ಬೇಳ ಶೋಕಮಾತಾ ಕ್ಷೇತ್ರದಲ್ಲಿ ತೆನೆ ಹಬ್ಬ ಆಚರಣೆ
ಬದಿಯಡ್ಕ: ಜಿಲ್ಲೆಯಲ್ಲಿ ಅತೀ ಪುರಾತನ ಹಾಗೂ ಕೇರಳ ಪ್ರವಾಸೋದ್ಯಮ ಇಲಾಖೆಯಲ್ಲಿ ನೊಂದವಣೆಗೊಂಡ ಬೇಳ ಶೋಕಮಾತ ಪುಣ್ಯ ಕ್ಷೇತ್ರದಲ್ಲಿ ತೆನೆ ಹಬ್ಬವನ್ನು ಬಹಳ ವಿಜೃಂಭಣೆಯಿಂದ ಹಾಗೂ ಭಕ್ತಿಯಿಂದ ಆಚರಿಸಲಾಯಿತು.
ಕಾಸರಗೋಡು ವಲಯ ಪ್ರಧಾನ ಧರ್ಮಗುರುಗಳು ಹಾಗೂ ಬೇಳಾ ಶೋಕಮಾತ ಪುಣ್ಯಕ್ಷೇತ್ರದ ಧರ್ಮಗುರುಗಳಾದ ಅತೀ ವಂದನೀಯ ಫಾ.ಜೋನ್ ವಾಸ್ ಅವರು ಭಕ್ತಿ ಕಾರ್ಯಕ್ರಮಗಳಿಗೆ ನೇತೃತ್ವವನ್ನು ನೀಡಿದರು. ಫಾ.ಆಶೋಕ್ ರಾಯನ್ ಕ್ರಾಸ್ತ ಹಾಗೂ ಫಾ.ಬೆಂಜಮಿನ್ ಡಿ'ಸೋಜಾರವರು ಉಪಸ್ಥಿತರಿದ್ದರು. ಬಲಿ ಪೂಜೆಯ ಮೊದಲು ಭತ್ತ ತೆನೆಯ ಆಶೀರ್ವಚನ ಮಾಡಲಾಯಿತು. ಕಾರ್ಯಕ್ರಮದ ಕೊನೆಗೆ ಎಲ್ಲರಿಗೂ ಭತ್ತದ ತೆನೆಯನ್ನು ನೀಡಿದರು. ಹಾಗೂ ಕಬ್ಬು ಮತ್ತು ಸಿಹಿತಿಂಡಿಯನ್ನು ಹಂಚಲಾಯಿತು.