ಭಾರತದ ವೈವಿಧ್ಯತೆಯು ಘರ್ಷಣೆಗೆಗೆ ಕಾರಣವಾಗಬಾರದು: ಮೋಹನ್ ಭಾಗವತ್
ನವದೆಹಲಿ: ಭಾರತದ ವೈವಿಧ್ಯತೆಯನ್ನು ಗೌರವಾನ್ವಿತವಾಗಿ ಕಾಣಬೇಕು, ಸಮಾಜದಲ್ಲಿ ಇದು ಯಾವ ರೀತಿಯ ಘರ್ಷಣೆಗೆಗೆ ಕಾರಣವಾಗಬಾರದು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
ಭವಿಷ್ಯ್ ಕಾ ಭಾರತ್ - ಆರ್ ಎಸ್ ಎಸ್ ಪಸ್ಪರ್ೆಕ್ಟಿವ್ ಎನ್ನುವ ಮೂರು ದಿನದ ಕಾರ್ಯಕ್ರಮದ ಮೊದಲ ದಿನ ಮಾತನಾಡಿದ ಭಾಗವತ್ ಆರ್ ಎಸ್ ಎಸ್ ವಿಕಾಸದ ಕುರಿತು ವಿವರಿಸಿದ್ದಾರೆ. ಆರ್ ಎಸ್ ಎಸ್ ಅನ್ನು ಬೇರೆಲ್ಲಾ ಸಂಘಟನೆಗಳೊಡನೆ ಹೋಲಿಸಲು ಬಾರದು ಎಂದು ಅವರು ಹೇಳಿದ್ದಾರೆ.
ಆರ್ ಎಸ್ ಎಸ್ ತನ್ನ ಕಾರ್ಯಕ್ರಮಕ್ಕೆ ದೇಶದ ಪ್ರಮುಖ ವಿರೋಧ ಪಕ್ಷಗಳ ನಾಯಕರನ್ನು, ಬಾಲಿವುಡ್ ತಾರೆಯರನ್ನು,ಬಿಜೆಪಿಯ ಪ್ರಮುಖರನ್ನು ಸೇರಿ ಅನೇಕರನ್ನು ಆಹ್ವಾನಿಸುತ್ತದೆ.
ಭಾರತ ವೈವಿಧ್ಯತೆಯಿಂದ ತುಂಬಿರುವ ದೇಶವಾಗಿದೆ ಮತ್ತು ಅದನ್ನು ಗೌರವಾನ್ವಿತವಾಗಿ ಕಾಣಬೇಕು.ಅಲ್ಲದೆ ಇದು ಸಮಾಜದಲ್ಲಿ ಯಾವ ಬಗೆಯ ಘರ್ಷಣೆಗೆಗೆ ಎಡೆ ನೀಡಬಾರದು. ಕಾಂಗ್ರೆಸ್ ಆರ್ ಎಸ್ ಎಸ್ ಅನ್ನು ವಿರೋಧಿಸುತ್ತಿರುವುದು, ಆರ್ ಎಸ್ ಎಸ್ ಭಿನ್ನಾಭಿಪ್ರಾಯದ ಸಿದ್ಧಾಂತವನ್ನು ಉತ್ತೇಜಿಸುವ ಮತ್ತು ಅಲ್ಪಸಂಖ್ಯಾತರ ಮೇಲೆ ದಾಳಿ ಮಾಡುತ್ತಿದೆ ಎನ್ನುವ ಆರೋಪ ಹೊರಿಸುತ್ತಿರುವಾಗಲೇ ಭಾಗವತ್ ಈ ಹೇಳಿಕೆ ಬಂದಿರುವುದು ಮಹತ್ವದ ಬೆಳವಣಿಗೆಯಾಗಿದೆ. ಸುಮಾರು 80 ನಿಮಿಷಗಳ ಭಾಷಣದಲ್ಲಿ, ಸ್ವಾತಂತ್ರ್ಯ ಚಳುವಳಿ ಸೇರಿದಂತೆ ವಿವಿಧ ವಿಷಯಗಳ ಬಗ್ಗೆಮಾತನಾಡಿದ ಭಾಗವತ್ ಕಾಂಗ್ರೆಸ್ ತಮ್ಮ ಸಂಘಟನೆಯ ಬಹುದೊಡ್ಡ ಟೀಕಾಕಾರ ಪಕ್ಷವಾಗಿದೆ ಎಂದು ಒಪ್ಪಿಕೊಂಡಿದ್ದಾರೆ.
"ಸ್ವಾತಂತ್ರ್ಯ ಚಳವಳಿಯಲ್ಲಿ ಕಾಂಗ್ರೆಸ್ ಒಂದು ದೊಡ್ಡ ಪಾತ್ರವನ್ನು ವಹಿಸಿತು ಮತ್ತು ಭಾರತಕ್ಕೆ ಹಲವು ಶ್ರೇಷ್ಠ ವ್ಯಕ್ತಿಗಳನ್ನು ನೀಡಿದೆ" ಅವರು ಹೇಳಿದರು.