HEALTH TIPS

ಯಾವುದೇ ಶೀರ್ಷಿಕೆಯಿಲ್ಲ

         ಸಿಪಿಸಿಆರ್ ಐ ಯಲ್ಲಿ ಎರಡು ದಿನಗಳ ವಿಚಾರಗೋಷ್ಠಿ
     ಕಾಸರಗೋಡು: ಆಧುನಿಕ ತಂತ್ರಜ್ಞಾನಗಳನ್ನು ಸಮರ್ಪಕವಾಗಿ ಬಳಸುವ ಮೂಲಕ ಪ್ರಸ್ತುತ ತೋಟಗಾರಿಕಾ ಬೆಳೆಗಳ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಲು ಸಾಧ್ಯವಿದೆ. ಬೆಳೆ ಇಳುವರಿ ಸಹಿತ ಬೆಳೆ ಆರೋಗ್ಯ ರಕ್ಷಣೆಯಲ್ಲಿ ಇದು ಅವಶ್ಯಕವಾಗಿದೆ. ತಂತ್ರಜ್ಞಾನ ಎರಡು ಮುಖವುಳ್ಳ ಹರಿತವಾದ ಕತ್ತಿಯಾಗಿದ್ದು ಜಾಣ್ಮೆಯಿಂದ ಉಪಯೋಗಿಸಿದಲ್ಲಿ ಪ್ರಗತಿಪರ ಬದಲಾವಣೆ ಸಾಧ್ಯವಿದೆ ಎಂದು ತೆಂಗು ಅಭಿವೃದ್ಧಿ ನಿಗಮ ಕೊಚ್ಚಿ ನಿದರ್ೇಶಕ ಡಾ.ರಾಜು ನಾರಾಯಣ ಸ್ವಾಮಿ ಅಭಿಪ್ರಾಯಪಟ್ಟರು.
  ಕೇಂದ್ರೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯಲ್ಲಿ(ಸಿಪಿಸಿಆರ್ಐ)ಶುಕ್ರವಾರ  ನಡೆದ ಎರಡು ದಿನಗಳ ವಿಚಾರಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
    ಪ್ರಯೋಗಶಾಲೆಗಳಿಂದ ತಂತ್ರಜ್ಞಾನವು ಕೃಷಿ ತೋಟಗಳಿಗೆ ತಲುಪಬೇಕಿದ್ದು, ತಾಂತ್ರಿಕತೆಯ ಮೂಲಕ ಕೃಷಿಕರ ಜೀವನ ಮಟ್ಟ ಸುಧಾರಿಸಬೇಕಿದೆ ಎಂದು ಅವರು ಅಭಿಪ್ರಾಯಪಟ್ಟರು. ಕೃಷಿ ಆಥರ್ಿಕತೆ ಸುಧಾರಿಸಲು ಮೌಲ್ಯಧಾರಿತ ವಸ್ತುಗಳು ಮತ್ತು ಮಾರುಕಟ್ಟೆ ಸಂಶೋಧನೆಗಳು ನಡೆಯಬೇಕಿದೆ ಎಂದರು. ಕೃತಕ ಬೌದ್ಧಿಕತೆಯು ತೋಟಗಾರಿಕಾ ರಂಗದ ಅಭಿವೃದ್ಧಿಗೆ ಪ್ರಚೋದಕವಾಗಿದ್ದು, ಕೃಷಿ ಮತ್ತು ತೋಟಗಾರಿಕಾ ಬೆಳೆಗಳ ಉತ್ಪಾದಕತೆಯಲ್ಲಿ ಪ್ರಮುಖ ಪಾತ್ರವಹಿಸಲಿದೆ ಎಂದರು.
   ಸಿಪಿಸಿಆರ್ಐ ನಿದರ್ೇಶಕ ಡಾ.ಚೌಡಪ್ಪ ಗೌಡ ಮಾತನಾಡಿ ಕೃತಕ ಬೌದ್ಧಿಕತೆಯು ಕೃಷಿ ಅಭಿವೃದ್ಧಿಯಲ್ಲಿ ಸಹಾಯಕವಾಗಲಿದೆ. ಕೃಷಿ ವಿಜ್ಞಾನಿಗಳು ಕಾಮರ್ಿಕರ ಸಮಸ್ಯೆಯನ್ನು ಬಗೆಹರಿಸಿ ಎ.ಐ ತಂತ್ರಜ್ಞಾನದ ಮೂಲಕ ಕೀಟಬಾಧೆ, ಕೃಷಿ ಸಾಂಕ್ರಾಮಿಕ ರೋಗ ಬಾಧೆಯನ್ನು ತಡೆಯುವಲ್ಲಿ ಮಹತ್ತರ ಪಾತ್ರ ವಹಿಸಬೇಕಿದೆ ಎಂದು ಅಭಿಪ್ರಾಯಪಟ್ಟರು.
   ಬೆಂಗಳೂರು ಏರೋನಾಟಿಕಲ್ ಸಂಸ್ಥೆಯ ನಿದರ್ೇಶಕ ಡಾ. ಕೋಟ ಹರಿನಾರಾಯಣ ಮಾತನಾಡಿ ಡ್ರೋನ್ ಉಪಯೋಗ, ಕೃಷಿ ತಾಂತ್ರಜ್ಞಾನ ಆಳ ಅಧ್ಯಯನವು ಕೃಷಿ ವರಮಾನವನ್ನು ದ್ವಿಗುಣಗೊಳಿಸಲಿದೆ ಎಂದರು. ಭಾರತೀಯ ತೋಟಗಾರಿಕಾ ಪ್ರಬಂಧಕ ಸಂಸ್ಥೆಯ ನಿದರ್ೇಶಕ ಡಾ.ಜಿ.ಧನಕುಮಾರ್ ಪ್ರಧಾನ ಭಾಷಣ ಮಾಡಿದರು. ಡಾ.ರವಿ ಭಟ್ ಸ್ವಾಗತಿಸಿ, ಡಾ.ಎ.ಸಿ.ಮ್ಯಾಥ್ಯೂ ವಂದಿಸಿದರು.
    

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries