ಚೌತಿ ಹಬ್ಬಾಚರಣೆಗೆ ಗಣೇಶ ವಿಗ್ರಹಗಳು ರೆಡಿ
ಮುಳ್ಳೇರಿಯ: ಚೌತಿ ಹಬ್ಬ ಬಂದೇ ಬಿಟ್ಟಿತು. ಅಲ್ಲಲ್ಲಿ ಗಣೇಶ ಹಬ್ಬದ ಆಚರಣೆ ಕಾರ್ಯಕ್ರಮಗಳು ನಡೆಯುತ್ತವೆ. ಸಾರ್ವಜನಿಕವಾಗಿ ಮಾತ್ರವಲ್ಲದೆ, ಆರ್ಯ-ಮರಾಠ ಸಮಾಜದ ದೇವರ ಮನೆಗಳಲ್ಲಿ ಚೌತಿಗೆ ಅದರದ್ದೇ ಆದ ಪ್ರಧಾನ್ಯತೆ ಇದೆ. ಇಂತಹಾ ದೇವರ ಮನೆಗಳಲ್ಲಿ ಗಣೇಶ ವಿಗ್ರಹ ತಯಾರಿಯೂ ಕಲಾತ್ಮಕತೆಯಿಂದ ನಡೆಯುತ್ತದೆ. ಹೀಗೆ ಹೀಗೆ ಕೈಚಳಕದ ಮೂಲಕ ಶ್ರೀ ಗಣೇಶ ವಿಗ್ರಹ ತಯಾರಿಸುವಲ್ಲಿ ಕುಂಟಾರು ಸಮೀಪದ ಎಲಿಕ್ಕಳ ಶ್ರೀ ಅಶ್ವಾರೂಢ ದುಗರ್ಾಪರಮೇಶ್ವರಿ ದೇವರ ಮನೆಯ ಯಾದವ ರಾವ್ ಅವರದು ಪಳಗಿದ ಕೈ.
ದೇವರಮನೆ ಹಾಗೂ ಸಮೀಪ ಪ್ರದೇಶಗಳ ಶ್ರೀ ಗಣೇಶನ ಹಬ್ಬಕ್ಕೆ ಶ್ರೀ ಅಶ್ವಾರೂಢ ದುಗರ್ಾಪರಮೇಶ್ವರೀ ದೇವರ ಮನೆಯು ಗಣಪತಿಯ ವಿಗ್ರಹ ತಯಾರಿ ಕೇಂದ್ರವಾಗುತ್ತಿದೆ. ಈಗ ದೇವರಮನೆಯ ಪ್ರಧಾನರೂ ಆಗಿರುವ ಯಾದವ ರಾವ್ ಕುಂಡಂಗುಳಿಯಲ್ಲಿ ಜಗತ್ತಾಪ್ ಮನೆತನದ ದೇವರ ಮನೆ ಇದ್ದಾಗಲೇ, ಅಂದರೆ ತನ್ನ ಎಳವೆಯಲ್ಲಿಯೇ ಗಣಪತಿಯ ವಿಗ್ರಹ ತಯಾರಿಯಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ಅಂದರೆ ಸುಮಾರು 48 ವರ್ಷಗಳಿಂದ ಗಣೇಶ ವಿಗ್ರಹ ರಚನೆಯ ಅನುಭವಿ. ಸಾಧಾರಣವಾಗಿ ತಮ್ಮದೇ ಆದ ದೇವರ ಮನೆಗಾಗಿ ಮಾತ್ರಾ ಗಣಪತಿಯನ್ನು ತಯಾರಿಸುತ್ತಿದ್ದರು. ಆದರೆ ಇವರ ಪ್ರತಿಭೆಯನ್ನು ಮನಗಂಡು ಕುಂಟಾರು ಸಾರ್ವಜನಿಕ ಶ್ರೀ ಗಣೇಶೋತ್ಸವಕ್ಕಾಗಿ ಗಣೇಶ ವಿಗ್ರಹ ತಯಾರಿಸಿಕೊಡಬೇಕೆಂಬ ಬೇಡಿಕೆಯನ್ನು ಮುಂದಿಟ್ಟಾಗ ಅಂಜುತ್ತಲೇ ಒಪ್ಪಿಕೊಂಡರು. ಪ್ರತಿಭೆಯ ಬಗ್ಗೆ ಎಲ್ಲರ ನಂಬಿಕೆಯು ಇವರ ಕಲಾ ಕಾಯಕಕ್ಕೆ ಪೋಷಣೆ ನೀಡಿತು. ಹಾಗೆಯೇ ಆರಂಭಗೊಂಡ ಸಾರ್ವಜನಿಕ ಕಾರ್ಯಕ್ರಮಗಳಿಗಾಗಿ ವಿಗ್ರಹ ತಯಾರಿಗೆ ವರ್ಷದಿಂದ ವರ್ಷಕ್ಕೆ ಬೇಡಿಕೆ ಹೆಚ್ಚಾಗುತ್ತಿದೆ. ಆದರೆ ಸಮಯದ ಕೊರತೆಯಿಂದಾಗಿ ಒಪ್ಪಿಕೊಳ್ಳಲು ಕಷ್ಟವಾಗುತ್ತಿದೆ ಎಂದು ಇವರು ಹೇಳುತ್ತಾರೆ. ಈ ವರ್ಷ 4 ವಿಗ್ರಹಗಳು ಪೂಜಿಸಲು ತಯಾರಾಗಿವೆ. ಕುಂಟಾರು ಸಾರ್ವಜನಿಕ ಗಣೇಶೋತ್ಸವ ಸಮಿತಿಗಾಗಿ, ಚೆರ್ಲಕೈ ದೇವರಮನೆ, ಮಾಟೆಡ್ಕ ಹೊಳೆಕರೆ ದೇವರ ಮನೆಗೆ ಹಾಗೂ ತಮ್ಮದೇ ಅಶ್ವಾರೂಢ ದೇವರ ಮನೆಯ ಆಚರಣೆಗಾಗಿ ಇಲ್ಲಿ ವಿಗ್ರಹಗಳನ್ನು ತಯಾರಿಸಲಾಗುತ್ತಿದೆ. ವೇಣು ಮಂಚಿ ಬಿಸಿರೋಡ್ ಇವರು ವಿಗ್ರಹಗಳಿಗೆ ಬಣ್ಣ ನೀಡಲು ಸಹಕರಿಸುತ್ತಿದ್ದಾರೆ. ಇವರಿಗೆ ಸ್ಥಳೀಯ ಯುವಕರು ಸಹಾ ಸಹಕರಿಸುತ್ತಿದ್ದಾರೆ.
ಗಣಪತಿ ವಿಗ್ರಹಗಳು ಆವೆಮಣ್ಣಿನಿಂದ ತಯಾರಿಸುವುದು ಕ್ರಮ. ಆದರೆ ಇಂದಿನ ದಿನಗಳಲ್ಲಿ ಪ್ಲಾಸ್ಟರೋ ಪೇರಿಸ್ನಲ್ಲಿ ತಯಾರಿಸಿದ ವಿಗ್ರಹಗಳಿಗೆ ಶರಣಾಗುತ್ತಿದ್ದಾರೆ. ಆವೆಮಣ್ಣಿನ ಕೊರತೆಯೂ ಸಮಸ್ಯೆಯಾಗುತ್ತಿದೆ. ಕುಂಡಂಗುಳಿಯಲ್ಲಿರುವ ಹೆಂಚಿನ ಕಾಖರ್ಾನೆಯಿಂದ ಒಂದು ತಿಂಗಳ ಮುಂಚಿತವಾಗಿ ಮಣ್ಣನ್ನು ತಂದು ಹದಮಾಡಿ ಈ ಕಾಯಕಕ್ಕೆ ಚಾಲನೆ ನೀಡಲಾಗುತ್ತಿದೆ. ಗಣೇಶ ವಿಗ್ರಹ ತಯಾರಿಗೆ ಸಾಕಷ್ಟು ಶ್ರದ್ಧೆ, ಸಮಯ ಮತ್ತು ಶ್ರಮ ಅನಿವಾರ್ಯ. ಪ್ರಧಾನವಾಗಿ ವಿಗ್ರಹಕ್ಕೆ ರೂಪು ನೀಡುವಾಗ ಕಲಾಗಾರಿಕೆ ಅತೀ ಅಗತ್ಯ. ಅದನ್ನು ಎಳವೆಯಲ್ಲಿಯೇ ಹಿರಿಯರು ವಿಗ್ರಹ ರಚಿಸುವಾಗ ನೋಡಿ ಕರಗತ ಮಾಡಿಕೊಂಡ್ಡಿದ್ದರು ಯಾದವ ರಾವ್.
ಇವರು ಓರ್ವ ಯಕ್ಷಗಾನ ಕಲಾವಿದನೂ, ಕೃಷಿ ತಜ್ಞರೆಂದರೂ ತಪ್ಪಲ್ಲ. ಇವರು ಗೇರು, ಮಾವು ಕಶಿ ಕಟ್ಟುವುದರಲ್ಲಿ ಅತೀ ನಿಪುಣರು.
ಸದಾ ಹಸನ್ಮುಖಿಯಾದ ಯಾದವ ಅವರ ಕಲಾ ಸಿರಿವಂತಿಕೆ ಮತ್ತಷ್ಟು ಶೋಬಾಯಮಾನವಾಗಿ ಬೆಳಗಲಿ, ಸೂಕ್ತ ಮನ್ನಣೆಗಳು ಪ್ರಾಪ್ತವಾಗಲಿ.