HEALTH TIPS

ಯಾವುದೇ ಶೀರ್ಷಿಕೆಯಿಲ್ಲ

             ಸ್ವಚ್ಛತೆಯೇ ಸೇವೆ' ಆಂದೋಲನಕ್ಕೆ ಪ್ರಧಾನಿ ಚಾಲನೆ: ಗಾಂಧೀಜಿ ಕನಸು ನನಸಾಗಿಸಲು ಜನತೆಗೆ ಕರೆ
    ನವದೆಹಲಿ: ಸಮಾಜದ ಎಲ್ಲಾ ವರ್ಗಗಳು ಮತ್ತು ದೇಶದ ಪ್ರತಿ ಭಾಗಗಳ ಜನರು ಸ್ವಚ್ಛತಾ ಅಭಿಯಾನದಲ್ಲಿ ಕೈಜೋಡಿಸಿದ್ದಾರೆ. ಕಳೆದ ನಾಲ್ಕು ವರ್ಷಗಳಲ್ಲಿ ದೇಶದಲ್ಲಿ 9 ಕೋಟಿ ಶೌಚಾಲಯಗಳು ಮತ್ತು ನಾಲ್ಕೂವರೆ ಲಕ್ಷ ಗ್ರಾಮಗಳು ಬಯಲು ಶೌಚ ಮುಕ್ತ ಎಂದು ಘೋಷಿಸಲಾಗಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
  ಅವರು ಶನಿವಾರ ದೆಹಲಿಯಲ್ಲಿ ಸ್ವಚ್ಛತಾ ಹಿ ಸೇವಾ ಅಭಿಯಾನಕ್ಕೆ ಕಸ ಗುಡಿಸಿ ಸ್ವಚ್ಛ ಮಾಡುವ ಮೂಲಕ ಚಾಲನೆ ನೀಡಿ ಮಾತನಾಡಿದರು. ಸ್ವಚ್ಛತಾ ಸೇವೆ ಅಭಿಯಾನ ಮಹಾತ್ಮಾ ಗಾಂಧಿಯವರ ಹುಟ್ಟುಹಬ್ಬ ಅಕ್ಟೋಬರ್ 2ರವರೆಗೆ ಮುಂದುವರಿಯಲ್ಲಿದ್ದು, ನಮ್ಮ ದೇಶದ ಪಿತಾಮಹ ಮಹಾತ್ಮಾ ಗಾಂಧಿಯವರ ಸ್ವಚ್ಛ ಭಾರತ ಕನಸನ್ನು ನನಸು ಮಾಡಲು ದೇಶದ ಜನರು ತಮ್ಮನ್ನು ತಾವು ಸ್ವಚ್ಛತೆಗೆ ಸಮಪರ್ಿಸಿಕೊಳ್ಳಬೇಕು ಎಂದು ಕರೆ ನೀಡಿದರು.
   ಅವರು ದೆಹಲಿಯಲ್ಲಿ ವಿಡಿಯೊ ಕಾನ್ಫರೆನ್ಸ್ ಮೂಲಕ ದೇಶಾದ್ಯಂತ ಪ್ರಮುಖ ಧಾಮರ್ಿಕ ನಾಯಕರ ಜೊತೆ ಮತ್ತು ಗಣ್ಯರ ಜೊತೆ ಸಂವಾದ ನಡೆಸಿದರು. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಅಮಿತಾಬ್ ಬಚ್ಚನ್, ರತನ್ ಟಾಟಾ ಮೊದಲಾದವರು ಸ್ವಚ್ಛ ಅಭಿಯಾನದಲ್ಲಿ ತಮ್ಮ ಕೆಲಸದ ಅನುಭವಗಳನ್ನು ಹಂಚಿಕೊಂಡರು.
ದೇಶದಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ಶೇಕಡಾ 40ರಿಂದ ಶೇಕಡಾ 90ರಷ್ಟು ಶುಚಿತ್ವವಾಗಿದೆ. 450ಕ್ಕೂ ಹೆಚ್ಚು ಜಿಲ್ಲೆಗಳು ಬಯಲು ಶೌಚ ಮುಕ್ತವಾಗಿದೆ ಎಂದರೆ ಆಶ್ಚರ್ಯವಾಗಬಹುದು. 20 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು ಕಳೆದ ನಾಲ್ಕು ವರ್ಷಗಳಲ್ಲಿ ಬಯಲು ಶೌಚ ಮುಕ್ತವಾಗಿದೆ. ಸ್ವಚ್ಛ ಹಿ ಸೇವಾ ಅಭಿಯಾನ ಆರಂಭದ ದಿನವಾದ ಇಂದು ಐತಿಹಾಸಿಕ ದಿನವಾಗಿದೆ ಎಂದು ಪ್ರಧಾನಿ ಬಣ್ಣಿಸಿದರು.
   ಉತ್ತರ ಪ್ರದೇಶ ರಾಜ್ಯ ಅಕ್ಟೋಬರ್ 2 ಇದೇ ವರ್ಷ ಬಯಲು ಶೌಚ ಮುಕ್ತ ರಾಜ್ಯ ಎಂದು ಘೋಷಿಸಲಾಗುವುದು ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಿಳಿಸಿದರು.ಕಳೆದ ವರ್ಷ ತಮ್ಮ ಸಕರ್ಾರ ಅಧಿಕಾರಕ್ಕೆ ಬಂದ ಮೇಲೆ 1.36 ಕೋಟಿಗೂ ಅಧಿಕ ಶೌಚಾಲಯಗಳನ್ನು ನಿಮರ್ಾಣ ಮಾಡಲಾಗಿದೆ ಎಂದರು. ಇದಕ್ಕೆ ಪ್ರಧಾನಿ ಪ್ರಶಂಸೆ ವ್ಯಕ್ತಪಡಿಸಿದರು.
   ಇದೇ ಸಂದರ್ಭದಲ್ಲಿ ಪ್ರಧಾನಿ ವಿಡಿಯೊ ಕಾನ್ಫರೆನ್ಸ್ ಮೂಲಕ ಕನರ್ಾಟಕ,ಕೇರಳ, ತಮಿಳುನಾಡು, ರಾಜಸ್ತಾನ, ಹಯರ್ಾಣ, ಬಿಹಾರ, ಅಸ್ಸಾಂನ ಜನತೆಯೊಂದಿಗೆ ಸಂವಾದ ನಡೆಸಿದರು.ಪೊಂಗಾಂಗ್ ಕೆರೆ ಮತ್ತು ಸುತ್ತಮುತ್ತಲ ಕೆರೆ ಮತ್ತು ಧಾಮರ್ಿಕ ಸ್ಥಳಗಳನ್ನು ಸ್ವಚ್ಛಗೊಳಿಸುತ್ತಿರುವ ಇಂಡೊ-ಟಿಬೆಟಿಯನ್ ಗಡಿ ಭದ್ರತಾ ಸಿಬ್ಬಂದಿಯೊಂದಿಗೆ ಕೂಡ ಮಾತನಾಡಿ ಅಲ್ಲಿನ ಮಾಹಿತಿ ಪಡೆದರು. ಗುರುದ್ವಾರದ ಸಿಖ್ ಧಾಮರ್ಿಕ ಗುರುಗಳು ಮತ್ತು ಅಜ್ಮಿರ್ ಶರೀಫ್ ದಗರ್ಾದ ಮುಸ್ಲಿಂ ಮುಖಂಡರೊಂದಿಗೆ ಕೂಡ ಸಂವಾದ ನಡೆಸಿದರು.
ತಮ್ಮ ಸಕರ್ಾರ ಕಸದಿಂದ ಸಂಪತ್ತು ಗಳಿಸುವ ಕುರಿತು ಕಾರ್ಯತತ್ಪರವಾಗಿದ್ದು ಜನರು ಅದಕ್ಕೆ ಕೈಜೋಡಿಸಬೇಕು, ಸಕರ್ಾರವೊಂದರಿಂದಲೇ ಈ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಮನವಿ ಮಾಡಿಕೊಂಡರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries