HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                 ಕೇರಳದ ನಿರಾಶ್ರಿತರಿಗೆ ಬೆಳಗಾವಿಯ ರೈತರ ಸಾಂತ್ವನ ಸ್ಪರ್ಶ
     ಮುಳ್ಳೇರಿಯ: ಕೇರಳದ ಜಲಪ್ರಳಯದಿಂದ ಕಂಗೆಟ್ಟಿರುವ ಜನತೆಗೆ ಸಾಂತ್ವನ ಸ್ಪರ್ಶವನ್ನು ನೀಡಲು ಕನರ್ಾಟಕದ ಬೆಳಗಾವಿಯ ಪೆಗುನಾಶಿಯ ರೈತರ ಸಂಘವೊಂದು ಸೇವಾ ಭಾರತಿಯೊಂದಿಗೆ ಕೈಜೋಡಿಸಲು ಮುಂದೆ ಬಂದಿದೆ. ಈಗಾಗಲೇ ಹಲವಾರು ಸೇವೆಗಳನ್ನು ನಡೆಸುತ್ತಾ ಬಂದಿರುವ ಸೇವಾ ಭಾರತಿಯ ಬೇಡಿಕೆಯ ಹಿನ್ನೆಲೆಯಲ್ಲಿ ಆನಂದ ಆಶ್ರಿ ಅವರ ನೇತೃತ್ವದಲ್ಲಿ ಸುಮಾರು 30 ಮಂದಿ ರೈತರನ್ನೊಳಗೊಂಡ ಸಾವಯವ ಕೃಷಿ ಪರಿವಾರ ಸಂಘಟನೆಯ ಕಾರ್ಯಕರ್ತರು ನಿತ್ಯೋಪಯೋಗಿ ವಸ್ತುಗಳನ್ನೊಳಗೊಂಡ ವಾಹನಗಳೊಂದಿಗೆ ಕೇರಳಕ್ಕೆ ಧಾವಿಸಿದ್ದಾರೆ.
   10 ಕಿಲೋ ಸಕ್ಕರೆ, 2 ಕಿಲೋ ಅಕ್ಕಿ, 2 ಕಿಲೋ ಬೇಳೆ, ಒಂದು ಸೀರೆ ಎಂಬಂತೆ 580 ಪೊಟ್ಟಣಗಳ ರೀತಿಯಲ್ಲಿ ಆಹಾರ ವಸ್ತುಗಳನ್ನು ವಸ್ತುಗಳನ್ನು ಅವರು ಸೇವಾಭಾರತಿಗೆ ಹಸ್ತಾಂತರಿಸಿದರು.
   ಮನೆ, ಕೃಷಿ ಭೂಮಿಯನ್ನು ಕಳೆದುಕೊಂಡವರಿಗೆ ತಮ್ಮಿಂದ ಮಾಡಬಹುದಾದ ಸಹಾಯಗಳನ್ನು ನಾವು ಮಾಡುವೆವು ಎಂಬ ಭರವಸೆಯನ್ನು ಅವರು ಕೇರಳದ ಜನತೆಗೆ ನೀಡಿದ್ದಾರೆ ಹಾಗೂ ಜಲ ಪ್ರಳಯದಲ್ಲಿ ಕೃಷಿ ಭೂೂಮಿಯೂ, ಮನೆಯೂ ನಷ್ಟ ಹೊಂದಿದವರಿಗೆ ತಮ್ಮ ಭೂಮಿಯ ಒಂದು ಪಾಲು ಹಾಗೂ ಮಕ್ಕಳಿಗೆ ಶಿಕ್ಷಣಕ್ಕೆ ಅನುಕೂಲವಾದ ಪೂರಕ ಸಹಾಯಗಳನ್ನು ನೀಡಲು ನಾವು ತಯಾರಾಗಿರುವೆವು ಎಂಬ ಭರವಸೆಯನ್ನೂ ನೀಡಿ ಸಂಘವು ಹಿಂತಿರುಗಿದೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾಂಞಂಗಾಡ್ ಜಿಲ್ಲಾ ಸೇವಾ ಪ್ರಮುಖ್ ಕೆ.ವಿ.ಉಣ್ಣಿಕೃಷ್ಣನ್, ಜಿಲ್ಲಾ ಶಾರೀರಿಕ್ ಪ್ರಮುಖ್ ಕೆ.ಸನಲ್, ಸೇವಾ ಭಾರತಿ ಕೋಶಾಧಿಕಾರಿ ಎಚ್.ಆರ್.ಅಮಿತ್ ಕುಮಾರ್, ಜೊತೆ ಕಾರ್ಯದಶರ್ಿಗಳಾದ ವಿ.ರಾಧಾಕೃಷ್ಣನ್, ಸುಧಾಕರನ್ ಮಾಸ್ಟರ್ ಮುಂತಾದವರು ಸೇವಾ ಭಾರತಿಗೆ ನೀಡಿದ ಸಾಮಗ್ರಿಗಳನ್ನು ಸ್ವೀಕರಿಸಿದರು.
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries