HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                ಹೊಸ ತಲೆಮಾರಿಗೆ ಜಾನಪದ ಸಂಸ್ಕೃತಿಯ ಅರಿವು ಮೂಡಿಸಬೇಕು-ವಿ.ಪರಿಷತ್ತು ಸಭಾಪತಿ ಹೊರಟ್ಟಿ ಅಭಿಮತ
                      ಗಡಿನಾಡ ಜಾನಪದ ಉತ್ಸವ ಉದ್ಘಾಟಿಸಿ ಹೇಳಿಕೆ
    ಬದಿಯಡ್ಕ: ಗಡಿನಾಡಲ್ಲಿರುವಷ್ಟು ಕಲೆ, ಸಾಂಸ್ಕೃತಿಕ, ಜಾನಪದ ಚಟುವಟಿಕೆಗಳು ನಾಗರಿಕ ಸಮಾಜ ನಿಮರ್ಾಣದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಕನರ್ಾಟಕದಲ್ಲಿಲ್ಲ. ಕಲೆ ಸಂಸ್ಕೃತಿ ಉಳಿಯುವಿಕೆಗೆ ಜಾನಪದ ಉತ್ಸವಗಳು ಸಹಕಾರಿ. ಆಧುನಿಕ ಮಾಧ್ಯಮಗಳ ದಾಸರಾಗಿ ಹೊಸ ಸಮಾಜ ಬದಲಾಗಿರುವುದರಿಂದ ಮೂಲ ಸಂಸ್ಕ್ರತಿಗೆ ತೀವ್ರ ಹಿನ್ನಡೆಯಾಗುತ್ತಿರುವುದು ಆತಂಕಕಾರಿ ಎಂದು ಕನರ್ಾಟಕ ವಿಧಾನ ಪರಿಷತ್ತು ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದರು.
   ಕನರ್ಾಟಕ ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕ ಹಾಗೂ ಸುಬ್ಬಯ್ಯಕಟ್ಟೆ ಕನ್ನಡ ಸಂಘ ಮತ್ತು ಗಡಿನಾಡ ಸಾಹಿತ್ಯ-ಸಾಂಸ್ಕೃತಿಕ ಅಕಾಡೆಮಿ ಕಾಸರಗೋಡು ಸಂಯುಕ್ತ ಆಶ್ರಯದಲ್ಲಿ ಕನರ್ಾಟಕ ಪ್ರವಾಸೋಧ್ಯಮ ಇಲಾಖೆ, ಕನ್ನಡ ಸಂಸ್ಕೃತಿ ಇಲಾಖೆ, ಕೊಡವ ಸಾಹಿತ್ಯ ಅಕಾಡೆಮಿ, ಬ್ಯಾರಿ ಹಾಗೂ ಅರೆಭಾಷೆ ಅಕಾಡೆಮಿ, ಕಲ್ಕೂರ ಪ್ರತಿಷ್ಠಾನ ಮಂಗಳೂರು, ಮೀಡಿಯಾ ಕ್ಲಾಸಿಕಲ್ಸ್, ಜಿ.ಕೆ ಚಾರಿಟೇಬಲ್ ಟ್ರಸ್ಟ್ ಬದಿಯಡ್ಕ, ಕ್ರೀಯೆಟಿವ್ ಕಾಲೇಜು ಬದಿಯಡ್ಕ ಇವುಗಳ ಸಹಯೋಗದೊಂದಿಗೆ ಬದಿಯಡ್ಕದ ಗುರುಸದನ ಸಭಾ ಭವನದಲ್ಲಿ ಶನಿವಾರ ಆಯೋಜಿಸಲಾದ ಗಡಿನಾಡ ಜಾನಪದ ಉತ್ಸವ ಕಾರ್ಯಕ್ರಮವನ್ನು ದೀಪ ಬೆಳಗಿಸಿ, ಡೋಲು ಬಡಿದು ಉದ್ಘಾಟಿಸಿ ಅವರು ಮಾತನಾಡಿದರು.
   ಭಾರತೀಯ ವಿವಿಧ ಭಾಷೆ ಮತ್ತು ಕಲೆಗಳಿಗೆ ಶ್ರೀಮಂತ ಪರಂಪರೆಯಿದ್ದು, ಪರಸ್ಪರ ಸಾಂಸ್ಕೃತಿಕ ಸಂಯೋಜನೆಗಳೊಂದಿಗೆ ಒಂದಾಗಿ ನಡೆದುಬಂದಿರುವುದು ಪುಣ್ಯಭೂಮಿಯ ಸಂಕಲ್ಪ ಶಕ್ತಿಯಿಂದಾಗಿದೆ. ಅಂತಹ ಸಾಂಸ್ಕೃತಿಕ, ಜಾನಪದ ಪರಂಪರೆಯನ್ನು ಹೊಸ ತಲೆಮಾರಿಗೆ ದಾಟಿಸುವ ನಿಟ್ಟಿನಲ್ಲಿ ಪ್ರಯತ್ನಗಳು ಆಗಬೇಕು ಎಂದು ಅವರು ಕರೆನೀಡಿದರು.
   ಬಳಿಕ ಅವರು ಮಾತನಾಡಿ ಕೇರಳದ ಹಿರಿಯ ಸಜ್ಜನ ರಾಜಕಾರಣಿ, ದಿ.ಎ.ಕೆ.ಗೋಪಾಲ್ ಅವರು ತಮ್ಮ ರಾಜಕೀಯ ಜೀವನಕ್ಕೆ ಬಹಳ ಪ್ರಭಾವ ಬೀರಿದವರಾಗಿದ್ದರು ಎಂದು ನೆನಪಿಸಿದರು.
   ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಕನರ್ಾಟಕದ ಅರಣ್ಯ ಮತ್ತು ಪರಿಸರ ಖಾತೆ ಸಚಿವ ಆರ್.ಶಂಕರ್ ಅವರು ಮಾತನಾಡಿ, ಕಾಸರಗೋಡಿನ ಕನ್ನಡ ಭಾಷೆ ಸಂಸ್ಕೃತಿ ಹಾಗೂ ಅದರೊಂದಿಗೆ ಮಿಳಿತಗೊಂಡಿರುವ ಸಹ ಭಾಷೆಗಳ ಬೆಳವಣಿಗೆಗಳಿಗೆ ಮುನ್ನಡೆಸುತ್ತಿರುವ ಕಾರ್ಯಕ್ರಮಗಳು ಇತರೆಡೆಗಳಿಗೆ ಮಾದರಿ ಎಂದು ತಿಳಿಸಿದರು. ಯುವ ಸಮಾಜದ ಆರೋಗ್ಯಪೂರ್ಣ ಸಂರಚನೆಗೆ ಪರಂಪರೆಯನ್ನು ಅವರಿಗೆ ಪರಿಚಯಿಸುವ ಚಟುವಟಿಕೆಗಳು ಎಂದಿಗೂ ಪ್ರೇರಣದಾಯಿ ಎಂದು ತಿಳಿಸಿದರು.
  ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಅಧ್ಯಕ್ಷ ಪ್ರಭಾಕರ ಕಲ್ಲೂರಾಯ ಬನದಗದ್ದೆ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಕಾಸರಗೋಡು ಸಂಸದ ಪಿ.ಕರುಣಾಕರನ್, ಶಾಸಕ ಎನ್.ಎ.ನೆಲ್ಲಿಕುನ್ನು, ಮಂಜೇಶ್ವರ ಬ್ಲಾಕ್ ಪಂಚಾಯತು ಅಧ್ಯಕ್ಷ ಎಕೆಎಂ ಅಶ್ರಫ್, ಕನ್ನಡ ಸಾಹಿತ್ಯ ಪರಿಷತ್ತು ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಜಿಲ್ಲಾ ಪೋಲೀಸ್ ವರಿಷ್ಠ ಡಾ.ಎ.ಶ್ರೀನಿವಾಸ್, ಮಂಗಳೂರು ಆಕಾಶವಾಣಿಯ ಕಾರ್ಯನಿರ್ವಹಣಾಧಿಕಾರಿ ಡಾ.ಸದಾನಂದ ಪೆರ್ಲ, ಕೇರಳ ಸರಕಾರದ ಸಾಂಸ್ಕೃತಿಕ ಸಂಸ್ಥೆ ಭಾರತ್ ಭವನ್ ನ ಸದಸ್ಯ ಶಂಕರ ರೈ ಮಾಸ್ತರ್, ಕನರ್ಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಕರಂಬಾರ್ ಮೊಹಮ್ಮದ್  ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದರು.
   ಜಿಲ್ಲಾ ಪಂಚಾಯತು ಸದಸ್ಯ ನ್ಯಾಯವಾದಿ ಕೆ.ಶ್ರೀಕಾಂತ್, ಬದಿಯಡ್ಕ ಗ್ರಾ.ಪಂ. ಮಾಜಿ ಅಧ್ಯಕ್ಷ ಮಾಹಿನ್ ಕೇಳೋಟ್, ಹಾಲಿ ಸ್ಥಾಯೀ ಸಮಿತಿ ಅಧ್ಯಕ್ಷ ಶ್ಯಾಮ್ ಪ್ರಸಾದ್ ಮಾನ್ಯ, ಬ್ಲಾ.ಪಂ. ಸದಸ್ಯ ಅವಿನಾಶ್ ರೈ, ಚಂದ್ರಹಾಸ ರೈ ಪೆರಡಾಲಗುತ್ತು, ಬಿ. ಬಾಲಕೃಷ್ಣ ಅಗ್ಗಿತ್ತಾಯ, ಗೋಪಾಲಕೃಷ್ಣ ಕುಲಾಲ್ ವಾಂತಿಚ್ಚಾಲ್, ಝಡ್ ಎ ಕಯ್ಯಾರ್, ಶ್ರೀಕಾಂತ್ ನಾರಾಣ್ ನೆಟ್ಟಣಿಗೆ, ಹರೀಶ್ ನಾರಂಪಾಡಿ, ಶಿವದಾಸ್, ನರೇಂದ್ರ ಬದಿಯಡ್ಕ ಉಪಸ್ಥಿತರಿದ್ದರು. ಕನರ್ಾಟಕ ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕಾಧ್ಯಕ್ಷ ಎ.ಆರ್.ಸುಬ್ಬಯ್ಯಕಟ್ಟೆ ಉಪಸ್ಥಿತರಿದ್ದರು.
   ಸಮಾರಂಭದಲ್ಲಿ ಹಿರಿಯ ಲೇಖಕ, ಭಾಷಾಂತರಕಾರ ಕೇಳು ಮಾಸ್ತರ್ ಅಗಲ್ಪಾಡಿಯವರನ್ನು ತಮ್ಮ ಸಾಹಿತ್ಯ ಸೇವೆಗೆ ಜಾನಪದ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಜೊತೆಗೆ ಕೇರಳದ ನೆರೆ ಸಂತ್ರಸ್ಥ ನಿಧಿಗೆ ಜಾನಪದ ಪರಿಷತ್ತು ಗಡಿನಾಡ ಘಟಕದ ವತಿಯಿಂದ ಸಂಗ್ರಹಿಸಲಾದ ನೆರವು ನಿದಿಯನ್ನು ಗಣ್ಯರು ಸಂಸದರಿಗೆ ಈ ಸಂದರ್ಭ ಹಸ್ತಾಂತರಿಸಿದರು. ರುತಿಕ್ ಯಾದವ್ ಪ್ರಾರ್ಥನಾ ಗೀತೆ ಹಾಡಿದರು. ಕನರ್ಾಟಕ ಜಾನಪದ ಪರಿಷತ್ತು ಗಡಿನಾಡ ಘಟಕದ ಉಪಾಧ್ಯಕ್ಷ ಪ್ರೊ.ಎ.ಶ್ರೀನಾಥ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.ಅಖಿಲೇಶ್ ನಗುಮುಗಂ ವಂದಿಸಿದರು. ವಿದ್ಯಾ ಗಣೇಶ್ ಅಣಂಗೂರು, ಸಂಧ್ಯಾಗೀತಾ ಬಾಯಾರು ಸಹಕರಿಸಿದರು.



     

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries