ಭಾಷೆಯೊಂದಿಗೆ ಸಾಂಸ್ಕೃತಿಕತೆಯ ಭೀತಿ ಗಡಿನಾಡಿಗೆ
ಮಾಯಿಲರಸರ ಕೋಟೆ ಖತಂ=ಕೇಳೋರಿಲ್ಲ
ಬದಿಯಡ್ಕ: ಇತಿಹಾಸದ ಬೆಳಕು ಚೆಲ್ಲುವ ಕೋಟೆಗಳು ಕಾಸರಗೋಡಿನಲ್ಲಿ ಸಾಕಷ್ಟಿದ್ದು, ಈ ಪೈಕಿ ಕೆಲವು ಕೋಟೆಗಳು ಕಾಲನ ತುಳಿತಕ್ಕೆ ಬಲಿಯಾದರೆ ಮತ್ತೆ ಕೆಲವು ಅವುಗಳ ಮಹತ್ವವರಿದವರ ಕೈಗೆ ಸಿಲುಕಿ ನಾಶಹೊಂದುತ್ತಿದೆ.
ಅಂತಹ ಕೋಟೆಗಳಲ್ಲೊಂದು ಕೋಟೆಕಣಿ ಕೋಟೆ. ಕಾಸರಗೋಡು ಕೋಟೆಗಳ ನಾಡೆಂದೇ ಖ್ಯಾತಿ ಪಡೆದಿದೆ. ಹತ್ತು ಹಲವು ಕೋಟೆಗಳು ಇಲ್ಲಿದ್ದು, ಶೋಚನೀಯ ಸ್ಥಿತಿಗೆ ತಲುಪಿದ್ದ ಕೆಲವು ಕೋಟೆಗಳನ್ನು ದುರಸ್ತಿಗೊಳಿಸಲಾಗಿದೆ. ಈ ಸಾಲಿಗೆ ಸೇರಬೇಕಾದ ಕೋಟೆಕಣಿ ಕೋಟೆ ಇದೀಗ ಪೂರ್ಣವಾಗಿ ನಾಶವಾಗಿ ಇತಿಹಾಸ ಇತಿಹಾಸದ ಪುಟ ಸೇರಿದ ಘಟನೆ ಇದು.
ಕೋಟೆಕಣಿಯ ಮಾಯಿಲರ ಕೋಟೆಯನ್ನು ದಿನಗಳ ಹಿಂದೆ ನೂತನ ಬಸ್ ನಿಲ್ದಾಣ ನಿಮರ್ಾಣದ ಹೆಸರಿನಲ್ಲಿ ಕುರುಹುಗಳೂ ಕಾಣದಂತೆ ಸಂಪೂರ್ಣ ನಾಶಗೊಳಿಸಲಾಗಿದೆ. ಸ್ಥಳೀಯ ಯೂತ್ ವಿಂಗ್ ಕುಕ್ಕಂಗೋಡ್ಳು(ಈ ಹೆಸರು ಬದಲಾಗಿ ಮಲೆಯಾಳೀಕರಣಗೊಂಡು ಕುಕ್ಕಂಗೂಡಲು ಎಂದಾಗಿದೆ) ಸಂಘಟನೆ ಬಸ್ ನಿಲ್ದಾಣ ನಿಮರ್ಿಸಿದೆ. ಶಾಸಕ ಎನ್.ಎ.ನೆಲ್ಲಿಕುನ್ನು ಉದ್ಘಾಟಿಸಿಯೂ ಆಗಿದೆ.
ಕೇವಲ ಎರಡು ಬಸ್ ಗಳು ಮಾತ್ರ ಸಂಚರಿಸುವ ಈ ರಸ್ತೆಯಲ್ಲಿ ಬಸ್ ನಿಲ್ದಾಣದ ಅಗತ್ಯ ಎಷ್ಟಿದೆಯೆಂಬುದು ಪ್ರಶ್ನಾರ್ಹವಾದರೆ ಅರ ಜೊತೆಗೆ ಕೋಟೆಯನ್ನು ಕೆಡವಿ ನಿಲ್ದಾಣ ನಿಮರ್ಿಸಿದವರ ಮನೋಸ್ಥಿತಿ ಹೇಯವಾಗಿ ಕಂಡುಬರುತ್ತಿದೆ.
ಕಾಸರಗೋಡಿನ ಕನ್ನಡ=ತುಳು ಸಂಸ್ಕೃತಿಯ ಪ್ರತೀಕವಾದ ಕೋಟೆ, ಕೊತ್ತಲಗಳನ್ನು ಉಳಿಸಿ ಸಂರಕ್ಷಿಸುವ ಹೊಣೆ ಯಾರದೆಂಬುದೂ ಇದೀಗ ಪ್ರಶ್ನಾರ್ಹವಾಗಿದೆ.
ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಿಂದ ಅನತಿ ದೂರದ ನೀಚರ್ಾಲು ರಸ್ತೆಯ ಕೋಣೆಕಣಿಯಲ್ಲಿ ಮಾಯಿಲರಸರ ಕೋಟೆಯೊಂದಿತ್ತು. ಎತ್ತರದ ಬತ್ತೇರಿಯ ಮೇಲೆ ನಿಂತರೆ ನಾಲ್ದೆಸೆಗೂ ದೃಷ್ಟಿ ನಿಲುಕುತ್ತಿತ್ತು. ಪ್ರಕೃತಿ ರಮಣೀಯ ದೃಶ್ಯ ಗೋಚರಿಸುತ್ತಿತ್ತು.
ಮಾಯಿಲರ ಬಗ್ಗೆ:
ಮಧೂರ ಮಾಯಿಲರಸ ತುಳುನಾಡಿನ ಪ್ರತಾಪಿ ಅರಸನಾಗಿದ್ದನೆಂದು ಚರಿತ್ರೆಯಿಂದ ತಿಳಿದು ಬರುತ್ತದೆ. ಈತ ಮೊಗೇರ ಜನಾಂಗದವನು? ಈ ವಿಷಯ ಇನ್ನೂ ಚಚರ್ಾಸ್ಪದವಾಗಿಯೇ ಇದೆ. ಮಂಜೇಶ್ವರದ ಅರಸ ಅಂಗಾರವರ್ಮ, ಪಟ್ಟದಮೊಗರಿನ ಮುಗರ, ಬಡಾಜೆಯ ಬಡಜ ಮೊದಲಾದವರು ಮಾಯಿಲನ ಸಮಕಾಲೀನರು. ಉಬಾಸಿಗನೆಂಬ ಅರಸನೂ ತುಳುನಾಡಿನಲ್ಲಿದ್ದ. ಅವರೆಲ್ಲ ಅಧಿಕೃತ ವರ್ಗದವರು. ಅಧಿಕಾರದ ಸೂತ್ರ ಅವರಲ್ಲಿತ್ತು. ಸೈನ್ಯವೂ ಇತ್ತು. ಆಡಳಿತ ನಡೆಸುವ ಶಕ್ತಿ ಸಾಮಥ್ರ್ಯವಿತ್ತು. ರಾಜ್ಯ ವಿಸ್ತರಿಸಲು ಉತ್ತರದಿಂದ ದಂಡೆತ್ತಿ ಬಂದ ರಾಜರುಗಳು ಇವರ ಹುಟ್ಟಡಗಿಸಿದರು. ತುಂಡರಸರೆಲ್ಲ ದಿಕ್ಕು ಪಾಲಾದರು.
ಮಾಯಿಲ ಮೊಗೇರ ಅರಸನೆನ್ನುವುದಕ್ಕೆ ಸಾಕ್ಷ್ಯಾಧಾರಗಳಿದ್ದರೂ ಅವೆಲ್ಲ ದಂತ ಕಥೆಗಳಾಗಿ ಕ್ಷಯಿಸುತ್ತಲೇ ಇದೆ. ಚಾಣಾಕ್ಷ ಓಟಕ್ಕೆ ಪ್ರಸಿದ್ಧಿಯಾದ ಮೊಲವನ್ನು ಅಟ್ಟಿಸಿ ಬೇಟೆಯಾಡುವುದರಲ್ಲಿ ಮೊಗೇರರು ನಿಷ್ಣಾತರು. ಆದ ಕಾರಣವೇ ಅವರಿಗೆ ಮೇರರು ಎಂಬ ಹೆಸರು ಬಂದಿರುವುದಾಗಿ ಈ ಕುರಿತು ನಡೆದ ಅಧ್ಯಯನಗಳಿಂದ ತಿಳಿದು ಬರುತ್ತದೆ. ಮೊಗೇರರ ಆರಾಧನೆಯಲ್ಲಿ ಬಿಲ್ಲು ಬಾಣಗಳಿಗೆ ಪ್ರಾಮುಖ್ಯತೆ ಇದೆ. ಮಾಯಿಲರಸನೂ ಬೇಟೆಯಾಡುವುದರಲ್ಲಿ ನಿಸ್ಸೀಮನಾಗಿದ್ದ. ದೈವ ದೇವರುಗಳನ್ನು ಆರಾಧಿಸುತ್ತಿದ್ದ ಎಂಬುದು ತಿಳಿದುಬರುತ್ತದೆ.
ಕೊಟ್ಟಾರಿಗುಡ್ಡೆಯಲ್ಲಿ ಅರಮನೆ : ಮಾಯಿಲರಸ ಮಧೂರು ಶ್ರೀ ಮದನಂತೇಶ್ವರದ ಅನನ್ಯ ಭಕ್ತ. ಮಧೂರು ದೇವಾಲಯದ ಮುಂಭಾಗದ ಕೊಟ್ಟಾರಿಗುಡ್ಡೆಯಲ್ಲಿ ಅವನ ಅರಮನೆ ಇತ್ತು. ಪಟ್ಲದಲ್ಲಿ ಕಳಿಯಾಟದ ಸಂದರ್ಭದಲ್ಲಿ ನಡೆಯುವ ದೈವಗಳ ನುಡಿಗಟ್ಟಿನಲ್ಲಿ ಮಾಯಿಲರಸನ ಪ್ರಸ್ತಾಪ ಬರುತ್ತದೆ. ಕೊಟ್ಟಾರಿಗುಡ್ಡೆ ಮತ್ತು ಜೇನಕ್ಕೋಡಿನಲ್ಲಿ ಅವನತಿಯ ಅಂಚಿನಲ್ಲಿರುವ ಬುರುಜುಗಳನ್ನು ಕಾಣಬಹುದು. ಉಳಿಯತ್ತಡ್ಕದಲ್ಲಿದ್ದ ಬತ್ತೇರಿಯೊಂದು ವರ್ಷಗಳ ಹಿಂದೆಯೇ ನೆಲಸಮವಾಗಿದೆ. ದಕ್ಷಿಣದ ಅರಸನೊಬ್ಬ ದಂಡೆತ್ತಿ ಬಂದಾಗ ಆತನನ್ನು ಮಾಯಿಲರಸ ಉಳಿಯತ್ತಡ್ಕ ಮೈದಾನದಲ್ಲಿ ನಡೆದ ಯುದ್ಧದಲ್ಲಿ ಪರಾಭವಗೊಳಿಸಿ ಓಡಿಸಿದ್ದನೆಂಬ ವೃತ್ತಾಂತ ಜನಪದದಲ್ಲಿದೆ. ಮಾಯಿಲರಸನು ಪೂಜೆಯನ್ನು ನೋಡಲು ನಿತ್ಯವೂ ಮಧೂರು ದೇವಾಲಯಕ್ಕೆ ಬರುತ್ತಿದ್ದನಂತೆ. ನದಿಯಲ್ಲಿ ಮಿಂದು ಮಡಿಯಾಗಿ ದೇವಸ್ಥಾನದ ಪೂಜೆ ವೀಕ್ಷಿಸುವುದು ಆತನ ಕ್ರಮವಾಗಿತ್ತು.
ಶತಮಾನೋತ್ತರ ಬದುಕು ಸವೆಸಿ ಇತಿಹಾಸವಾದ ಬದಿಯಡ್ಕದ ಮತ್ತಡಿ, ಬೆಳ್ಳೂರಿನ ಪಕ್ರಿ, ಚೇವಾರಿನ ಚನಿಯ ಮೊದಲಾದವರು ಮಧೂರು ಮಾಯಿಲರಸ ಮತ್ತು ಮದರುವಿನ ಕುರಿತು ಹೇಳುತ್ತಿದ್ದುದನ್ನು ಕೇಳಿದವರಿದ್ದಾರೆ. ಅಂತಹವರ ವಿಚಾರಗಳು ಇತಿಹಾಸದ ಪುಟಗಳಲ್ಲಿ ದಾಖಲಾಗದಿದ್ದರೂ ಜನತೆಯ ಹೃದಯ ಸಂಪುಟದಲ್ಲಿ ಅಚ್ಚಳಿಯದೆ ಉಳಿದುಕೊಂಡಿದೆ.
ಐತಿಹಾಸಿಕ ಮಹತ್ವವನ್ನು ಪಡೆದಿರುವ ಮಾಯಿಲರಸ ನಿಮರ್ಿಸಿದ ಮಧೂರು ಸಮೀಪದ ಕೋಟೆಕಣಿ ನಾಮಾವಶೇಷದ ಅಂಚಿನಲ್ಲಿರುವ ಕೋಟೆಗಳನ್ನು ಬತ್ತೇರಿ ಬುರುಜುಗಳನ್ನು ಸಂರಕ್ಷಿಸುವುದು ಇಂದಿನ ಅನಿವಾರ್ಯವಾಗಿದೆ. ಪ್ರಾಚೀನ ಸಂಸ್ಕೃತಿ ಮತ್ತು ವೈಭವವನ್ನು ಪ್ರತಿಬಿಂಬಿಸುವ ಇವುಗಳಿಗೆ ಕಾಯಕಲ್ಪ ನೀಡಲು ನಮ್ಮ ಆಡಳಿತ ವ್ಯವಸ್ಥೆ ಮುಂದಾಗಬೇಕಾಗಿದೆ.
ಏನಂತಾರೆ:
ಕಾಸರಗೋಡಿನ ಕೋಟೆಗಳು ಇತಿಹಾಸದ ಮಹತ್ವದ ಕೊಂಡಿಗಳು ಮಾತ್ರವಲ್ಲ, ಇಲ್ಲಿನ ಕನ್ನಡ, ತುಳು ಸಂಸ್ಕೃತಿಗಳ ದಾಖಲೆಗಳು ಕೂಡ. ಅವನ್ನು ರಕ್ಷಿಸುವುದು ನಮ್ಮ ಜವಾಬ್ದಾರಿ. ಇಲ್ಲಿ ಎರಡು ಬಗೆಯ ಕೋಟೆಗಳಿವೆ. ಒಂದು ಕೆಂಪು ಕಲ್ಲಿನ ಕೋಟೆಗಳು, ಇನ್ನೊಂದು ಮಣ್ಣಿನ ಕೋಟೆಗಳು. ಮಾಯಿಲಂಕೋಟೆಗಳು ಇಲ್ಲಿನ ನೆಲ ಸಂಸ್ಕೃತಿಯ ತೌಳವ ಆಡಳಿತವನ್ನು ಸೂಚಿಸುವ ಕುರುಹುಗಳು. ಒಂದು ಕಾಲದಲ್ಲಿ ಮಾಯಿಲ ಜನಾಂಗದ ಅರಸರು ಈ ಪ್ರದೇಶವನ್ನು ಆಳಿದ್ದಕ್ಕೆ ಈ ಕೋಟೆಗಳು ಸಾಕ್ಷಿ ಹೇಳುತ್ತವೆ. ಇಂತಹ ನಾಲ್ಕಾರು ಕೋಟೆಗಳು ಕಾಸರಗೋಡಿನಲ್ಲಿವೆ. ಅವನ್ನು ಪುರಾತತ್ವ ಇಲಾಖೆಗೆ ಒಪ್ಪಿಸಿ ಸಂರಕ್ಷಿಸಬೇಕಾದ್ದು ತಕ್ಷಣದ ಅಗತ್ಯ.
ಡಾ.ರಾಧಾಕೃಷ್ಣ ಬೆಳ್ಳೂರು.
ಉಪನ್ಯಾಸಕ, ಇತಿಹಾಸ ಸಂಶೋಧಕ ಸರಕಾರಿ ಕಾಲೇಜು ಕಾಸರಗೋಡು.
.............................................................................................................................
ಕಾಟುಕುಕ್ಕೆ, ಸುಳ್ಯ, ಪುತ್ತೂರು, ಬೆಳ್ತಂಗಡಿ, ಮಂಗಳೂರು ಮೊದಲಾದೆಡೆಗಳಲ್ಲಿ ಮಾಯಿಲರಸನ ಕೋಟೆಗಳಿರುವುದಾಗಿ ಇತಿಹಾಸ ತಜ್ಞರು ಹೇಳುತ್ತಾರೆ. ಆದರೆ ಅವುಗಳು ಅಸ್ತಿತ್ವ ಪಡೆದ ಬಗ್ಗೆ ಜಿಜ್ಞಾಸೆಯಿದೆ. ಈ ಬಗ್ಗೆ ಇನ್ನಷ್ಟು ಅಧ್ಯಯನಗಳು ನಡೆಯಬೇಕಾಗಿದೆ. ಮಧೂರು ದೇವಾಲಯದ ಸ್ಥಾಪನೆಯ ಕಾಲ ಮತ್ತು ಮಾಯಿಲರಸನ ಆಡಳಿತ ಕಾಲವನ್ನು ಇತಿಹಾಸಕಾರರು ಸಮೀಕರಿಸಿದ್ದಾರೆ. ಅಡೂರು, ಮಧೂರು, ಕಾವು, ಕಣಿಪುರ ದೇವಾಲಯಗಳು ಮೂಲ ನಿವಾಸಿಗಳ ಬದುಕಿನಲ್ಲಿ ಪ್ರಬಲವಾದ ಸಂಬಂಧವನ್ನು ಪಡೆದಿದೆ. ಇದನ್ನು ಸಮಥರ್ಿಸಲು ಸಾಕಷ್ಟು ಐತಿಹ್ಯಗಳನ್ನು ಇಲ್ಲಿನ ಜನಪದರು ಒದಗಿಸುತ್ತಾರೆ.
ರಾಧಾಕೃಷ್ಣ ಕೆ.ಉಳಿಯತ್ತಡ್ಕ,
ಹಿರಿಯ ಕವಿ, ಸಾಹಿತಿ, ಜಾನಪದ ತಜ್ಞ