ವಕರ್ಾಡಿ ಸೇವಾ ಸಹಕಾರಿ ಬ್ಯಾಂಕ್ ಶತಮಾನೋತ್ಸವ ಕಟ್ಟಡ ಉದ್ಘಾಟನೆ
ಮಂಜೇಶ್ವರ: ಸುದೀರ್ಘ ನೂರು ವರ್ಷಗಳ ಜನಪರವಾದ ಸೇವೆಗಳನ್ನು ಸಲ್ಲಿಸುತ್ತಾ ವಕರ್ಾಡಿ ಹಾಗೂ ಪರಿಸರ ಗ್ರಾಮಗಳ ಪ್ರಶಂಸೆಗೆ ಪಾತ್ರವಾದ ವಕರ್ಾಡಿ ಸೇವಾ ಸಹಕಾರಿ ಬ್ಯಾಂಕ್ ಮುಂಭಾಗದಲ್ಲಿ ಬ್ಯಾಂಕ್ ಅಧ್ಯಕ್ಷ ಎಸ್ ಅಬ್ದುಲ್ ಖಾದರ್ ರವರು ಧ್ವಜಾರೋಹಣ ಗೈಯುವುದರೊದಿಗೆ ಶತಮಾನೋತ್ಸವ ಕಟ್ಟಡ ಉದ್ಘಾಟನೆಯ ಸಮಾರಂಭಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು.
ಮೀಂಜ ಗ್ರಾ.ಪಂ. ನ ಕೋಳ್ಯೂರು ಗ್ರಾಮದಲ್ಲಿ ಆ ಪ್ರದೇಶದ ರೈತರ ಸ್ವಾವಲಂಬನೆಗಾಗಿ ಹುಟ್ಟಿಕೊಂಡ ಸಹಕಾರಿ ಸಂಘವು ವಕರ್ಾಡಿ ವಿವಿಧೋದ್ದೇಶ ಸಹಕಾರಿ ಸಂಘ ಎಂಬ ಹೆಸರಿನಲ್ಲಿ 1917 ರಲ್ಲಿ ನೋಂದಾವಣೆಗೊಂಡು 1967 ರಲ್ಲಿ ವಕರ್ಾಡಿ ಸೇವಾ ಸಹಕಾರಿ ಸಂಘವಾಗಿ, 1977 ಲ್ಲಿ ಸೇವಾ ಸಹಕಾರಿ ಸಂಘವಾಗಿ ರೂಪುಗೊಂಡಿದೆ.
ಶುಕ್ರವಾರ ಬೆಳಿಗ್ಗೆ ಮಂಜೇಶ್ವರ ಶಾಸಕ ಪಿ ಬಿ ಅಬ್ದುಲ್ ರಜಾಕ್ ರವರ ಅಧ್ಯಕ್ಷತೆ ಯಲ್ಲಿ ನಡೆದ ಶತಮಾನೋತ್ಸವ ಕಟ್ಟಡ ಉದ್ಘಾಟನೆಯನ್ನು ಹಾಗೂ ಸಭಾ ಕಾರ್ಯಕ್ರಮವನ್ನು ರಾಜ್ಯ ಕಂದಾಯ ಸಚಿವ ಇ ಚಂದ್ರಶೇಖರನ್ ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಶತಮಾನೋತ್ಸವದ ಸವಿನೆನಪಿಗೆ ನೂತನ ಕಟ್ಟಡ ನಿಮರ್ಾಣವಾಗಿರುವುದು ಉತ್ತಮ ಬೆಳವಣಿಗೆ. ರಾಷ್ಟ್ರ ಸ್ವಾತಂತ್ರ್ಯ ಗಳಿಸುವ ಮೊದಲೇ ಬ್ಯಾಂಕ್ ಗ್ರಾಮೀಣ ಪ್ರದೇಶದ ಜನತೆಗಾಗಿ ರೂಪಗೊಂಡು ಇದೀಗ 101 ನೇ ವರ್ಷಕ್ಕೆ ಪಾದಾರ್ಪಣೆಗೈಯುತ್ತಿರುವುದು ದಾಖಲೆಯಾಗಿದೆ. ಸಹಕಾರಿ ವಲಯವನ್ನು ಬಲಪಡಿಸುವ ಅಗತ್ಯವಿದೆ ಎಂದು ಅವರು ಹೇಳಿದರು.
ಕಾಸರಗೋಡು ಜಿಲ್ಲಾ ಪಂ. ಸ್ಥಾಯೀ ಸಮಿತಿ ಅಧ್ಯಕ್ಷ ಹಷರ್ಾದ್ ವಕರ್ಾಡಿ ಸ್ಮರಣಿಕೆ ಬಿಡುಗಡೆಗೊಳಿಸಿದರು. ಬಳಿಕ ನಡೆದ ಸ್ಟ್ರಾಂಗ್ ಕೊಠಡಿಯನ್ನು ಸಹಕಾರಿ ಸಂಘದ ರಿಜಿಸ್ಟ್ರಾರ್ ಮೊಹಮ್ಮದ್ ನೌಶಾದ್ ವಿ ಉದ್ಘಾಟಿಸಿದರು. ಬ್ಯಾಂಕ್ ಕೌಂಟರ್ ಉದ್ಘಾಟನೆಯನ್ನು ಸಹಕಾರಿ ಸಂಘದ ಸಹಾಯಕ ರಿಜಿಸ್ಟಾರ್ ನೆರವೇರಿಸಿದರು. ಕೋರ್ ಬ್ಯಾಂಕಿಂಗ್ ಸಿಸ್ಟಂನ್ನು ಸಹಕಾರಿ ಆಡಿಟರ್ ನಿದರ್ೇಶಕ ಬಾಲಕೃಷ್ಣ ನೆರವೇರಿಸಿದರು. ಮೀಂಜ ಗ್ರಾ. ಪಂ. ಅಧ್ಯಕ್ಷೆ ಶಂಶಾದ್ ಶುಕೂರ್ ಶತಮಾನೋತ್ಸವ ಠೇವಣಿ ನಿಕ್ಷೇಪವನ್ನು ಉದ್ಘಾಟಿಸಿದರು. ವಕರ್ಾಡಿ ಗ್ರಾ. ಪಂ. ಅಧ್ಯಕ್ಷ ಅಬ್ದುಲ್ ಮಜೀದ್ ಶತಮಾನೋತ್ಸವ ಸಾಲ ವಿತರಣೆಯನ್ನು ಉದ್ಘಾಟಿಸಿದರು. ಜಿಲ್ಲಾ ಸಹಕಾರಿ ಬ್ಯಾಂಕ್ ಪ್ರಬಂಧಕ ಅನಿಲ್ ಕುಮಾರ್ ರವರು ಪ್ರಗತಿಪರ ಕೃಷಿಕರನ್ನು ಈ ಸಂದರ್ಭ ಸನ್ಮಾನಿಸಿದರು. ವಕರ್ಾಡಿ ಚಚರ್್ ಧರ್ಮಗುರುಗಳಾದ ವಂದನೀಯ ಗುರು ಫ್ರಾನ್ಸಿಸ್ ರೋಡ್ರಿಗಸ್ ಬ್ಯಾಂಕಿನ ಹಿರಿಯ ಸದಸ್ಯರುಗಳನ್ನು ಸನ್ಮಾನಿಸಿದರು. ಮಂಜೇಶ್ವರ ಬ್ಲಾಕ್ ಪಂ. ಉಪಾಧ್ಯಕ್ಷೆ ಮಮತಾ ದಿವಾಕರ್ ವಿದ್ಯಾಥರ್ಿಗಳನ್ನು ಸನ್ಮಾನಿಸಿದರು, ಬ್ಲಾಕ್ ಪಂ. ಸದಸ್ಯ ಸದಾಶಿವ ನಿವೃತ ಸೈನಿಕರನ್ನು ಸನ್ಮಾನಿಸಿದರು. ಮಂಜೇಶ್ವರ ಬ್ಲಾಕ್ ಪಂ. ಸ್ಥಾಯೀ ಸಮಿತಿ ಅಧ್ಯಕ್ಷೆ ಫಾತಿಮತ್ ಝುಹರಾ ನಿವೃತ ಬ್ಯಾಂಕ್ ಸಿಬ್ಬಂದಿಗಳನ್ನು ಸನ್ಮಾನಿಸಿದರು. ಬ್ಯಾಂಕ್ ಕಾರ್ಯದಶರ್ಿ ಶ್ರೀವತ್ಸ ಭಟ್ ವರದಿ ಮಂಡಿಸಿದರು.
ಈ ಸಂದರ್ಭ ವೇದಿಕೆಯಲ್ಲಿ ಆಶಾಲತಾ ಸತೀಶ್ ಕೆ ಸಿ, ಬಿ ಎಂ ಅನಂತ, ಸಂಜೀವ ಶೆಟ್ಟಿ ಸಹಿತ ಹಲವು ಗಣ್ಯರು ಉಪಸ್ಥಿತರಿದ್ದರು. ಬ್ಯಾಂಕ್ ಅಧ್ಯಕ್ಷ ಎಸ್ ಅಬ್ದುಲ್ ಖಾದರ್ ಸ್ವಾಗತಿಸಿ, ಬ್ಯಾಂಕ್ ನಿದರ್ೇಶಕ ದಿವಾಕರ್ ಎಸ್ ಜೆ ಕಾರ್ಯಕ್ರಮ ನಿರೂಪಿಸಿ,ವಂದಿಸಿದರು.