ಸೇವಾ ಮನೋಭಾವವನ್ನು ಬೆಳೆಸಿಕೊಳ್ಳಿ : ಶಾಹುಲ್ ಹಮೀದ್
ಮುಳ್ಳೇರಿಯ: ಕಲಿಕೆಯೊಂದಿಗೆ ಸೇವಾ ಮನೋಭಾವವನ್ನು ಬೆಳೆಸಿಕೊಂಡರೆ ಮಾತ್ರ ಉತ್ತಮ ನಾಗರಿಕನಾಗಲು ಸಾಧ್ಯ. ಸಮಾಜ ಸೇವೆಯ ಮೂಲಕ ನಮ್ಮ ವ್ಯಕ್ತಿತ್ವವನ್ನು ವಿಕಸಿಸಿಕೊಳ್ಳಬೇಕು. ಅದಕ್ಕೆ ಎನ್.ಎಸ್.ಎಸ್. ದಾರಿದೀಪವಾಗಲಿ ಎಂದು ಪ್ರಶಸ್ತಿ ವಿಜೇತ ಎನ್.ಎಸ್.ಎಸ್. ಯೋಜನಾಧಿಕಾರಿ, ರಾಷ್ಟ್ರೀಯ ಸೇವಾ ಯೋಜನೆಯ ಕಾಸರಗೋಡು ಜಿಲ್ಲೆಯ ಪಿ.ಎ.ಸಿ. ಮೆಂಬರ್ ಶಾಹುಲ್ ಹಮೀದ್ ಅವರು ಹೇಳಿದರು.
ಅವರು ಬೋವಿಕ್ಕಾನ ಬಿ.ಎ.ಆರ್. ಹೈಯರ್ ಸೆಕೆಂಡರಿ ಶಾಲೆಯ ಸಭಾಂಗಣದಲ್ಲಿ ಪ್ಲಸ್ ವನ್ ವಿದ್ಯಾಥರ್ಿಗಳಿಗಾಗಿ ಆಯೋಜಿಸಲಾದ ಎನ್.ಎಸ್.ಎಸ್. ತರಬೇತಿಯಲ್ಲಿ ಮಾತನಾಡಿದರು.
ಶಾಲಾ ಪ್ರಾಂಶುಪಾಲ ಮೆಜೋ ಜೋಸೆಫ್ ಅಧ್ಯಕ್ಷತೆ ವಹಿಸಿ ಮಾತನಾಡುತ್ತ ಎನ್.ಎಸ್.ಎಸ್. ನ ಧ್ಯೇಯೋದ್ದೇಶಗಳನ್ನು ಅರಿತು ಕಾರ್ಯಪ್ರವೃತ್ತರಾಗುವಂತೆ ವಿದ್ಯಾಥರ್ಿಗಳಿಗೆ ಕರೆ ಇತ್ತರು. ಎನ್. ಎಸ್.ಎಸ್. ಯೋಜನಾಧಿಕಾರಿ ಪ್ರೀತಮ್ ಎ.ಕೆ. ಸ್ವಾಗತಿಸಿ, ಎನ್.ಎಸ್.ಎಸ್. ಲೀಡರ್ ಅಶ್ವತಿ ವಂದಿಸಿದರು.