HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                    ಯಕ್ಷಗಾನವನ್ನು ಸಮೃದ್ದಗೊಳಿಸಿದ ಮಹಾನ್ ಸಂತ ದಿ.ಶೇಣಿ-ಬ್ರಹ್ಮಶ್ರೀ ಗಣಾಧಿರಾಜ ಉಪಾಧ್ಯಾಯ
    ಬದಿಯಡ್ಕ: ಶ್ರೀಮಂತ ಕಲೆಯಾದ ಯಕ್ಷಗಾನವನ್ನು ಸಮೃದ್ದಗೊಳಿಸಿದ ದಿ.ಶೇಣಿ ಗೋಪಾಲಕೃಷ್ಣ ಭಟ್ ತಮ್ಮ ಅಗಾಧ ಫ್ರೌಢಿಮೆ, ಅಪರಿಮಿತ ಕಲಾಸಕ್ತಿಯ ಮೂಲಕ ಸದಾ ಸ್ಮರಣೀಯರು. ಯಾವುದೇ ಪಾತ್ರಗಳನ್ನೂ ತಮ್ಮ ಅಗಾಧ ವಾಕ್ಚಾತುರ್ಯದ ಮೂಲಕ ಸಮಥರ್ಿಸಿ ಬೆರಗುಮೂಡಿಸಿದ ಮಹಾನ್ ಅವಧೂತರಾಗಿದ್ದರು ಎಂದು ಶ್ರೀಕ್ಷೇತ್ರ ಕೊಲ್ಲಂಗಾನದ ಬ್ರಹ್ಮಶ್ರೀ ಗಣಾಧಿರಾಜ ಉಪಾಧ್ಯಾಯ ಅಭಿಪ್ರಾಯ ವ್ಯಕ್ತಪಡಿಸಿದರು.
     ಕಾಸರಗೋಡಿನ ಶೇಣಿ ರಂಗಜಂಗಮ ಟ್ರಸ್ಟ್ ಹಾಗೂ ಪೆರ್ಲದ ಯಕ್ಷಪ್ರೇಮಿ ಸಂಘಟನೆಯ ನೇತೃತ್ವದಲ್ಲಿ ಶೇಣಿ ಜನ್ಮ ಶತಮಾನೋತ್ಸವದ ಅಂಗವಾಗಿ ಬದಿಯಡ್ಕದಲ್ಲಿ ಆಯೋಜಿಸಲಾದ ಯಕ್ಷ ನುಡಿ ಸರಣಿಯ ಶನಿವಾರ ಅಪರಾಹ್ನ ನಡೆದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
  ಯಕ್ಷಗಾನ ಕಲಾ ಪ್ರಪಂಚ ದುರ್ಬಲವಾಗಿದ್ದ ಕಾಲಘಟ್ಟದಲ್ಲಿ ಅದಕ್ಕೊಂದು ಸ್ಥಾನ ಕಲ್ಪಿಸಿ ಉಚ್ಚ್ರಾಯತೆಗೆ ತರುವಲ್ಲಿ ದಿ.ಶೇಣಿಯವರು ಸಲ್ಲಿಸಿದ ಅಪರಿಮಿತ ಕಲಾಸೇವೆಯು ಅಜರಾಮರವಾದುದು ಎಂದು ತಿಳಿಸಿದ ಅವರು, ಯುವ ತಲೆಮಾರಿಗೆ ಯಕ್ಷಗಾನದ ಅಭಿರುಚಿ, ಆಸಕ್ತಿ ಮೂಡಿಸುವಲ್ಲಿ, ಶೇಣಿಯವರ ಕಲಾಸೇವೆಯನ್ನು ನೆನಪಿಸುವಲ್ಲಿ ಆಯೋಜಿಸಲಾಗುವ ಕಾರ್ಯಚಟುವಟಿಕೆಗಳು ಸ್ತುತ್ಯರ್ಹ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
   ಹಿರಿಯ ಸಾಹಿತಿ, ಕಲಾವಿದ ಕೇಳು ಮಾಸ್ತರ್ ಅಗಲ್ಪಾಡಿ ಅವರು ಅಧ್ಯಕ್ಷತೆ ವಹಿಸಿದ್ದ ಸಮಾರಭದಲ್ಲಿ ಸಮಾರೋಪ ಭಾಷಣ ಮಾಡಿ ಮಾತನಾಡಿದ ನಿವೃತ್ತ ಮುಖ್ಯೋಪಾಧ್ಯಾಯ ಡಾ.ಬೇ.ಸಿ.ಗೋಪಾಲಕೃಷ್ಣ ಭಟ್ ಅವರು, ರಾಷ್ಟ್ರದ ಸಾಂಸ್ಕೃತಿಕತೆಯ ಧ್ಯೋತಕವಾದ ಪುರಾಣ ಪ್ರಪಂಚದ ತಿರುಳುಗಳನ್ನು ಜನಸಾಮಾನ್ಯರಿಗೆ ತಿಳಿಯಪಡಿಸುವಲ್ಲಿ ಗಣನೀಯ ಕೊಡುಗೆ ನೀಡುತ್ತಿರುವ ಯಕ್ಷಗಾನ ಕ್ಷೇತ್ರದ ಇಂದಿನ ಬೆಳವಣಿಗೆಗಳು ಭರವಸೆ ಮೂಡಿಸುತ್ತಿವೆ. ಭಾಷಾಭಿಮಾನದ ಸಾಕಾರತೆಗೆ ಯಕ್ಷಗಾನದ ಕೊಡುಗೆ ಮಹತ್ವಪೂರ್ಣವಾಗಿದ್ದು, ಕರಾವಳಿ ಕನರ್ಾಟಕದ ಕನ್ನಡದ ಬೇರು ಯಕ್ಷಗಾನದಲ್ಲಿ ಅಡಕವಾಗಿದೆ ಎಂದು ತಿಳಿಸಿದರು. ದಿ.ಶೇಣಿ ಗೋಪಾಲಕೃಷ್ಣ ಭಟ್ ಅವರ ಸಾಧನೆ-ಕೊಡುಗೆಗಳು ಗಡಿನಾಡು ಕಾಸರಗೋಡಿನ ಹೆಮ್ಮೆಯಾಗಿದ್ದು, ಶೇಣಿಯವರನ್ನು ನೆನಪಿಸುವ ಚಟುವಟಿಕೆಗಳು ನಮ್ಮ ಕರ್ತವ್ಯ ಎಂದು ತಿಳಿಸಿದರು.
   ಸಮಾರಂಭದಲ್ಲಿ ಹಿರಿಯ ಕಲಾಪೋಷಕ, ಸಂಘಟಕ ಗಿರಿಧರ ಪೈ ಬದಿಯಡ್ಕ ಅವರನ್ನು ಅಭಿನಂದಿಸಿ ಸನ್ಮಾನಿಸಲಾಯಿತು. ಕಣಿಪುರ ಯಕ್ಷಗಾನ ಮಾಸಪತ್ರಿಕೆಯ ಸಂಪಾದಕ ಎಂ.ನಾ.ಚಂಬಲ್ತಿಮಾರ್ ಈ ಸಂದರ್ಭ ಅಭಿನಂದನಾ ಭಾಷಣಗೈದು, ಸಮಾಜದ ಸ್ವಸ್ಥ ಬದುಕಿಗೆ ಚಿಕಿತ್ಸಕರಾಗಿ ಕಲಾಪೋಷಕರು ಸ್ತುತ್ಯರ್ಹರಾಗುತ್ತಾರೆ. ಹೊಸ ಕಾಲಘಟ್ಟದಲ್ಲಿ ಆದರ್ಶ ಬಿಂಬಗಳು ಕುಸಿಯುವ ಭೀತಿ ಎದುರಾಗಿರುವಾಗ ಸಾಂಸ್ಕೃತಿಕತೆಯ ಮೂಲಕ ಸಮಾಜ ಕಟ್ಟುವ ಕಾಯಕದಲ್ಲಿ ನಿರತರಾಗಿರುವವರ ಗುರುತಿಸುವಿಕೆ ಪ್ರಜ್ಞಾವಂತಿಕೆ ಎಂದು ತಿಳಿಸಿದರು.
   ಶೇಣಿ ವೇಣುಗೋಪಾಲ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಸತೀಶ ಪುಣಿಚಿತ್ತಾಯ ಪೆರ್ಲ ವಂದಿಸಿದರು.  ಮೂಲಡ್ಕ ನಾರಾಯಣ ಕಾರ್ಯಕ್ರಮ ನಿರೂಪಿಸಿದರು. ಬಳಿಕ ವೀರಮಣಿ ಕಾಳಗ ಯಕ್ಷಗಾನ ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ತಲ್ಪನಾಜೆ ವೆಂಕಟರಮಣ ಭಟ್, ಸತೀಶ ಪುಣಿಚಿತ್ತಾಯ ಪೆರ್ಲ, ಶ್ರೀಧರ ಎಡಮಲೆ, ಅನೂಪ್ ಸ್ವರ್ಗ, ಸಮೃದ್ದ ಪುಣಿಚಿತ್ತಾಯ ಪೆರ್ಲ ಸಹಕರಿಸಿದರು. ಮುಮ್ಮೇಳದಲ್ಲಿ ವಿನಯ ಆಚಾರ್ ಹೊಸಬೆಟ್ಟು(ಹನೂಮಂತ), ಶೇಣಿ ವೇಣುಗೋಪಾಲ ಭಟ್(ವೀರಮಣಿ), ಮೂಲಡ್ಕ ನಾರಾಯಣ(ಶತ್ರುಘ್ನ), ಅಶ್ವಿನೀ ಆಚಾರ್ ಹೊಸಬೆಟ್ಟು(ಈಶ್ವರ), ಶಂಕರ ಸಾರಡ್ಕ(ಶ್ರೀರಾಮ) ಪಾತ್ರಗಳನ್ನು ನಿರ್ವಹಿಸಿದರು.
   

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries