ಬಾಯಾರಿನಲ್ಲಿ ಅಷ್ಟಮಿ ಶೋಭಾಯಾತ್ರೆ
ಉಪ್ಪಳ: ಬಾಯಾರಿನ ಬಾಲಗೋಕುಲದ ಮಕ್ಕಳಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಕೃಷ್ಣ ಹಾಗೂ ರಾಧೆಯರ ವೇಷ ಧರಿಸಿ ಶೋಭಾಯಾತ್ರೆ ಭಾನುವಾರ ನಡೆಯಿತು. ಬಾಯಾರು ಮುಳಿಗದ್ದೆಯಿಂದ ಆರಂಭಗೊಂಡು ಬಾಯಾರು ಶ್ರೀಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಸಮಾಪನಗೊಂಡಿತು. ಶೋಭಾಯಾತ್ರೆಯಲ್ಲಿ ಬಾಯಾರಿನ ವಿವಿಧ ಬಾಲಗೋಕುಲದ ಮಕ್ಕಳು ಭಾಗವಹಿಸಿದ್ದರು.
ಬಾಯಾರು ದೇವಸ್ಥಾನದಲ್ಲಿ ನಡೆದ ಸಮಾರೋಪ ಸಭೆಯ ಅಧ್ಯಕ್ಷತೆಯನ್ನು ಕೇರಳ ಗ್ರಾಮೀಣ ಬ್ಯಾಂಕ್ ಪ್ರಬಂಧಕ ಗಂಗಾಧರ ಅವರು ವಹಿಸಿದ್ದರು. ಬಾಲಗೋಕುಲ ಬಾಯಾರು ಮಂಡಲ ಅಧ್ಯಕ್ಷೆ ವೇದಾವತಿ.ಬಿ. ಶೆಟ್ಟಿ ಕಾರ್ಯಕ್ರಮಲ್ಲಿ ಉಪಸ್ಥಿತರಿದ್ದರು.ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ ಕಾಸರಗೋಡು ಇದರ ಸಂಚಾಲಕಿ ಬ್ರಹ್ಮಕುಮಾರಿ ವಿಜಯಲಕ್ಷ್ಮಿ ಅವರು ಮಕ್ಕಳಿಗೆ ಹಿತನುಡಿಗಳನ್ನಾಡಿದರು. ಅಶ್ವಿನಿ ಸ್ವಾಗತಿಸಿ,ವಂದಿಸಿದರು. ವಿಜಯ ತಾಳ್ತಜೆ ಹಾಗೂ ಉಮೇಶ್ ತಾಳ್ತಜೆ ಕಾರ್ಯಕ್ರಮ ನಿರ್ವಹಿಸಿದರು.