ಬಿಜೆಪಿ ಜಿಲ್ಲಾ ಸಮಿತಿಯಿಂದ ಧರಣಿ ಸತ್ಯಾಗ್ರಹ
ಕೇರಳ ಸರಕಾರದಿಂದ ಆಡಳಿತ ವೈಫಲ್ಯ : ಕೆ.ಶ್ರೀಕಾಂತ್
ಕಾಸರಗೋಡು: ರಾತ್ರೋರಾತ್ರಿ ಯಾವುದೇ ಮುನ್ಸೂಚನೆಗಳನ್ನು ನೀಡದೆ ಕೇರಳದ ಅಣೆಕಟ್ಟುಗಳನ್ನು ತೆರೆದು ಬಿಟ್ಟು ರಾಜ್ಯವನ್ನು ದುರಂತಕ್ಕೀಡು ಮಾಡಿದ ಎಡರಂಗ ಸರಕಾರದ ಆಡಳಿತ ವೈಫಲ್ಯದ ಕುರಿತು ಸಮಗ್ರ ನ್ಯಾಯಾಂಗ ತನಿಖೆಯಾಗಬೇಕು, ಪ್ರವಾಹ ಸಂತ್ರಸ್ತರಿಗೆ ನೆರವು ಒದಗಿಸುವಲ್ಲಿನ ಪಕ್ಷಪಾತ ಧೋರಣೆಯನ್ನು ಸಿಪಿಎಂ ನೇತೃತ್ವದ ಕೇರಳ ಸರಕಾರವು ಕೊನೆಗೊಳಿಸಬೇಕು ಸಹಿತ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಬಿಜೆಪಿ ಕಾಸರಗೋಡು ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಶನಿವಾರ ಸಂಜೆ ಕಾಸರಗೋಡು ತಾಲೂಕು ಕಚೇರಿ ಮುಂಭಾಗದಲ್ಲಿ ಬೃಹತ್ ಜನಪರ ಧರಣಿ ಸತ್ಯಾಗ್ರಹ ಜರಗಿತು.
ಧರಣಿ ಸತ್ಯಾಗ್ರಹವನ್ನು ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷ , ನ್ಯಾಯವಾದಿ ಕೆ.ಶ್ರೀಕಾಂತ್ ಉದ್ಘಾಟಿಸಿ ಮಾತನಾಡಿ, ಕೇರಳದ ಇತಿಹಾಸದಲ್ಲಿಯೇ ಇದುವರೆಗೆ ಕಾಣದಂತಹ ಭೀಕರ ದುರಂತ ಇತ್ತೀಚೆಗೆ ಸಂಭವಿಸಿದ್ದರೂ, ಇಲ್ಲಿನ ಎಲ್ಲಾ ವರ್ಗಗಳ ಜನರು ಧೈರ್ಯದಿಂದ ಅದನ್ನು ಎದುರಿಸಿದ್ದಾರೆ ಎಂದರು. ಪ್ರವಾಹ ಪೀಡಿತರ ಸ್ಪಷ್ಟ ಲೆಕ್ಕಾಚಾರ ನೀಡಿದರೆ ಅಗತ್ಯದ ಹೆಚ್ಚುವರಿ ಧನಸಹಾಯ ಒದಗಿಸಲಾಗುವುದು ಎಂದು ಕೇಂದ್ರದ ಎನ್ಡಿಎ ಸರಕಾರವು ತಿಳಿಸಿದ್ದರೂ ರಾಜ್ಯದ ಎಡರಂಗ ಸರಕಾರ ಮಾತ್ರ ಇದುವರೆಗೆ ಈ ಬಗ್ಗೆ ಸಮರ್ಪಕ ಲೆಕ್ಕಾಚಾರ ನೀಡಿಲ್ಲ. ಇದು ಸಿಪಿಎಂ ನೇತೃತ್ವದ ಎಡರಂಗ ಸರಕಾರದ ವೈಫಲ್ಯತೆಗೆ ಸ್ಪಷ್ಟ ನಿದರ್ಶನವಾಗಿದೆ ಎಂದು ಅವರು ದೂರಿದರು.
ಪ್ರವಾಹ ದುರಂತದ ಕುರಿತು ಸಮಗ್ರ ಅಧ್ಯಯನ ನಡೆಸಿದರೆ ಮಾತ್ರವೇ ಮುಂದಿನ ಸಂಭಾವ್ಯ ದುರಂತವನ್ನು ತಡೆಗಟ್ಟಲು ಸಾಧ್ಯವಿದೆ. ಇದರಲ್ಲಿ ಯಾವುದೇ ರಾಜಕೀಯ ತಾರತಮ್ಯವಿರಬಾರದು ಎಂದರು. ಕೇರಳದ ಎಡರಂಗ ಸರಕಾರವು ಅಧಿಕಾರಕ್ಕೆ ಬಂದು ಎರಡು ವರ್ಷಗಳು ಕಳೆದರೂ ರಾಜ್ಯದಲ್ಲಿ ಇದುವರೆಗೆ ಯಾವುದೇ ಅಭಿವೃದ್ಧಿ ಕಾರ್ಯ ಆರಂಭಗೊಂಡಿಲ್ಲ. ಇಂದು ರಾಜ್ಯದ ಸಕಲ ಕ್ಷೇತ್ರಗಳು ಕುಂಠಿತಗೊಂಡಿವೆ. ಒಟ್ಟಿನಲ್ಲಿ ರಾಜ್ಯದ ಎಡರಂಗ ಸರಕಾರದ ಆಡಳಿತವು ಸಂಪೂರ್ಣ ವಿಫವಾಗಿದೆ ಎಂದು ಕೆ.ಶ್ರೀಕಾಂತ್ ಉದಾಹರಣೆ ಸಹಿತ ವಿವರಿಸಿದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷೆ , ಕಾಸರಗೋಡು ನಗರಸಭಾ ಸದಸ್ಯೆ ಸವಿತಾ ಟೀಚರ್ ಧರಣಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ನೇತಾರರಾದ ರವಿ ಕರಂದಕ್ಕಾಡು, ವಿಠಲದಾಸ್ ಕಾಮತ್, ಶಂಕರ ಜೆ.ಪಿ.ನಗರ, ಸತೀಶ್ ಕಡಪ್ಪುರ, ಕೆ.ಜಿ.ಮನೋಹರನ್, ಜಿ.ಚಂದ್ರನ್, ಜಯಪ್ರಕಾಶ್, ಬಾಲನ್ ಅಡ್ಕತ್ತಬೈಲು ಮುಂತಾದವರು ಮಾತನಾಡಿದರು.