HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                ಕುಂಟಾರು ಗಣೇಶೋತ್ಸವದಲ್ಲಿ ರಂಗಸಿರಿ
    ಬದಿಯಡ್ಕ: ಕುಂಟಾರು ಅಯ್ಯಪ್ಪ ಭಜನಾಮಂದಿರದಲ್ಲಿ ಶ್ರೀ ಸಾರ್ವಜನಿಕ ಗಣೇಶೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಬದಿಯಡ್ಕದ ರಂಗಸಿರಿ ಸಾಂಸ್ಕೃತಿಕ ವೇದಿಕೆಯ ವಿದ್ಯಾಥರ್ಿಗಳಿಂದ ಯಕ್ಷಗಾನ ಬಯಲಾಟ ನಡೆಯಿತು. "ಶಕಟಧೇನುಕ ಭಂಜನ, ಕಾಳಿಂಗ ಮರ್ದನ, ಶ್ರೀಹರಿ ದರ್ಶನ ಕಥಾಭಾಗವನ್ನು ಪ್ರದಶರ್ಿಸಲಾಯಿತು. ಕುಂಟಾರಿನ ಪರಿಸರದಲ್ಲಿ ಸಾಂಸ್ಕೃತಿಕ ಜೀವಂತಿಕೆಗೆ ಕಾರಣವಾದ ಶ್ರೀ ಮಹಾವಿಷ್ಣು ಕೃಪಾಶ್ರಿತ ಯಕ್ಷಗಾನ ಕಲಾಸಂಘದ ಸ್ಥಾಪಕಾಧ್ಯಕ್ಷ ದಿ. ಮಾಟೆಡ್ಕ ಪುರುಷೋತ್ತಮ ರಾವ್ ಸಂಸ್ಮರಣೆಯ ಅಂಗವಾಗಿ ಕಾರ್ಯಕ್ರಮವು ಪ್ರಯೋಜಿತಗೊಂಡಿತ್ತು. ಯಕ್ಷಗಾನ ಹಿಮ್ಮೇಳ, ಮುಮ್ಮೇಳಗಳಲ್ಲಿ ನೈಪುಣ್ಯ ಪಡೆದಿರುವ ಯಕ್ಷಗಾನ ಗುರು ಬಾಯಾರಿನ ಸೂರ್ಯನಾರಾಯಣ ಪದಕಣ್ಣಾಯ ಅವರ ದಕ್ಷ ನಿದರ್ೇಶನದಲ್ಲಿ ವಿದ್ಯಾಥರ್ಿಗಳು ಸೊಗಸಾಗಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ರಾತ್ರಿ ಭೋಜನದ ತರುವಾಯವೂ ತುಂಬಿತುಳುಕಿದ ಸಭಾಂಗಣವು ಪ್ರದರ್ಶನದ ಯಶಸ್ವಿಗೆ ಸಾಕ್ಷಿಯಾಯಿತು.
   ಪಾತ್ರವರ್ಗದಲ್ಲಿ ಕೃಷ್ಣನಾಗಿ ಕಿಶನ್ ಅಗ್ಗಿತ್ತಾಯ ಹಾಗೂ ಉಪಾಸನಾ, ವಿಜಯನಾಗಿ ಶಶಾಂಕ ಶಂಕರ, ಶಕಟಾಸುರನಾಗಿ ಆಕಾಶ್, ಧೇನುಕಾಸುರನಾಗಿ ಶ್ರೀಜಾ, ವಾತಾಸುರನಾಗಿ ಮನೀಶ್,  ಪ್ರಲಂಬಾಸುರನಾಗಿ ಸಂದೇಶ್, ಕಾಳಿಂಗನಾಗಿ ನಂದಕಿಶೋರ್, ಗರುಡನಾಗಿ ಅಭಿಜ್ಞ, ಹೂಹೂ ಗಂಧರ್ವನಾಗಿ ವಿದ್ಯಾ ಕುಂಟಿಕಾನಮಠ, ರಾಣಿಯರಾಗಿ ಸುಪ್ರೀತಾ ಹಾಗೂ ಗಾಯತ್ರಿ ದೇವಲ, ಋಷಿಯಾಗಿ ಹರ್ಷಪ್ರಸಾದ್, ಇಂದ್ರದ್ಯುಮ್ನನಾಗಿ ರಾಕೇಶ್, ಅಗಸ್ತ್ಯ ಋಯಾಗಿ ಶ್ರೀಹರಿ, ಗಜೇಂದ್ರನಾಗಿ ಶ್ರೀಶ ಪಂಜಿತ್ತಡ್ಕ, ಮಕರಿಯಾಗಿ ರಾಜೇಂದ್ರ ವಾಂತಿಚ್ಚಾಲು ಪಾತ್ರಗಳಿಗೆ ಜೀವಂತಿಕೆ ತುಂಬಿದರು.
  ಭಾಗವತರಾಗಿ ರಮೇಶ್ ಭಟ್ ಪುತ್ತೂರು ಹಾಗೂ ವಾಸುದೇವ ಕಲ್ಲೂರಾಯ ಸಹಕರಿಸಿದರು. ಮದ್ದಳೆಯಲ್ಲಿ ಗೋಪಾಲಕೃಷ್ಣ ನಾವಡ ಮಧೂರು, ಚೆಂಡೆಯಲ್ಲಿ ಲಕ್ಷ್ಮೀನಾರಾಯಣ ಅಡೂರು ಅವರ ಕೈಚಳಕ ಮೇಳೈಸಿತು. ಚಕ್ರತಾಳದಲ್ಲಿ ಉದನೇಶ ಕುಂಬ್ಳೆ ಸಹಕರಿಸಿದರು. ನೇಪಥ್ಯದಲ್ಲಿ ಕೇಶವ ಆಚಾರ್ಯ ಕಿನ್ಯ, ರಾಜೇಶ ಕುಂಪಲ, ಗಿರೀಶ ಕುಂಪಲ ಸಹಕರಿಸಿದರು.

   

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries