಂಪರಿಕ ವಾಸ್ತು ಶಿಲ್ಪದ ಸಂರಕ್ಷರಣೆಗೆ ಬಳಸಳಾಗುತ್ತದೆ ಎಂದು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಸಹಾಯಕ ಕುಲ ಸಚಿವ ಹೀರಣ್ಣ ಕಮ್ಮಾರ್  ನುಡಿದರು.
   ಅವರು ಕೊಯಂಬತ್ತೂರಿನ ಪೊನ್ನಯ್ಯ ರಾಜಪುರಂನ ಶ್ರೀ ವಿಶ್ವ ಶಿಲ್ಪ ಸಂಘದ ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇದರ ಸಹಯೋಗದೊಂದಿಗೆ ಇತ್ತೀಚೆಗೆ ಜರಗಿದ ಕನ್ನಡ ಸಂಸ್ಕೃತಿ ವೈಭವ ಶಿಲ್ಪಕಲೆ ಮತ್ತು ಡಿಜಿಟಲ್ ತಂತ್ರಜ್ಞಾನ ಎಂಬ ವಿಷಯದ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಪೊನ್ನಯ್ಯ ರಾಜಪುರಂನವವರ ಸಮೂಹ ಸಂಘದ ಕಲ್ಯಾಣ ಮಂಟಪದಲ್ಲಿ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
ಸಮಾರಂಭದಲ್ಲಿ ಶ್ರೀವಿಶ್ವ ಶಿಲ್ಪ ಸಂಘದ ಅಧ್ಯಕ್ಷ ಎ.ವಿ. ಯೋಗೀಶ್ ಆಚಾರ್ಯ ವಹಿಸಿದ್ದರು ಡಿಜಿಟಲ್ ಮೂತರ್ಿ ರಚನೆ ಎಂಬ ವಿಷಯದಲ್ಲಿ ಜಯಪ್ರಸಾದ್ ಕೋಟೆಕಾರು, ವಿಷಯ ಮಂಡಿಸಿದರು. ಡಿಜಿಟಲ್ ಛಾಯಚಿತ್ರದ ಬಗ್ಗೆ ಬೆಂಗಳೂರಿನ ನವೀನ್ ಕುಮಾರ್ ಮಾಹಿತಿ ನೀಡಿ ಟಿ.ವಿ.  ಪರದೆಯ ಮೂಲಕ ಚಿತ್ರ ಸಹಿತ ವಿವರ ನೀಡಿದರು. ಡಿಜಿಟಲ್ ಕಾಷ್ಠ ಶಿಲ್ಪದ ಬಗ್ಗೆ ಭರತ್ ಎಮ್.ಸಿ. ಕೊಯಂಬತ್ತೂರು ಮಾಹಿತಿ ನೀಡಿದರು.
  ವೇದಿಕೆಯಲ್ಲಿ ಶ್ರೀ ವಿಶ್ವ ಶಿಲ್ಪ ಸಂಘದ ಉಪಾಧ್ಯಕ್ಷ ಕೆ.ವಿ. ರಮಾನಂದ, ಎಮ್ ಎಸ್. ಅರುಣ್ ಕುಮಾರ್, ಮಹಿಳಾ ಸಂಘದ ಅಧ್ಯಕ್ಷೆ ಪದ್ಮಲತಾ ಹರಿಪ್ರಕಾಶ್ ಉಪಸ್ಥಿತರಿದ್ದರು. ಬಾಲಕೃಷ್ಣ ಹೊಸಂಗಡಿ ಸಮಾರೋಪ ಭಾಷಣ ಮಾಡಿದರು. ಶ್ರೀ ವಿಶ್ವ ಶಿಲ್ಪ ಸಂಘದ ಕಾರ್ಯದಶರ್ಿ ಕಲ್ಪಾರೆ ಹರಿಶ್ಚಂದ್ರ ಆಚಾರ್ಯ ಸ್ವಾಗತಿಸಿ, ರತನ್ ಕುಮಾರ್ ಹೊಸಂಗಡಿ ಹಾಗೂ  ಬಬಿತಾ ಸತೀಶ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿ ವಂದಿಸಿದರು ಬಳಿಕ ಶ್ರೀ ವಿಶ್ವ ಶಿಲ್ಪಿ ಸಂಘದ ಆಶ್ರಯದಲ್ಲಿ 28ನೇ ವರ್ಷದ ಶ್ರೀ ವಿಶ್ವಕರ್ಮ ಪೂಜೆ ನಡೆಯಿತು. ಪುರೋಹಿತ ಧಮರ್ೆಂದ್ರ ಆಚಾರ್ಯ ಮಧೂರು ವೈದಿಕ ಕಾರ್ಯಕ್ರಮದ  ನೇತೃತ್ವ ನೀಡಿದರು ಮಧ್ಯಾಹ್ನ ಮಹಾಪೂಜೆ ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಾಂಸ್ಕೃತಿ ಕಾರ್ಯಕ್ರಮದಂಗವಾಗಿ, ವಿವಿಧ ನೃತ್ಯ ವೈಭವ, ರಂಗಸಿರಿ ಸಾಂಸ್ಕೃತಿಕ  ವೇದಿಕೆ ಬದಿಯಡ್ಕ ಇವರಿಂದ ಸೂರ್ಯ ನಾರಾಯಣ ಪದಕಣ್ಣಾಯ ಬಾಯಾರುರವರ ನಿದರ್ೇಶನದಲ್ಲಿ ಶ್ರೀ ಹರಿದರ್ಶನವೆಂಬ ಪ್ರಸಂಗದ ಯಕ್ಷಗಾನ ಬಯಲಾಟ ನಡೆಯಿತು. ಕನ್ನಡ ಸಂಸ್ಕೃತಿ ವೈಭವ ಕಾರ್ಯಕ್ರಮವನ್ನು ಶ್ರೀ ವಿಶ್ವ ಶಿಲ್ಪ ಸಂಘದ ಅಧ್ಯಕ್ಷ ಎ.ವಿ. ಯೋಗಿಶ್ ಆಚಾರ್ಯ ಉದ್ಘಾಟಿಸಿದರು. ಬಳಿಕ ಮಹಿಳೆಯವರಿಂದ ರಂಗೋಲಿ ಚಿತ್ತಾರ, ಕೆ.ವಿ. ರಮಾನಂದ ಆಚಾರ್ಯ ಮತ್ತು ಬಳಗದವರಿಂದ ದಾಸಸಕೀರ್ತನೆ, ಆರತಿ ಸತೀಶ್ ಮತ್ತು ಬಳಗದವರಿಂದ ಕನ್ನಡ  ಭಾವಗೀತೆ, ಮಕ್ಕಳ ಸಾಂಸ್ಕೃತಿಕ ಕ್ರೀಡೋತ್ಸವದಲ್ಲಿ  ರಂಗವಲ್ಲಿ ಸ್ಪಧರ್ೆ, ಪುಷ್ಪಲಾಂಕಾರ ಮೊದಲಾದವುಗಳು ನಡೆಯಿತು.

   

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries