HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                      ಉಪ್ಪಂಗಳ ಟ್ರಸ್ಟ್ ನಿಂದ ವಿಪತ್ತು ನಿರ್ವಹಣಾ ತರಬೇತಿ
      ಬದಿಯಡ್ಕ: ಉಪ್ಪಂಗಳ ಟ್ರಸ್ಟ್ ಇವರ ಆಶ್ರಯದಲ್ಲಿ ರೆಡ್ಕ್ರಾಸ್ ಸಂಸ್ಥೆಯ ವಿಪತ್ತು ನಿರ್ವಹಣಾ ಘಟಕದ ಅಧ್ಯಕ್ಷ ವೇಣು ಶಮರ್ಾ ಇವರ ಚಾಲನೆಯೊಂದಿಗೆ ಎರಡು ದಿನಗಳ ವಿಪತ್ತು ನಿರ್ವಹಣೆ ಹಾಗೂ ಸಾಹಸ ಶಿಬಿರ ಉಪ್ಪಂಗಳದಲ್ಲಿ ಜರಗಿತು.
ಹೋಂ ಗಾಡರ್್ನ ನಿವೃತ್ತ ಕಮಾಂಡರ್ ತಾಂತ್ರಿಕ ತಜ್ಞ ಪ್ರದ್ಮಶ್ರೀ ಗಿರೀಶ್ ಭಾರದ್ವಾಜ್ ಸಾಹಸ ಶಿಬಿರವನ್ನು ಉದ್ಘಾಟಿಸಿದರು. ಇಂತಹ ಶಿಬಿರಗಳನ್ನು ಎಲ್ಲ ಊರುಗಳಲ್ಲಿ ಆಯೋಜಿಸಬೇಕು. ಇತ್ತೀಚೆಗೆ ಮಡಿಕೇರಿ ಹಾಗೂ ಕೇರಳದಲ್ಲಿ ಅನಿರೀಕ್ಷಿತ ದುರಂತಗಳು ಸಂಭವಿಸಿದಾಗ ಇಂತಹ ತರಬೇತಿಯನ್ನು ಪಡೆದವರ ಸಹಕಾರದೊಂದಿಗೆ ಹಲವು ಜೀವಗಳನ್ನು ರಕ್ಷಿಸಲಾಗಿದೆ ಎಂದು ತಿಳಿಸಿದರು.
ಶಿಬಿರದಲ್ಲಿ ಗುಡ್ಡ ಬೆಟ್ಟಗಳನ್ನು ಹತ್ತುವುದು, ಪ್ರವಾಹ ಹಾಗೂ ನೆರೆಯ ಸಂದರ್ಭದಲ್ಲಿ ಬಳ್ಳಿಗಳ ಮೂಲಕ ಹೇಗೆ ದಡ ಸೇರಬಹುದು, ಬಳ್ಳಿಗಳಿಗೆ ವಿವಿಧ ರೀತಿಯ ಗಂಟುಗಳನ್ನು ಹಾಕುವುದು, ಯಾವುದೇ ಅಪಘಾತವಾದರೆ, ಹೃದಯಾಘಾತವಾದರೆ ಯಾವ ರೀತಿಯಲ್ಲಿ ಪ್ರಥಮ ಚಿಕಿತ್ಸೆ ನೀಡಬಹುದು, ವಿಪತ್ತು ಅಥವಾ ಅಪಘಾತವಾದಾಗ ಮುಂದಾಳುತ್ವ ವಹಿಸುವುದು, ಆಗತ್ಯ ಆರೋಗ್ಯ ವಿಚಾರಗಳು, ತುತರ್ು ಪ್ರಾಥಮಿಕ ಚಿಕಿತ್ಸೆಗಳೇ ಮೊದಲಾದ ವಿಚಾರಗಳನ್ನು ತಿಳಿಸಲಾಯಿತು.
  ಉಪ್ಪಂಗಳ ಟ್ರಸ್ಟ್ನ ಪ್ರಧಾನ ಕಾರ್ಯದಶರ್ಿ ರಂಗಶಮರ್ಾ ಉಪ್ಪಂಗಳ ಮಾತನಾಡಿದರು. ನುರಿತ, ತಜ್ಞ ಮುಖ್ಯ ತರಬೇತುದಾರರಾದ ಸಂತೋಷ್ ಪೀಟರ್ ಡಿ ಸೋಜ, ನಿತಿನ್, ಅಶ್ವಿನ್, ಗ್ಲೋರಿಯಾ ಇವರಿಂದಾಗಿ ಶಿಬಿರವು ಹೆಚ್ಚು ಯಶಸ್ವಿಯಾಯಿತು. ಟ್ರಸ್ಟ್ನ ಅಧ್ಯಕ್ಷ ಬಾಲಗೋಪಾ ಶಮರ್ಾ, ಹಿರಿಯರಾದ ಕೃಷ್ಣ ಭಟ್ ಉಪಸ್ಥಿತರಿದ್ದರು. ರಾಜು ಶಮರ್ಾ ವಂದಿಸಿದರು. 20 ಯುವ ಜನರು ಈ ಶಿಬಿರದ ಪ್ರಯೋಜನವನ್ನು ಪಡೆದರು.
 
     ಇಂತಹ ತರಬೇತಿ ಶಿಬಿರಗಳು ಆತ್ಮವಿಶ್ವಾಸವನ್ನು ಹೆಚ್ಚಿಸಲು ಸಹಕಾರಿಯಾಗುವುದಲ್ಲದೆ ಸಾಹಸ ಕಾರ್ಯಗಳಿಗೆ ಯುವ ಸಮಾಜ ಮುಂದೆ ಬರುವಂತೆ ಪ್ರೇರೇಪಣೆಯನ್ನು ನೀಡುತ್ತದೆ. ಈ ಶಿಬಿರದಲ್ಲಿ ಪಾಲ್ಗೊಂಡಿರುವುದು ಮರೆಯಲಾರದ ಘಟನೆಯಾಗಿದೆ. - ಪದ್ಮಶ್ರೀ ಗಿರೀಶ್ ಭಾರದ್ವಾಜ್



   

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries