HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                 ಗಣೇಶೋತ್ಸವದ ಅಂಗವಾಗಿ ಮಾತೃಸಂಗಮ
     ಮಂಜೇಶ್ವರ: ಧಾಮರ್ಿಕತೆ ನಿತ್ಯ ಜೀವನದಲ್ಲಿ ರೂಡಿಸಿಕೊಳ್ಳುವದರಿಂದ ಆತ್ಮ ನೆಮ್ಮದಿ ಶಾಂತಿ ಹಾಗೂ ಮಾತೃ ದೇಶದ ಪ್ರೇಮ ಕರಗತ ಮಾಡಿಕೊಳ್ಳಬಹುದು. ಹಿಂದೂ ಧರ್ಮದ ಚೌಕಟ್ಟಿನಲ್ಲಿದ್ದರೆ ಎಲ್ಲವೂ ದೇವ ಸಮಪರ್ಿತ, ಭಕ್ತಿಯಿಂದ ಶಕ್ತಿ ಸಂಪಾದಿಸಬಹುದು. ಶಕ್ತಿಯಿಂದ ಮುಕ್ತಿ ಪ್ರಾಪ್ತವಾಗುತ್ತದೆ. ಸ್ತ್ರೀಯರು ಈ ದೇಶದ ಬೆನ್ನೆಲುಬು ಜಗತ್ತಿನ ಆಧುನೀಕರಣದ ಭರಾಟೆಯಲ್ಲಿ ರಾಷ್ಟ್ರದಲ್ಲಿ ಹಿಂದೂ ಧಾಮರ್ಿಕತೆ ಸಂರಕ್ಷಣೆಗೆ ತಾಯಂದಿರು ಜವಬ್ದಾರಿ ವಹಿಸಬೇಕೆಂದು ದೇರಳಕಟ್ಟೆ ಕೆ. ಎಸ್ ಹೆಗ್ಡೆ ವೈದ್ಯಕೀಯ ಕಾಲೇಜಿನ ಸ್ತ್ರೀ ರೋಗ ಶಾಸ್ತ್ರ ವಿಭಾಗದ ಸಹಾಯಕ ಪ್ರಧ್ಯಾಪಕಿ ಡಾ. ಸಂಸ್ಕ್ರತಿ ಶೆಟ್ಟಿ ನುಡಿದರು.
   ಅವರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಆಶ್ರಯದಲ್ಲಿ ಹೊಸಂಗಡಿ ಶ್ರೀ ಅಯ್ಯಪ್ಪ ಕ್ಷೇತ್ರದಲ್ಲಿ ಜರಗುತ್ತಿರುವ 38ನೇ ವರ್ಷದ ಮಂಜೇಶ್ವರ ಶ್ರೀ ಗಣೇಶೋತ್ಸವದಂಗವಾಗಿ ನಡೆದ ಮಾತೃ ಸಂಗಮ ಮಾತೆಯರ ಸಮಾವೇಶದಲ್ಲಿ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
  ಸಭೆಯ ಅಧ್ಯಕ್ಷತೆಯನ್ನು ಹೊಸಂಗಡಿ ಶ್ರೀಅಯ್ಯಪ್ಪ ಕ್ಷೇತ್ರದ ಮಹಿಳಾ ಸೇವಾ ಸಮಿತಿಯ ಅಧ್ಯಕ್ಷೆ  ಚಂಚಲಾಕ್ಷಿ ಪದ್ಮನಾಭ ಕಡಪ್ಪರ ವಹಿಸಿದ್ದರು. ಮಂಗಳೂರು ಕೆನರಾ ಕಾಲೇಜಿನ ಪ್ರಾಂಶುಪಾಲ ಮಾಲಿನಿ ವಿಶ್ವನಾಥ್, ರೇಷ್ಮಾ ಸಂತೋಷ್ ಕಾಪಿಕಾಡ್, ನ್ಯಾಯವಾದಿ ಸಹನಾ ಸುಜಿತ್ ಕುಮಾರ್ ಉದ್ಯಾವರ ಮಾಡ, ಮಂಜೇಶ್ವರ ಗ್ರಾಮ ಪಂಚಾಯತಿ ಸದಸ್ಯೆ  ಪ್ರಮೀಳಾ ಮಂಜುನಾಥ್ ಕೀತರ್ೇಶ್ವರ, ವಿಹಿಂಪ ಮಾತೃಮಂಡಳಿ ಮಂಜೇಶ್ವರ ಪ್ರಖಂಡ ಮಾಜಿ ಅಧ್ಯಕ್ಷೆ ವಿಮಲಾ ನಾರಾಯಣ, ಶ್ರೀಅಯ್ಯಪ್ಪ ಮಾತೃ ಮಂಡಳಿಯ ಗೌರವಧ್ಯಕ್ಷೆ ಗಿರಿಜಾ ಎಸ್. ಬಂಗೇರ ವೇದಿಕೆಯಲ್ಲಿ ಉಪಸ್ಥಿತರಿದ್ದು ಶುಭಾಶಂಸನೆಗೈದರು. ಜಯಶ್ರೀ ಕೃಷ್ಣ.ಜಿ ಸ್ವಾಗತಿಸಿ, ಕುಮಾರಿ ಅನುಷಾ ಮೋಹನ್ದಾಸ್ ಹೊಸಂಗಡಿ ಕಾರ್ಯಕ್ರಮ ನಿರೂಪಿಸಿ,  ಚೈತ್ರ ದೇವರಾಜ್ ವಂದಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಶಾರದಾ ನಾಟ್ಯಲಯ ಹೊಸಂಗಡಿ ಮಂಜೇಶ್ವರವರಿಂದ ನಾಟ್ಯ ಸಂಭ್ರಮ ನಡೆಯಿತು. ಗುರುವಾರ ಬೆಳಿಗ್ಗೆ ಗಣಹೋಮ, ಕನರ್ಾಟಕ  ಯಕ್ಷಗಾನ ಅಕಾಡೆಮಿ ಸದಸ್ಯ ನ್ಯಾಯವಾದಿ ಎಮ್. ದಾಮೋದರ್ ಶೆಟ್ಟಿ ಮಜಿಬೈಲ್ ಮತ್ತು ನುರಿತ ಕಲಾವಿದರಿಂದ 'ಸುಧನ್ವ ಮೋಕ್ಷ' ಯಕ್ಷಗಾನ ತಾಳಮದ್ದಳೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಿತು.
   

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries