ವಿಶಾಲ ಒಕ್ಕೂಟ ಸಾಧ್ಯವಾಗದಿದ್ದರೆ ಬಿಜೆಪಿ ಮತ್ತೆ ಅಧಿಕಾರಕ್ಕೆ : ಶಬ್ನಂ ಹಾಷಿಂ
ಕಾಸರಗೋಡು: ಕಾಂಗ್ರೆಸ್ ನೇತೃತ್ವದಲ್ಲಿ ವಿಶಾಲ ಒಕ್ಕೂಟ ಸಾಧ್ಯವಾದರೆ ಬಿಜೆಪಿಯನ್ನು ಮುಂದಿನ ಚುನಾವಣೆಯಲ್ಲಿ ಪರಾಜಯಗೊಳಿಸಲು ಸಾಧ್ಯವಾಗುವುದು. ಇಲ್ಲದಿದ್ದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಖ್ಯಾತ ಮಾನವ ಹಕ್ಕು ಕಾರ್ಯಕತರ್ೆ ಶಬ್ನಂ ಹಾಷಿಂ ಹೇಳಿದರು.
ಕಾಸರಗೋಡು ಪ್ರೆಸ್ ಕ್ಲಬ್ ಶುಕ್ರವಾರ ಆಯೋಜಿಸಿದ ಮೀಟ್ ದಿ ಪ್ರೆಸ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಇಂಧನ ದರ ಹೆಚ್ಚಳ ಮತ್ತು ರೂಪಾಯಿ ಮೌಲ್ಯ ಕುಸಿತ ಚಚರ್ೆಯಾಗುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಜನರ ಗಮನ ಬೇರೆಡೆ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು. ದೇಶದಲ್ಲಿ ಇಂದು ಆರಾಜಕತೆ ಮೇಳೈಸುತ್ತಿದೆ. ಇಂತಹ ಹಂತದಲ್ಲಿ ಮಹಿಳೆಯರೇ ಹೆಚ್ಚು ಆತಂಕಕ್ಕೆ ತುತ್ತಾಗುತ್ತಿದ್ದಾರೆ. ಹೋರಾಟ ನಡೆಸುತ್ತಿರುವ ಕ್ರೈಸ್ತ ಸನ್ಯಾಸಿನಿಯರ ವಿರುದ್ಧ ರಾಜಕೀಯ ಹೇಳಿಕೆಗಳು ಖಂಡನೀಯ ಎಂದ ಅವರು, ನಾನು ಯಾವುದೇ ರಾಜಕೀಯ ಪಕ್ಷದ ವಕ್ತಾರೆ ಅಲ್ಲ. ಆದರೆ ಈ ವಿಷಯದಲ್ಲಿ ರಾಜಕೀಯ ಹೇಳಿಕೆಗಳು ಬರುತ್ತಿರುವುದು ಖಂಡನೀಯ. ಪುರುಷರ ಅದಿಪತ್ಯ ನೆಲೆನಿಂತಿರುವ ರಾಜಕೀಯ ಪಕ್ಷಗಳೇ ಇಲ್ಲಿ ರಾರಾಜಿಸುತ್ತಿವೆ. ಮಹಿಳೆಯರ ಬಗೆಗಿನ ಸಮಸ್ಯೆಗಳಿಗೆ ಪರಿಹಾರ ನೀಡಲು ರಾಜಕೀಯ ಪಕ್ಷಗಳು ಮುಂದಾಗುತ್ತಿಲ್ಲ ಎಂದು ಅವರು ಆರೋಪಿಸಿದರು.
ಕಾರ್ಯಕ್ರಮದಲ್ಲಿ ರಾಜಕುಮಾರಿ ಡ್ರೋಗ್ರೀನ್, ಪಿ.ವಿ.ಶೆಬಿ, ಟಿ.ಹರಿದಾಸ್, ಶಫೀಕ್ ನಸ್ರುಲ್ಲ ಮೊದಲಾದವರಿದ್ದರು.