ತಲೇಕಳ ಶ್ರೀಕ್ಷೇತ್ರದಲ್ಲಿ ಶ್ರೀ ಗಣೇಶ ಚತುಥರ್ಿ
ಮಂಜೇಶ್ವರ: ತಲೇಕಳ ಶ್ರೀ ಸದಾಶಿವ ರಾಮ ವಿಠಲ ದೇವಸ್ಥಾನದಲ್ಲಿ ಶ್ರೀ ಗಣೇಶ ಚತುಥರ್ಿ ಪರ್ವದ ವಿಶೇಷ ಆಚರಣೆಯನ್ನು ಶ್ರದ್ಧಾ ಭಕ್ತಿ ಸಡಗರದಿಂದ ಆಚರಿಸಲಾಯಿತು.
ಕಾರ್ಯಕ್ರಮಗಳ ಅಂಗವಾಗಿ ಉಷಾ:ಕಾಲ ಪೂಜೆಯೊಂದಿಗೆ ಮೊಕ್ತೇಸರ, ಪವಿತ್ರಪಾಣಿ ಎಸ್.ವಾಸುದೇವ ಭಟ್ ಅವರ ನೇತೃತ್ವದಲ್ಲಿ ಹಾಗೂ ಶಿವರಾಜ್ರವರ ಸಹಕಾರದೊಂದಿಗೆ ಶ್ರೀ ಗಣಪತಿ ದೇವರ ಸನ್ನಿಧಿಯಲ್ಲಿ ಕ್ಷೀರಾಭಿಷೇಕ, ದಧಿಯಾಭಿಷೇಕ, ಘೃತಾಭಿಷೇಕ, ಮಧುವಾಭಿಷೇಕ, ಶರ್ಕರಾಭಿಷೇಕ, ಫಲಾಭಿಷೇಕಗಳಿಂದ ಹಾಗೂ ಜಲಾಭಿಷೇಕಗಳಿಂದ ಸೇವೆಗೈದು ಕಬ್ಬಿನ ಶರ್ಕರಾ ಮಂಟಪವನ್ನು ಶ್ರೀ ದೇವರಿಗೆ ರಚಿಸಿ ಶ್ರೀಗಂಧ, ಪುಷ್ಪಾಧಿಗಳಿಂದ ವಿಶೇಷ ರೀತಿಯಲ್ಲಿ ಪೂಜಿಸಲಾಯಿತು. ಶ್ರೀ ಗಣಯಾಗ, ಹೋಮ ಹವನಗಳನ್ನು ನಡೆಸಲಾಯಿತು. ಶ್ರೀ ಸದಾಶಿವ ದೇವರಲ್ಲಿ ಹಾಗೂ ಪರಿವಾರ ದೇವರುಗಳ ಸನ್ನಿಧಿಯಲ್ಲಿ ವಿಶೇಷ ಅಲಂಕಾರದೊಂದಿಗೆ ಪೂಜೆಯನ್ನು ಸಲ್ಲಿಸಲಾಯಿತು.