HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                   ಶ್ರೀಕೃಷ್ಣನ ಧರ್ಮ-ಕರ್ಮ ಸಾಕಾರತೆಯ ಬಗ್ಗೆ ಚಿಂತನೆ ನಡೆಸಬೇಕು-ಯೋಗೀಶ್ ಎಂ.ಆರ್.
                ರತ್ನಗಿರಿಯ ಓಂಕಾರ್ ಪ್ರೆಂಡ್ಸ್-ಬಾಲಗೋಕುಲಗಳ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಉಪನ್ಯಾಸ 
   ಬದಿಯಡ್ಕ: ಭಗವಾನ್ ಶ್ರೀಕೃಷ್ಣನ ಸಂದೇಶಗಳು ಸಾರ್ವಕಾಲಿಕವಾಗಿದ್ದು, ಇಂದಿನ ಗೊಂದಲದ ವಾತಾವರಣ ಮಧ್ಯೆ ಭಗವದ್ ಸಂದೇಶಗಳ ಮರು ಚಿಂತನೆ ಅಗತ್ಯವಿದೆ. ಧರ್ಮ ಮತ್ತು ಕರ್ಮ ಸಂದೇಶಗಳ ನಿತ್ಯ ಸಾಕಾರತೆಯ ಬಗ್ಗೆ ನಾವಿಂದು ಹೆಚ್ಚು ಚಿಂತನೆ ನಡೆಸಬೇಕು ಎಂದು ಕ್ಷೇತ್ರ ಸಂರಕ್ಷಣಾ ಸಮಿತಿಯ ಜಿಲ್ಲಾ ಪ್ರಮುಖರಾದ ಯೋಗೀಶ್ ಎಂ.ಆರ್ ಅಭಿಪ್ರಾಯ ವ್ಯಕ್ತಪಡಿಸಿದರು.
   ನೀಚರ್ಾಲು ಸಮೀಪದ ಬೇಳ ರತ್ನಗಿರಿಯ ಓಂಕಾರ್ ಫ್ರೆಂಡ್ಸ್ ಕ್ಲಬ್ ಮತ್ತು ಓಂಕಾರ್ ಬಾಲಗೋಕುಲ ಸಮಿತಿಯ ಆಶ್ರಯದಲ್ಲಿ ರತ್ನಗಿರಿಯ ಕುದ್ರೆಕ್ಕಾಳಿ ಭಗವತೀ ಕ್ಷೇತ್ರ ಪರಿಸರದಲ್ಲಿ ಭಾನುವಾರ ಆಯೋಜಿಸಲಾದ ದ್ವಿತೀಯ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ ಉತ್ಸವದ ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಧಾಮರ್ಿಕ ಉಪನ್ಯಾಸಗೈದು ಅವರು ಮಾತನಾಡಿದರು.
   ಶ್ರೀಕೃಷ್ಣನ ಅವತಾರವು ಧರ್ಮ ಸಂರಕ್ಷಣೆಯ ವಿಶೇಷತೆಗಳಿಂದೊಡಗೂಡಿ ಜಗತ್ತಿಗೆ ಜೀವ-ಜೀವನ ಪಾಠಗಳ ಸಂದೇಶಗಳಿಂದ ಕೂಡಿದೆ. ಆಡಳಿತ, ರಾಜಕಾರಣ ಮತ್ತು ಧರ್ಮದ ನಡುವಿನ ಸೂಕ್ಮತೆಯನ್ನು ತೆರೆದಿಡುವ ಭಗವಂತನ ನಿದರ್ೇಶನಗಳು ಎಲ್ಲಾ ಕಾಲಕ್ಕೂ ಕೈದೀವಿಗೆ ಎಂದು ಅವರು ತಿಳಿಸಿದರು. ರಾಜ್ಯದಲ್ಲಿ ಪ್ರಸ್ತುತ ತಲೆದೋರಿರುವ ಪ್ರಾಕೃತಿಕ ಬಿಕ್ಕಟ್ಟುಗಳಿಗೆ ಅಧರ್ಮ ಜೀವನ ನಿರ್ವಹಣೆಯೇ ಕಾರಣವಾಗಿದ್ದು, ಸತ್ಯವನ್ನು ಬಹುಕಾಲ ಮರೆಮಾಚಲು ಸಾಧ್ಯವಿಲ್ಲ. ಸೃಷ್ಟಿ ಮೂಲದ ಶಕ್ತಿಯನ್ನು ಅವಗಣಿಸಿ ಸಾಗುವ ಮಾರ್ಗ ಸಂಕಷ್ಟಗಳಿಗೆ ಎಡೆಮಾಡಿಕೊಡುತ್ತದೆ. ಈ ನಿನ್ನೆಲೆಯಲ್ಲಿ ಶ್ರೀಕೃಷ್ಣನ ಗೀತಾ ಸಂದೇಶಗಳಂತಹ ಮಾರ್ಗಸೂಚಿಗಳಂತೆ ನಮ್ಮ ಜೀವನ ಬದಲಾಗಬೇಕು ಎಮದು ಅವರು ಕರೆನೀಡಿದರು.
   ಹಿರಿಯ ಕೃಷಿಕ ವೆಂಕಟಕೃಷ್ಣ ಭಟ್ ಪೆರ್ವ ಅಧ್ಯಕ್ಷತೆ ವಹಿಸಿ ಮಾತನಾಡಿ ಪರಬ್ರಹ್ಮ ಸ್ವರೂಪಿಯಾದ ಶ್ರೀಕೃಷ್ಣ ಬಾಲಲೀಲೆಗಳನ್ನು ನಾವಿಂದು ಕೊಂಡಾಡುತ್ತೇವೆ. ಆದರೆ ಅದರಲ್ಲಿ ಅಡಕವಾಗಿರುವ ಸಂದೇಶಗಳ ಬಗ್ಗೆಯೂ ಆಳವಾದ ಚಿಂತನೆ ನಡೆಸುವ ಅಗತ್ಯತೆಯನ್ನು ಮರೆಯುತ್ತಿರುವುದರಿಂದ ಸಂಕಟಗಳು ಬೆಚ್ಚಿಬೀಳಿಸುತ್ತದೆ ಎಂದು ತಿಳಿಸಿದರು.
   ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಬದಿಯಡ್ಕ ಗ್ರಾ.ಪಂ. ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಕಿಳಿಂಗಾರು ಅವರು ಮಾತನಾಡಿ, ರಾಷ್ಟ್ರ ಮತ್ತು ಧರ್ಮ ಸಂರಕ್ಷಣೆಗಾಗಿ ಅವತರಿಸಿದ ಶ್ರೀಕೃಷ್ಣನ ಸಂದೇಶಗಳು ನಮ್ಮನ್ನು ಸನ್ಮಾರ್ಗದೆಡೆಗೆ ಕೊಂಡೊಯ್ಯಲಿ ಎಂದು ಹಾರೈಸಿದರು.
   ರತ್ನಗಿರಿ ಕುದ್ರೆಕ್ಕಾಳಿ ಭಗವತೀ ಕ್ಷೇತ್ರದ ಅಧ್ಯಕ್ಷ ಜಯರಾಮ ಪೊನ್ನಂಗಳ, ಜಿಲ್ಲಾ ಚೈಲ್ಡ್ಲೈನ್ನ ಕಾರ್ಯಕರ್ತ ಆನಂದ ಮೆಣಸಿನಪಾರೆ, ಬೇರ್ಯತ್ತೆ ವೀಡ್ ತರವಾಡಿನ ಅಧ್ಯಕ್ಷ ನಾರಾಯಣ ಅಡ್ಕತ್ತಬೈಲು, ಕುದ್ರೆಕ್ಕಾಳಿ ಭಗವತಿ ಕ್ಷೇತ್ರದ ಕಾರ್ಯದಶರ್ಿ ಶಂಕರ ವಳಕುಂಜ, ಶಿವರಾಮ ಮೆಣಸಿನಪಾರೆ, ಪತ್ರಕರ್ತ ಪುರುಷೋತ್ತಮ ಭಟ್ ಕೆ, ವಿನೋದ್ ಮಾಸ್ತರ್ ಉಪಸ್ಥಿತರಿದ್ದು ಶುಭಹಾರೈಸಿದರು. ಅನೀಶ್ ಸ್ವಾಗತಿಸಿ, ಬಾಲಗೋಕುಲ ಪ್ರಮೂಕ್ ಸತ್ಯನಾರಾಯಣ ವಂದಿಸಿದರು. ಶ್ರೀಧರ ರತ್ನಗಿರಿ ಕಾರ್ಯಕ್ರಮ ನಿರೂಪಿಸಿದರು.
   ಕಾರ್ಯಕ್ರಮವನ್ನು ಬೆಳಿಗ್ಗೆ ರಾಮಚಂದ್ರ ಮಂಜಲಪಡ್ಪು ಹಾಗೂ ಕುದ್ರೆಕ್ಕಾಳಿ ಭಗವತೀ ಕ್ಷೇತ್ರದ ಅರ್ಚಕ ನಾರಾಯಣ ರತ್ನಗಿರಿ ದೀಪ ಬೆಳಗಿಸಿ ಉದ್ಘಾಟಿಸಿದರು. ಸುಕುಮಾರ, ಜಯರಾಮ ಪೊನ್ನಂಗಳ, ಶಂಕರ ವಳಕುಂಜ, ಸತ್ಯನಾರಾಯಣ ಮೊದಲಾದವರು ಉಪಸ್ಥಿತರಿದ್ದರು. ಬಳಿಕ ಬಾಲಗೋಕುಲದ ವಿದ್ಯಾಥರ್ಿಗಳಿಗೆ, ಮಹಿಳೆಯರಿಗೆ ಹಾಗೂ ಪುರುಷರಿಗೆ ವಿವಿಧ ಸ್ಪಧರ್ೆಗಳು ನಡೆದವು. ಭಜನಾ ಸ್ಪಧರ್ೆ, ಶ್ಲೋಕಗಳ ವಾಚನ, ಸಂಗೀತ ಕುಚರ್ಿ, ರಸಪ್ರಶ್ನೆ, ಲಿಂಬೆಚಮಚ, ದೇಶಭಕ್ತಿಗೀತೆ, ಮಡಕೆ ಒಡೆಯುವುದು, ಚೆಂಡು ಎಸೆತ ಮೊದಲಾದ ಸ್ಪಧರ್ೆಗಳನ್ನು ಏರ್ಪಡಿಸಲಾಯಿತು. ಸಮಾರೋಪ ಸಮಾರಂಭದಲ್ಲಿ ಬಹುಮಾನ  ವಿತರಿಸಲಾಯಿತು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries