ಮಂಜೇಶ್ವರ ತಾಲೂಕನ್ನು ಮಳೆ ಸಂತ್ರಸ್ತ ತಾಲೂಕು ಎಂದು ಘೋಷಿಸುವಂತೆ ಆಗ್ರಹ
ಮಂಜೇಶ್ವರ: ಇತ್ತೀಚೆಗಿನ ಭಾರೀ ಮಳೆಯಿಂದಾಗಿ ಮಂಜೇಶ್ವರ ತಾಲೂಕಿನ ಪ್ರಧಾನ ಕೃಷಿಯು ಅಪಾರ ಹಾನಿಗೀಡಾಗಿದೆ. ಧಾರಾಕಾರ ಮಳೆಯ ಕಾರಣ ಅಡಿಕೆ ಮರಗಳಿಗೆ ಕೋಳೆರೋಗ ಬಾಧಿಸಿದ್ದು, ಕೃಷಿಕರು ಚಿಂತಿತರಾಗಿದ್ದಾರೆ. ಈ ನಿಟ್ಟಿನಲ್ಲಿ ಮಂಜೇಶ್ವರ ತಾಲೂಕನ್ನು ಮಳೆ ಸಂತ್ರಸ್ತ ತಾಲೂಕು ಎಂದು ಘೊಷಿಸುವಂತೆ ಕಾಸರಗೋಡು ಜಿಲ್ಲಾ ಪಂಚಾಯತು ಅಭಿವೃದ್ಧಿ ಸ್ಥಾಯೀ ಸಮಿತಿ ಅಧ್ಯಕ್ಷ ಹಷರ್ಾದ್ ವಕರ್ಾಡಿ ಆಗ್ರಹಿಸಿದ್ದಾರೆ.
ಈ ಬಗ್ಗೆ ಅವರು ಮುಖ್ಯಮಂತ್ರಿಯವರಿಗೆ, ಕೃಷಿ ಸಚಿವರಿಗೆ, ತಾಲೂಕು ಸಭಾಗೆ ಮನವಿ ಸಲ್ಲಿಸಿದ್ದಾರೆ. ರಾಜ್ಯದ ವಿವಿದೆಡೆ ಪ್ರಳಯ ಹಾಗೂ ಭೂಕುಸಿತದಿಂದಾಗಿ ಜನರು ಆಪಾರ ಕಷ್ಟ ನಷ್ಟ ಅನುಭವಿಸುತ್ತಿರುವ ಕಾರಣ ಇಲ್ಲಿನ ಕೃಷಿಕರು ತಮ್ಮ ಸಮಸ್ಯೆಗಳನ್ನು ಸಂಬಂಧಪಟ್ಟ ಇಲಾಖೆಗಳ ಗಮನಕ್ಕೆ ತಂದಿಲ್ಲ ಎಂಬುದು ವಾಸ್ತವ. ಜೀವನಮಾರ್ಗವೇ ಇಲ್ಲವಾದರೂ ಯಾರಲ್ಲೂ ಹೇಳಲಾಗದ ದುರವಸ್ಥೆ ಇಲ್ಲಿನ ಕೃಷಿಕರದ್ದು. ಕೃಷಿ ಹಾನಿ ಹಾಗೂ ರೋಗದಿಂದಾಗಿ ಕೃಷಿಕರ ಆದಾಯಮೂಲವು ಇಲ್ಲವಾಗಿರುವುದು ಹಾಗೂ ಹೆಚ್ಚಿನ ಜನರು ಕೃಷಿ ಕಾರ್ಯಕರಾಗಿದ್ದು ಅವರು ಉದ್ಯೋಗವಂಚಿತರಾಗಲಿದ್ದಾರೆ. ಕೃಷಿ ಸಂಬಂಧಿ ಕೈಗಾರಿಕೆಗಳು ಕೂಡಾ ಮುಚ್ಚುಗಡೆಗೊಳ್ಳಲಿದೆ. ನಿಮರ್ಾಣ ವಲಯದಲ್ಲಿ ಕೂಡಾ ಉದ್ಯೋಗವಕಾಶಗಳು ಇಲ್ಲವಾಗಲಿದೆ. ಸಾಲ ಪಡೆದು ಕೃಷಿ ಚಟುವಟಿಕೆ ನಡೆಸಿದ ಕೃಷಿಕರು ಮರುಪಾವತಿ ಮಾಡಲಾಗದ ಸ್ಥಿತಿಯಲ್ಲಿದ್ದಾರೆ. ಈ ಎಲ್ಲಾ ಸಮಸ್ಯೆಗಳೂ ಉದ್ಭವಿಸಿರುವುದು ಒಂದು ಒಂದು ವಾರ ಕಾಲ ಸುರಿದ ಧಾರಾಕಾರ ಮಳೆಯಿದಾಗಿದೆ. ತಾಲೂಕಿನ ತೊಂಭತ್ತೈದು ಶೇಕಡಾ ಅಡಿಕೆ, ತರಕಾರಿ, ಭತ್ತ ಹಾಗೂ ಪುಷ್ಪ ಕೃಷಿಯು ಹಾನಿಗೀಡಾಗಿದೆ.ಜನತೆಯು ತಮ್ಮ ಜೀವನಮಾರ್ಗವನ್ನು ಕಳೆದುಕೊಂಡು ಸಂಕಷ್ಟ ಅನುಭವಿಸುತ್ತಿರುವುದರಿಂದ ನಾಡಿನ ಅನ್ನದಾತರಿಗೆ ಸಾಂತ್ವನ ನೀಡುವರೇ ಮಂಜೇಶ್ವರ ತಾಲೂಕನ್ನು ಮಳೆ ಸಂತ್ರಸ್ತ ತಾಲೂಕು ಎಂದು ಘೋಷಿಸಿ, ಪುನರ್ವಸತಿ ಕಾರ್ಯಗಳಲ್ಲಿ ಇಲ್ಲಿನ ಕೃಷಿ ವಲಯನ್ನು ಸೇರ್ಪಡೆಗೊಳಿಸಲು ಎಲ್ಲಾ ರೀತಿಯ ಸಾಲ ವಸೂಲಾತಿ, ಜಪ್ತಿ, ಹರಾಜು ಇತ್ಯಾದಿ ಕ್ರಮಗಳಿಂದ ಈ ತಾಲೂಕನ್ನು ಹೊರತುಪಡಿಸಲು ಅವರು ಆಗ್ರಹಿಸಿದ್ದಾರೆ.