ಗ್ರಂಥಾಲಯಗಳು ಊರಿನ ದೇವಾಲಯ-ಗಣರಾಜ ಕಡೆಕಲ್ಲು
ಬದಿಯಡ್ಕ: ಗ್ರಂಥಾಲಯಗಳು ಊರಿನ ದೇವಾಲಯವಿದ್ದಂತೆ. ಅಲ್ಲಿರುವ ಪುಸ್ತಕಗಳು ಸರಸ್ವತಿ. ದೀಪವು ಹೇಗೆ ಕತ್ತಲೆಯನ್ನು ಹೊಡೆದೋಡಿಸುತ್ತದೋ ಹಾಗೆಯೇ ಗ್ರಂಥಾಲಯದ ಅಕ್ಷರದಿಂದ ಅರಿವು ಬೆಳಗುತ್ತದೆ ಎಂದು ಪ್ರಗತಿಪರ ಕೃಷಿಕ, ಸಾಮಾಜಿಕ ಕಾರ್ಯಕರ್ತ ಗಣರಾಜ ಕಡೆಕಲ್ಲು ಹೇಳಿದರು.
ಏತಡ್ಕದ ಕುಂಬ್ಡಾಜೆ ಗ್ರಾಮ ಸೇವಾ ಸಂಘ ಗ್ರಂಥಾಲಯದ ಆಶ್ರಯದಲ್ಲಿ ಏತಡ್ಕ ಸಮಾಜ ಮಂದಿರದಲ್ಲಿ ಇತ್ತೀಚೆಗೆ ಜರಗಿದ ಗ್ರಂಥಾಲಯ ವಾರಾಚರಣೆ ಸಮಾರೋಪ ಮತ್ತು ಗ್ರಂಥಾಲಯ ದಿನಾಚರಣೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅಕ್ಷರ ದೀಪವನ್ನು ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ಆದರ್ಶ ಗ್ರಂಥಾಲಯದ ಪರಿಕಲ್ಪನೆಯನ್ನು ದೇಶ ಸುತ್ತಿ ನೋಡು,ಕೋಶ ಓದಿ ನೋಡು ಮೊದಲಾದ ನುಡಿಗಟ್ಟುಗಳೊಂದಿಗೆ ಸಭಿಕರ ಮುಂದೆ ಸೊಗಸಾಗಿ ತೆರೆದಿಟ್ಟರು.
ಅಧ್ಯಕ್ಷತೆ ವಹಿಸಿ ಮಾತನಾಡಿದ, ಗ್ರಂಥಾಲಯದ ಅಧ್ಯಕ್ಷ ಕೆ.ನರಸಿಂಹ ಭಟ್ ಅವರು ಗ್ರಂಥಾಲಯ ವಾರಾಚರಣೆಯ ಮಹತ್ವವನ್ನು ವಿವರಿಸಿ ಮುಂದಿನ ಕಾರ್ಯಕ್ರಮಗಳ ಮಾಹಿತಿ ನೀಡಿದರು.
ಉಪಾಧ್ಯಕ್ಷ ವೈ.ಕೆ.ಗಣಪತಿ ಭಟ್ ಸ್ವಾಗತಿಸಿ, ಕಾರ್ಯದಶರ್ಿ ಕೆ.ಸುಬ್ರಹ್ಮಣ್ಯ ಭಟ್ ವಂದಿಸಿದರು. ಬೆಳಿಗ್ಗೆ ಕೆ.ನರಸಿಂಹ ಭಟ್ ಅವರು ಗ್ರಂಥಾಲಯದ ಧ್ವಜಾರೋಹಣಗೈದರು. ಗ್ರಂಥಾಲಯ ವಾರಾಚರಣೆಯ ಕಾಲದಲ್ಲಿ ಹೊಸ ಸದಸ್ಯರ ನೋಂದಾವಣೆ,ದಾನಿಗಳಿಂದ ಪುಸ್ತಕ ಸಂಗ್ರಹ, ನೆರೆ ಪರಿಹಾರ ನಿಧಿಗೆ ಧನ ಶೇಖರಣೆ ಮೊದಲಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು.