HEALTH TIPS

ಯಾವುದೇ ಶೀರ್ಷಿಕೆಯಿಲ್ಲ

       ಗೋವಿಂದ ಪೈ ಕಾಲೇಜಿನಲ್ಲಿ ರಾಷ್ಟ್ರೀಯ ವಿಚಾರ ಸಂಕಿರಣ
     ಅಧ್ಯಯನದಲ್ಲಿ ಭಿನ್ನ ಆಲೋಚನಕ್ರಮ ಅಗತ್ಯ-ಡಾ.ಚಿನ್ನಪ್ಪ ಗೌಡ ಅಭಿಮತ
   ಮಂಜೇಶ್ವರ:  ಇಂದಿನ ಸಂಶೋದನೆ-ಅಧ್ಯಯನಗಳಲ್ಲಿ ಭಿನ್ನ ಆಲೋಚನಾ ಕ್ರಮ ಅಗತ್ಯವಾಗಿದೆ. ಭಿನ್ನ ಆಲೋಚನೆಗಳು, ಚಿಂತನೆಗಳು ನಡೆದಾಗ ಅಧ್ಯಯನವು ಸತ್ಯದ ಅನಾವರಣಗೊಳಿಸುತ್ತದೆ.ಹೀಗೆ ಅನಾವರಣಗೊಳ್ಳುವ ಸತ್ಯಗಳು ಪರಸ್ಪರ ವಿರೋಧದಿಂದ ಕೂಡಿಲ್ಲವಾದರೂ ಪರಸ್ಪರ ಭಿನ್ನವಾಗಿರುತ್ತವೆ. ಇಂದಿನ ಅಧ್ಯಯನಗಳು ಬಹುತ್ವವನ್ನು ಒಪ್ಪಿಕೊಳ್ಳಬೇಕು.ಬಹುತ್ವವನ್ನು ಒಪ್ಪಿಕೊಂಡಾಗ ಮಾತ್ರ ನಮ್ಮಲ್ಲಿರುವ ಈಷ್ಯರ್ೆ ,ಕ್ರೌರ್ಯಗಳು ಕಡಿಮೆಯಾಗಬಹುದು ಎಂದು ಕನರ್ಾಟಕ ಜಾನಪದ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಕೆ.ಚಿನ್ನಪ್ಪ ಗೌಡ ಅಭಿಪ್ರಾಯ ಪಟ್ಟರು.
      ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸರಕಾರಿ ಕಾಲೇಜಿನ ಕನ್ನಡ ವಿಭಾಗದಲ್ಲಿ ನಡೆದ ಕರಾವಳಿಯ ಆರಾಧನೆಗಳಲ್ಲಿ ಸಾಂಸ್ಕೃತಿಕ ಪಲ್ಲಟಗಳು ಎಂಬ ಎರಡು ದಿನದ ವಿಚಾರ ಸಂಕಿರಣವನ್ನು ಗುರುವಾರ ಕನ್ನಡ ವಿಭಾಗದ ಸಭಾಂಗಣದಲ್ಲಿ ಉದ್ಘಾಟಿಸಿ ಮಾತಾನಾಡಿದರು.
  ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಸುನಿಲ್ ಜೋನ್ ಜೆ ಅವರು, ಧಾಮರ್ಿಕ ಪರಂಪರೆಗಳು ಬಹುಮುಖ ಸಂಸ್ಕೃತಿಯನ್ನು ರೂಪಿಸುವುದರ ಮೂಲಕ ಸಮಾಜದಲ್ಲಿ ಸಾಮರಸ್ಯವನ್ನು ಸೃಷ್ಟಿಸುತ್ತದೆ ಎಂದು ಅಭಿಪ್ರಾಯಪಟ್ಟರು.ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರು ಹಾಗೂ ಉಪ ಪ್ರಾಂಶುಪಾಲ ಅಮಿತಾ.ಎಸ್ ಪ್ರಾಸ್ತವಿಕ ಸ್ವಾಗತಿಸಿದರು.ಕುಮಾರಿ ದಿವ್ಯಶ್ರೀ ಪ್ರಾರ್ಥನೆ ಹಾಡಿದ ಕಾರ್ಯಕ್ರಮದಲ್ಲಿ ವಿಭಾಗದ ಸಹಾಯಕ ಪ್ರಾಧ್ಯಾಪಿಕೆ ಲಕ್ಷ್ಮಿ ಕೆ ವಂದಿಸಿದರು. ವಿಭಾಗದ ಉಪನ್ಯಾಸಕ ಶಿವಶಂಕರ ಪಿ ವಂದಿಸಿದರು.
 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries