HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                 ಮಾಟೆಡ್ಕ ದೇವರ ಮನೆಯಲ್ಲಿ ಯಕ್ಷಗಾನ ತಾಳಮದ್ದಳೆ
     ಮುಳ್ಳೇರಿಯ: ಕುಂಟಾರು ಸಮೀಪದ ಮಾಟೆಡ್ಕ ಕೌಮಾರ್ ಮನೆತನದ ದೇವರ ಮನೆಯಲ್ಲಿ ಗಣೇಶ ಚತುಥರ್ಿಯ ಸಂದರ್ಭದಲ್ಲಿ ಮಾಟೆಬಯಲು ಚಿನ್ಮಯಾ ಯಕ್ಷಗಾನ ಕಲಾನಿಲಯದ ನೇತೃತ್ವದಲ್ಲಿ ಜರಾಸಂಧ ವಧೆ ಯಕ್ಷಗಾನ ತಾಳಮದ್ದಳೆ ನಡೆಯಿತು.
 ಕಲಾನಿಲಯದ ಕಾರ್ಯದಶರ್ಿ ನಾರಾಯಣ ಮಾಟೆ ಈ ಸಂದರ್ಭದಲ್ಲಿ ಮಾತನಾಡಿ ಹಲವಾರು ವರ್ಷಗಳಿಂದ ತಾಳಮದ್ದಳೆ ಕೂಟವನ್ನು ನಡೆಸಿಕೊಂಡು ಬರುತ್ತಿರುವ ಕೌಮಾರ್ ಕುಟುಂಬಸ್ಥರನ್ನು ಅಭಿನಂದಿಸಿ, ಶುಭ ಸಮಾರಂಭಗಳಲ್ಲಿ ಈ ರೀತಿ ಯಕ್ಷಗಾನ ಕಲೆಗೆ ಅವಕಾಶ ನೀಡುವುದರಿಂದ ಕಲೆಗಳ ಉಳಿವಿಗೆ ಕಾರಣವಾಗುತ್ತಿದೆ. ಈ ಬಗ್ಗೆ ಯುವ ಪೀಳಿಗೆ ಮುಂದೆ ಬರಬೇಕು ಎಂದು ಹೇಳಿದರು.
    ನಾರಾಯಣ ಮಾಟೆ ಮತ್ತು ಕೃಷ್ಣ ಕುಂಟಾರು, ಚೆಂಡೆ-ಮದ್ದಳೆ-ಚಕ್ರತಾಳದಲ್ಲಿ ಅಪ್ಪಯ್ಯ ಮಣಿಯಾಣಿ ಅಕ್ಕಪಾಡಿ, ಬಾಲಕೃಷ್ಣ ಬೊಮ್ಮಾರು, ಈಶ್ವರ ಮಲ್ಲ ಸಹಕರಿಸಿದರು. ಅರ್ಥಧಾರಿಗಳಾಗಿ ಕೃಷ್ಣ ರಾವ್ ಮಾಟೆ, ಪ್ರದೀಪ ಕೂಡ್ಲು, ವೆಂಕಟ್ರಮಣ ಆಚಾರ್ಯ ಅಡೂರು, ಮಾಧವ ಕುಂಟಾರು,  ದಾಕೋಜಿ ರಾವ್ ಸಂಜೆಕಡವು, ಸಂಜೀವ ಮಾಟೆ, ಕಮಲಾಕ್ಷ ಆದೂರು, ದಾಮೋದರ ರಾವ್ ಮಾಟೆ ಭಾಗವಹಿಸಿದರು. ಜಯಂತಿ.ಯು.ರಾವ್  ಸ್ವಾಗತಿಸಿ, ವಂದಿಸಿದರು.
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries