HEALTH TIPS

ಯಾವುದೇ ಶೀರ್ಷಿಕೆಯಿಲ್ಲ

            `ಬಡ್ಸರ್್ ಕ್ಲಬ್ ಇಂಟರ್ ನ್ಯಾಶನಲ್' ಉತ್ತರ ಕೇರಳ ವಲಯದ ಉದ್ಘಾಟನೆ
    ಕಾಸರಗೋಡು: `ಬಡ್ಸರ್್ ಕ್ಲಬ್ ಇಂಟರ್ ನ್ಯಾಶನಲ್' ಉತ್ತರ ಕೇರಳ ವಲಯದ ಉದ್ಘಾಟನೆಯನ್ನು ಸಿನೆಮ ನಿಮರ್ಾಪಕ ಜಯರಾಜ್ ಆರ್.ನಾಯರ್ ಚಿನ್ಮಯ ವಿದ್ಯಾಲಯದ ತೇಜಸ್ ಸಭಾಂಗಣದಲ್ಲಿ ಗುರುವಾರ ನಿರ್ವಹಿಸಿದರು. 2010 ರಲ್ಲಿ ಕೇರಳದ ಶಾಲಾ ಕಾಲೇಜುಗಳಲ್ಲಿ ಆರಂಭಿಸಿದ ಯೋಜನೆಯನ್ನು ಅಂತಾರಾಷ್ಟ್ರೀಯ ವ್ಯಾಪ್ತಿಯಲ್ಲಿ ವಿಸ್ತರಿಸುವುದು ಜಯರಾಜ್ ಫೌಂಡೇಶನ್ನ ಗುರಿಯಾಗಿದೆ.
    ಈ ಹಸಿರು ಕ್ರಾಂತಿ ಪಕ್ಷಿ ವೀಕ್ಷಣೆಯೊಂದಿಗೆ ಪರಿಸರ ಸಂರಕ್ಷಣೆಯ ಪ್ರಜ್ಞೆ ಮೂಡಿಸಲ್ಲುದಾಗಿದೆ. ಒಂದು ಲಕ್ಷದಷ್ಟು ಮಳೆ ಕಾಡು ಹಾಗೂ ರಕ್ಷಿತಾರಣ್ಯಗಳ ನಿಮರ್ಾಣದಿಂದ ಮಾನವ ಹಾಗೂ ಇತರ ಜೀವ ರಾಶಿಗಳು ಎದುರಿಸುವ ಹವಾಮಾನ ವೈಪರೀತ್ಯದಿಂದೊದಗುವ ದುಷ್ಪರಿಣಾಮಗಳನ್ನು ನಿವಾರಿಸಿ ಪ್ರಕೃತಿ ಸಮತೋಲನವನ್ನು ಕಾಯ್ದುಕೊಳ್ಳುವಲ್ಲಿ ಸಹಕಾರಿಯಾಗುವುದು ಎಂದು ಹೇಳಿದರಲ್ಲದೆ ಪಕ್ಷಿಗಳ ಇಂಚರವನ್ನು ಮಾತ್ರವೇ ಆಲಿಸುವುದು ಒಂದು ಧ್ಯಾನವಾಗಿದೆ ಎಂದರು. ನಾವು ಜೀವಜಾಲಗಳಿಗಾಗಿ ಸ್ವಲ್ಪ ಸ್ಥಳವನ್ನು ಮೀಸಲಿರಿಸಬೇಕು. ಪ್ರಕೃತಿಯನ್ನು ಆಧರಿಸಿ ವಿದ್ಯಾಥರ್ಿಗಳು ಕಿರುಚಿತ್ರಗಳನ್ನು ತಯಾರಿಸಬೇಕು. ಬಡ್ಸರ್್ ಕ್ಲಬ್ನ ಮೂಲಕ ಪಕ್ಷಿಗಳನ್ನು ಪ್ರೀತಿಸುವುದರ ಮೂಲಕ ಸಮಾಜವನ್ನು ಪ್ರೀತಿಸಲೂ, ಆ ಮೂಲಕ ತನ್ನನ್ನು ತಾನು ಪ್ರೀತಿಸಲೂ ಸಾಧ್ಯವಾಗುವುದೆಂದು ಜಯರಾಜ್ ವಿದ್ಯಾಥರ್ಿಗಳಿಗೆ ತಿಳಿಸಿದರು.
   ವಿದ್ಯಾಲಯದ ಅಧ್ಯಕ್ಷ ಸ್ವಾಮಿ ವಿವಿಕ್ತಾನಂದ ಸರಸ್ವತಿಜೀಯವರು ಜಯರಾಜ್ ಅವರು ಸಿನೆಮ ಲೋಕದಲ್ಲೊಂದು ಧ್ರುವತಾರೆ ಎಂದರಲ್ಲದೆ ಅವರು ನಿಜವಾದ ಪರಿಸರ ಪ್ರೇಮಿ. ಪ್ರಕೃತಿಯನ್ನು ವಿರೂಪಗೊಳಿಸಿದರೆ ನೆರೆ ಹಾವಳಿಯಂಥ ಅಪಾಯಕಾರೀ ಘಟನೆಗಲು ಸಂಭವಿಸುವುದು ನಿಶ್ಚಿತ ಎನ್ನುವುದಕ್ಕೆ ಕೇರಳದಲ್ಲಿ ಸಂಭವಿಸಿದ ಘಟನೆಯೇ ಕಾರಣ ಎಂದರು.
    ವಿದ್ಯಾಲಯದ ಪ್ರಾಂಶುಪಾಲ ಬಿ.ಪುಷ್ಪರಾಜ್ ಜಯರಾಜ್ ನಿದರ್ೇಶಿಸಿದ ವೈಶಾಲಿ, ಕಳಿಯಾಟ್ಟಂ, ದೇಶಾಟ್ಟನಂ, ಪೈತೃಕಂ, ಒಟ್ಟಾಲ್, ಭಯಾನಕಂ ಮೊದಲಾದ ಸಿನೆಮಾಗಳು ದೇಶೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧವಾಗಿದೆ. ವಿದ್ಯಾಲಯಕ್ಕೆ ಅವರ ಆಗಮನ ಹೊಸತೊಂದು ದಾಖಲೆಯನ್ನು ಸೃಷ್ಟಿಸಲು ಕಾರಣವಾಗಲಿದೆ ಎಂದರು.
    ಬಳಿಕ ನಡೆದ ಸಿನೆಮಾ ನಿಮರ್ಾಣ ಶಿಬಿರದಲ್ಲಿ ಕಥಾರಚನೆ, ಸಂಭಾಷಣೆ, ಪರಿಸರದ ಆಯ್ಕೆ, ಸಂಗೀತ ಸಂಯೋಜನೆ, ಫೊಟೋಗ್ರಫಿಗಳನ್ನು ಹೇಗೆ ಹೊಂದಿಸುವುದೆಂಬುದರ ಮಗ್ಗೆ ಕೂಲಂಕಷ ಮಾಹಿತಿ ಒದಗಿಸಿದರು. ವಿದ್ಯಾಥರ್ಿಗಳ ಪ್ರಶ್ನೆಗಳಿಗೆ ಹಾಗೂ ಸಂದೇಹಗಳಿಗೆ ಜಯರಾಜ್ ಉತ್ತರಿಸಿದರು. ಸಮಾರಂಭದಲ್ಲಿ ವಿವಿಧ ವಲಯಗಳ ಸಂಘಟಕರಾದ ಹರಿಶಂಕರ್, ಡಾ.ಸ್ವರನ್ ರಾಮಚಂದ್ರನ್, ಜಲೀಲ್, ನಿಖಿಲ್ ಮೊದಲಾದವರು ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries