ಜಗದೋದ್ದಾರನ ಜನ್ಮದಿನವಿಂದು.....ವಿಶೇಷ ಬರಹ:
ಬ್ರಹ್ಮಶ್ರೀ ಕೇಶವ ಭಟ್ ಕೇಕಣಾಜೆ.
ಹೌದು...ಅದೋ ಮತ್ತೆ ಬಂದಿದೆ ಕೃಷ್ಣಾಷ್ಟಮಿ.ಶ್ರಾವಣವೆಂದರೆ ಕೃಷ್ಣಾಷ್ಟಮಿಯೇ ಸ್ಮರಣೆಗೆ ಬರುವಷ್ಟರ ಮಟ್ಟಿಗೆ ಅಚ್ಚಳಿಯದಂತಿದೆ. ಕೃಷ್ಣ ನಮ್ಮೆಲ್ಲರ ಹೃದಯ ಗರ್ಭದಲ್ಲಿ ಮೂಡಿಬರುವ ಸಮಯವಿದು. ಇನ್ನೊಮ್ಮೆ ಬಾಲಕೃಷ್ಣ ನಮ್ಮ ಭಾವನಾ ಗರ್ಭದಲ್ಲಿ ಭಾಸವಾಗಲಿದ್ದಾನೆ! ಆಹಾ... ದೇವಕೀ ವಸುದೇವರ ಪಂಕ್ತಿಯಲ್ಲಿ ನಮಗೂ ಸ್ಥಾನ ಲಭಿಸಲಿದೆ. ದೇವಕಿಯ ಪುತ್ರದರ್ಶನ ಭಾಗ್ಯ ಇಂದು ನಮ್ಮ ಪಾಲಿಗೆ...ವಸುದೇವ ಕಂಡ ಕೃಷ್ಣ ಇಂದು ನಮ್ಮ ಕಣ್ಮುಂದೆ ರಾರಾಜಿಸಲಿರುವನು.ಕೃಷ್ಣನನ್ನು ನಾವಿಂದು ಕಣ್ತುಂಬ ತುಂಬಿಕೊಳ್ಳಿರುವೆವು.
ಹು...ಹರಿಮನೆಯಲ್ಲಿ ಅವತಾರದ ಪೂರ್ವಭಾವೀ ಸಕಲ ಯೋಜನೆಗಳ ರೂಪುರೇಖೆಯು ಅಂತ್ಯಗೊಳ್ಳುತ್ತಿದ್ದಂತೆ ಇತ್ತ ಸೆರೆಮನೆಯಲ್ಲಿ ಭಗವಂತ ಶ್ರೀದೇವಕಿಯ ಗರ್ಭ ಗುಹೆ ಪ್ರವೇಶಿಸಿದ್ದಾನೆ...! ದೇವಕೀ-ವಸುದೇವರ ಆಂತರಂಗಿಕ ಸಾಧನೆಯು ಮೈಯೊಡೆದು ಭಗವದ್ ರೂಪದಲ್ಲಿ ಸಾಕಾರಗೊಂಡಿದೆ. ಸಮಸ್ತ ಪ್ರಕೃತಿಯೇ ಕೃಷ್ಣಾವತಾರೋತ್ಸವ ಸಂಭ್ರಮವನ್ನು ಎದುರು ನಿನೋಡುತ್ತಿದೆ. ಕಾಲವೋ.....ಸಕಲ ಗುಣಗಳಿಂದ ಸಂಪನ್ನಗೊಂಡಿದೆ. ದಿಕ್ಕುಗಳು ಪ್ರಸನ್ನವಾಗಿವೆ. ಗಗನದಲ್ಲಿ ನಕ್ಷತ್ರ ಗ್ರಹ-ತಾರೆಗಳು ನಿರ್ಮಲವಾಗಿ ಮಿಂಚುವುದಕ್ಕೆ ಆರಂಭಿಸಿದ್ದವು. ನಗರ, ಗ್ರಾಮ, ಗೋಶಾಲೆಗಳು ಮಂಗಲಮಯ ವಾತಾವರಣದಿಂದ ಶೋಭಿಸುತ್ತಿವೆ. ನದಿಗಳು ತಿಳಿನೀರಿನಿಂದ ಶಾಂತವಾಗಿ ಪ್ರವಹಿಸುತ್ತಿವೆ. ಸರೋವರಗಳ ಸರಸಿಜಗಳು ಬಿಡುಗಣ್ಣಿನಿಂದ ನೋಡುತ್ತಿವೆ.ವೃಕ್ಷ ರಾಶಿಗಳು ಫಲ ಪುಷ್ಪಗಳಿಂದ ವಿಕಸಿತಗೊಂಡಿದೆ. ಪಕ್ಷ ಜಾತಿಗಳು ತಮಗಿನ್ನು ಭಯವಿಲ್ಲವೆಂದು ಸಂತಸದಿಂದ ಚಿಲಿಗುಟ್ಟುತ್ತಿವೆ. ವಾಯುವು ಸುಗಂಧವನ್ನು ಹೊತ್ತು ಸುಖವಾಗಿ ಬೀಸುತ್ತಿವೆ. ಬ್ರಾಹ್ಮಣರ ನಂದಿಹೋಗಿದ್ದ ಅಗ್ನಿಯು ಇದ್ದಕ್ಕಿಂದಂತೆ ಶಾಂತವಾಗಿ ಉರಿಯಲಾರಂಭಿಸಿತು. ದೇವತೆಗಳ ಮತ್ತು ಸತ್ಪುರುಷರ ಕಂಗೆಟ್ಟ ಮನವು ಪ್ರಸನ್ನವಾಗಿದೆ. ಜಲಪೂರಿವಾದ ಮೇಘಗಳು ಸಮುದ್ರ ತೀರಕ್ಕೆ ಬಂದು ಮಂದ-ಮಂದವಾಗಿ ಗುಡುಗುಟ್ಟುತ್ತಿವೆ. ದೇವ ದುಂದುಬಿಗಳು ಸ್ವರ್ಗದಲ್ಲಿ ಮೊಳಗಿದವು. ಸುಮನಸರು ಸೌಮನಸ್ಸಿನಿಂದ ಸುಮ ದೃಷ್ಟಿಯನ್ನುಗರೆದರು. ಗಂಧರ್ವ ಕಿನ್ನರರು, ಸಿದ್ದ-ಚಾರಣರು ಸುಮಧುರವಾಗಿ ಸ್ತುತಿಸತೊಡಗಿದರು. ಹ್ಞು... ಮಹಾತ್ಮನೊಬ್ಬ ಭುವಿಗಿಳಿಯುವ ಕಾಲಕ್ಕೆ ಸಮಸ್ತ ಚರಾಚರಗಳು ತಮ್ಮನ್ನು ತಾವು ಶ್ರುತೀಕರಿಸಿಕೊಳ್ಳುತ್ತಿವೆ! ಅದು...ಹೌದು... ಯಾರಿಗೆ ಬೇಡ ಕೃಷ್ಣ.ಬೇಡನಿಗೂ ಬೇಕಾದವನೆಂದು ಅವರ ಅವತಾರಾಂತ್ಯದಲ್ಲಿ ತೋರಿಸಿಕೊಟ್ಟ ಯಾವನಿಗೆ ಸಾಕೆಂದೆನಿಸಿಯಾನು....? ಅಥವಾ...ಅವನನ್ನು ನೋಡಿ-ನೋಡಿ ಸಾಕೆಂದವರಾರು...ಈ ಜಗದೊಳು...?
ವ್ವಾ...ದೇವಕಿಯು ದೇವರೂಪಿಣಿಯೇ ಆಗಿದ್ದಾಳೆ. ದೇವಕೀ ವಸುದೇವರಿಗೆ ಇನ್ನೇನು ಬೇಕು ತಮ್ಮ ಜೀವಿತದಲ್ಲಿ...? ದೇವಕಿಗೆ ಇನ್ನೆಲ್ಲಿವೆ...ಹಿಂದಣ ದುಃಖ ಕೋಟಳೆಗಳು...? ವಸುದೇವ ಕೃತಾರ್ಥನಾದ. ಸರ್ವ ಗುಹಾವಾಸಿಯಾದ ಭಗವಂತ ದೇವಕಿಯ ಗರ್ಭ ಗುಹಾವಾಸಿಯಾಗಿ ಭರತ ಖಂಡದ ಮಣ್ಣಿನಲ್ಲಿ ಪ್ರಕಟಗೊಳ್ಳುವುದರಲ್ಲಿದ್ದಾನೆ...! ಅರಮನೆಯಲ್ಲಿ ಕರಾಳ ದಿನವಾಗಿದೆ.! ಸೆರೆಮನೆಯಲ್ಲಿ ನಿರಾಳ ದಿನವಾಗಿದೆ.! ಸ್ವಾಮಿಗೆ ಸೆರೆಮನೆಯಾದರೇನು...ಅರಮನೆಯಾದರೇನು...?ಹಗಲಾದರೇನು....ಇರುಳಾದರೇನು...?ಸಮಯಾಸಮಯ ಉಂಟೇ ಭಕ್ತ ವತ್ಸಲನಿಗೆ....? ಅವನಿಚ್ಚೆಯಿಂದ ವಿಷವೂ ಅಮೃತವಾಗಿದೆ!ಅಮೃತವೋ ವಿಷವಾಗಿದೆ. ಸೆರೆಮನೆಯೂ ಅರಮನೆಯಾದೀತು...ಕತ್ತಲೂ ಹಗಲಾದೀತು! ಶುಭವಾದ ಆಮಂಗಲ ಮುಹೂರ್ತದಲ್ಲಿ ಮೂಡಣ ದೆಸೆಯಿಂದ ಉದಯಿಸುವ ಸೂರ್ಯನೋಪಾದಿಯಲ್ಲಿ ಮಧ್ಯರಾತ್ರಿಯ ಕಾಲದಲ್ಲಿ ಉದಯಿಸಿದ ನೋಡಿ! ಭಗವಂತ ಅದ್ಬುತ ಬಾಲಕನಾಗಿ ಸಂಸಾರದ ಸೆರೆಯಲ್ಲಿರುವವರನ್ನು ಮುಕ್ತರನ್ನಾಗಿಸಲು ಇರುವವನೆಂಬುದನ್ನು ವಿಶ್ವಕ್ಕೇ ಪ್ರಕಟಿಸಲು ವಿಶ್ವರೂಪಿಯಾಗಿ ಅವತರಿಸಿದ...ವಸುದೇವ-ದೇವಕೀ ಸಮ್ಮುಖದಲ್ಲಿ!
ಇಂತಹ ಜಗವನ್ನೇ ವಿಸ್ಮಯಗೊಳಿಸುವ ಅತಿವಿಸ್ಮಯ ಭಗವದ್ ರೂಪವನ್ನು ಕಂಡನಾ ವಸುದೇವ...! ಅತ್ಯಂತ ವಿಸ್ಮಯಾತಿಶಯದಿಂದ ಅರಳಿದ ವಸುದೇವನ ಕಂಗಳ ಭಾವ ಏನನ್ನೋ ಹೇಳುತ್ತಿತ್ತು..ಅಂತೂ...ಸ್ಮಯವಿರುವವರಿಗೆಲ್ಲ ಅತಿವಿಸ್ಮಯನಾಗಿ ಅವತರಿಸಿದ್ದೇನೆ ಎಂದು ತೋರಿಸಿಯೇ ಬಿಟ್ಟ....!!
ಪ್ರಕೃತಿಯು ಕೃತಾರ್ಥಳಾದಳು. ದೇವಕೀ ವಸುದೇವರಿಗೆ ಪರಮಾನಂದ. ಇದು ಕೃಷ್ಣಾವತಾರದ ಸಂಭ್ರಮ. ಇದು ಕೃಷ್ಣನೆಂಬುದಕ್ಕೆ ಸಾಕ್ಷಿ. ಯಾರು, ಯಾರಿಗೆ, ಹೇಗೆ-ಹೇಗೆ ಒದಗಿಬಂದ....?ಅವನ ಲೋಕಸಂಗ್ರಹ ಕಾರ್ಯದ ಶೈಲಿ ಹೇಗೆ....? ತಮಃ ಪ್ರಧಾನವಾಗಿರುವ ನಿಶೆಯಲ್ಲಿ ಅವತರಿಸಿ ಕಂಸಾದಿ ತಾಮಸರಿಗೆ ಭಯಜನಕನಾದ ತಮೋಭ್ಬೂತವಾದ ನಡುವಿರುಳಲ್ಲಿ ರಾತ್ರಿಯನ್ನೇ ಹಗಲು ಮಾಡಿ ವಸುದೇವಾದಿ ಸಾತ್ವಿಕ-ರಾಜಸರಿಗೆ ದಿವ್ಯಜ್ಯೋತಿಯಾಗಿ ಕಂಡುಬಂದ! ಅಳುವ ಜಗತ್ತಿಗೆ ಆಳುವವನಾಗಿ ಪ್ರಕಟಗೊಂಡ. ಯಶೋಧಾದಿಗಳ ಅಜ್ಞಾತ ಭಕ್ತಿಗೆ ಅಜ್ಞಾತವಾಗಿಯೇ ಒಲಿದುಬಂದ. ಗೋಪಾಲಕರ ನಿರ್ವಂಚಿತ ಸ್ನೇಹ ಭಾವದಲ್ಲಿ ಸೇರಿಹೋದ.! ಗೋಪಿಕಾದಿ ಸ್ತ್ರೀಯರ ನಿಷ್ಕಲ್ಮಷ ಪ್ರೇಮಕ್ಕೆ ಸಾಥಿಯಾದ! ಅವತರಿಸಿದಂದಿನಿಂದಲೇ ಧನುಜ ಶಿಕ್ಷಣಕ್ಕೆಂದೇ ತಾನು ಬಂದವನೆಂಬುದನ್ನು ತೋರಿಸುತ್ತಾ ಬಂದ! ಮತ್ತೆ...ಕೊಳಲನ್ನು ಊದುತ್ತಾ ಬಂದಾಗ ಮರಳಾಗದವರು ಅದಾರು....?
ಕೃಷ್ಣಾ.......ಎಂದ ಮಾತ್ರಕ್ಕೆ ಏನೋ ಒಂದು ಅವ್ಯಕ್ತವಾದ ಆಕರ್ಷಣೆಯನ್ನು ತರುತ್ತಾ ಅವನ ಪೂತರ್ಿ ಜೀವನ ಚಯರ್ೆಯೇ ಕಣ್ಮುಂದೆ ಬಂದು ನಿಲ್ಲುವಷ್ಟು ಆಕರ್ಷಕ ವ್ಯಕ್ತಿತ್ವ ಆ ದೇವರದ್ದು...! ಅಂತಹ ಪೂಣರ್ಾವತಾರಿಯಾದ ಕೃಷ್ಣ ನಮ್ಮ ಒಡಲಲ್ಲಿ ಅವತರಿಸಿ ಪೂರ್ಣತೆಯೆಡೆಗೆ ಕೊಂಡೊಯ್ಯಲಿ. ಕೃಷ್ಣಾವತಾರೋತ್ಸವದ ಸಂಭ್ರಮದಲ್ಲಿರೋಣ. ಆ ಜೀವನ ಕೃಷ್ಣಾವತಾರೋತ್ಸವ ಸಂಭ್ರಮದಲ್ಲಿರುವವರು ಯಾವುದೇ ಭ್ರಮೆಗೊಳಗಾಗಲಾರರು. ಕೃಷ್ಣನ ಮಾನುಷ ಲೀಲೆಗಳು ನಮ್ಮ ರಕ್ತದ ಕಣ-ಕಣದಲ್ಲೂ ಅನುರಣಿಸಲಿ. ನರ ನಾಡಿಗಳಲ್ಲಿ ಹರಿದಾಡಲಿ. ನಮಗೆಲ್ಲಾ ಕುಲದೇವರಾಗಿರಲಿ.ಕೃಷ್ಣಾಷ್ಟಮಿಯು ನಮ್ಮ ಜೀವನದ ಮಹಾ ನವಮಿಯಾಗಿ ರೂಪುಗೊಳ್ಳಲಿ. ಸರ್ವ ಬಂಧುಗಳಿಗೂ ಕೃಷ್ಣಾನುಗ್ರಹವಿರಲಿ. ಆ ಪುಣ್ಯ ಕಾಲದಲ್ಲಿ ಕೃಷ್ಣಾನುಸ್ಮರಣೆಯಲ್ಲೇ ಇರುತ್ತಾ ಕೃಷ್ಣಾನುಗ್ರಹ ಭಾಜನರಾಗೋಣ. ಕೃಷ್ಣಾಶಯದಿಂದ ಕೂಡಿದ ಶುಭಾಶಯಗಳು....ಹರೇ ಕೃಷ್ಣ....