HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                     ಮಂಜೇಶ್ವರ ಒಳಪೇಟೆ ಮೂಲಕ ಬಸ್ ಸಂಚಾರ ಮೊಟಕು-ಬಸ್ ಮಾಲಕರಿಂದ ಪ್ರತಿಭಟನೆ
     ಮಂಜೇಶ್ವರ: ಅನಧಿಕೃತ ಆಟೋ ರಿಕ್ಷಾ ಸಂಚಾರದ ವಿರುದ್ಧ ಕ್ರಮ ಕೈಗೊಳ್ಳದಿರುವುದನ್ನು ಪ್ರತಿಭಟಿಸಿ ಹೊಸಂಗಡಿ ಜಂಕ್ಷನ್ನಿಂದ ಮಂಜೇಶ್ವರ ಒಳಪೇಟೆ ದಾರಿಯಾಗಿ ತಲಪಾಡಿಗೆ ಸಂಚರಿಸುವ ಬಸ್ ಸಂಚಾರವನ್ನು ಮೊಟಕುಗೊಳಿಸಿ ಬಸ್ ಮಾಲಕರು ಸೋಮವಾರ ಅನಿದರ್ಿಷ್ಟಾವಧಿ ಮುಷ್ಕರಕ್ಕೆ ಚಾಲನೆ ನೀಡಿದರು.
   ಬಸ್ ಸಂಚರಿಸುವಾಗ ಅದರ ಹಿಂದು ಮುಂದಾಗಿ ಆಟೋರಿಕ್ಷಾಗಳು ಸಂಚರಿಸಿ ಪ್ರಯಾಣಿಕರನ್ನು ಕರೆದೊಯ್ಯುತ್ತಿರುವುದು ಬಸ್ಗೆ ಜನರಿಲ್ಲದೆ ನಷ್ಟ ಉಂಟು ಮಾಡುತ್ತಿದೆ. ಈ ಬಗ್ಗೆ ಅಧಿಕಾರಿಗಳಿಗೆ ಮನವಿ ನೀಡಿದ್ದರೂ ಯಾವುದೇ ಕ್ರಮಕೈಗೊಳ್ಳದ ಹಿನ್ನೆಲೆಯಲ್ಲಿ ಸೋಮವಾರದಿಂದ ಸಂಚಾರ ಮೊಟಕುಗೊಳಿಸಲು ಬಸ್ ಮಾಲಕರು ಮುಷ್ಕರಕ್ಕೆ ಮುಂದಾಗಬೇಕಾಯಿತು.
  ಬೆಳಿಗ್ಗೆ ನಡೆದ ಪ್ರತಿಭಟನೆಯನ್ನು  ಮಂಜೇಶ್ವರ ತಾಲೂಕು ಬಸ್ ಮಾಲಕರ ಸಂಘದ ಅಧ್ಯಕ್ಷ ಸುಬ್ಬಣ್ಣ ಆಳ್ವ ಮೀಯಪದವು ಉದ್ಘಾಟಿಸಿದರು. ಪ್ರಧಾನ ಕಾರ್ಯದಶರ್ಿ ತಿಮ್ಮಪ್ಪ ಭಟ್ ಅರಂತಾಡಿ, ಉಮೇಶ್ ಶೆಟ್ಟಿ, ಚಂದ್ರಹಾಸ ಪೆಲಪ್ಪಾಡಿ, ರಾಜೇಶ್ ಬಿ.ಎಂ., ರಾಜೇಶ್ ಉದ್ಯಾವರ, ಬಿ.ಕೆ. ಮುಹಮ್ಮದ್, ಬಸ್ ಕಾಮರ್ಿಕರು ಉಪಸ್ಥಿತರಿದ್ದರು.
  ಸೋಮವಾರ ಹಾಗೂ ಮಂಗಳವಾರ  ಮಂಜೇಶ್ವರ ಒಳಪೇಟೆಯಿಂದಾಗಿ ತಲಪಾಡಿಗೆ ಬಸ್ ಸಂಚಾರವನ್ನು ಮೊಟಕುಗೊಳಿಸಿ ಮುಷ್ಕರ ನಡೆಸಲಾಗುವುದು. ಅಧಿಕಾರಿಗಳು  ಕ್ರಮಕೈಗೊಳ್ಳಲು ಮುಂದಾಗದಿದ್ದರೆ ಬುಧವಾರದಿಂದ ಮಂಜೇಶ್ವರ ತಾಲೂಕಿನಾದ್ಯಂತ ಬಸ್ ಸಂಚಾರ ಮೊಟಕುಗೊಳಿಸಿ ಮುಷ್ಕರ ಹೂಡುವುದಾಗಿ ಬಸ್ ಮಾಲಕರ ಸಂಘ ಸೋಮವಾರ ಎಚ್ಚರಿಕೆ ನೀಡಿದೆ.
    ಇತರೆಡೆ ಇದೇ ಸ್ಥಿತಿ:
   ಮಂಜೇಶ್ವರ ಹೊಸಂಗಡಿಗಳ ಸಹಿತ ಜಿಲ್ಲೆಯ ಇತರ ಕೆಲವು ಪ್ರದೇಶಗಳಲ್ಲೂ ಅಟೋ ರಿಕ್ಷಾ ಸಹಿತ ಇತರ ವಾಹನಗಳು ಬಸ್ ಸೇವೆಗೆ ತೀವ್ರ ತೊಂದರೆಯಾಗುವ ರೀತಿಯಲ್ಲಿ ಬಾಡಿಗೆ ನಡೆಸುತ್ತಿರುವುದರ ಬಗ್ಗೆ ಆಗೀಗ ದೂರುಗಳು ಕೇಳಿಬರುತ್ತಿದ್ದು, ಅಧಿಕೃತರ ನಿರ್ಲಕ್ಷ್ಯದಿಂದ ಬಸ್ ಮಾಲಕರಿಗೆ ತೀವ್ರ ನಷ್ಟದ ಸ್ಥಿತಿ ಹತಾಶೆಗೊಳಿಸುತ್ತಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳದಿದ್ದರೆ ತೀವ್ರ ಗೊಂದಲ, ಮುಷ್ಕರಗಳು ಜನಸಾಮಾನ್ಯರನ್ನು ಮತ್ತಷ್ಟು ಕಂಗೆಡಿಸಲಿದೆ.
   ಟ್ರಿಪ್ ಕಟ್ ರೋಗ:
  ಜಿಲ್ಲೆಯ ಕೆಲವು ಗ್ರಾಮೀಣ ಪ್ರದೇಶಗಳಲ್ಲಿ ಬಸ್ ಸೇವೆಗಳಲ್ಲಿ ಲೋಪಗಳೂ ಕಂಡುಬಾರದಿಲ್ಲ. ಜನಸಾಮಾನ್ಯರ ಸಂಚಾರ ಸೌಕರ್ಯಗಳಿಗಾಗಿ ಪರವಾನಿಗೆ ಪಡೆದು ಸೇವೆ ನಡೆಸಬೇಕಾದ ಬಸ್ ಗಳು ಕೆಲವೊಮ್ಮೆ ತಮ್ಮ ಟ್ರಿಪ್ ಗಳನ್ನು ಮೊಟಕುಗೊಳಿಸುತ್ತಿರುವುದೂ ಕಂಡುಬರುತ್ತಿದೆ. ಈ ಬಗ್ಗೆ ಅಧಿಕೃತರ ಮೌನ ನಡವಳಿಕೆ ಯಾಕೆಂಬುದೂ ಹಲವು ಸಂಶಯಗಳಿಗೆ ಕಾರಣವಾಗಿದೆ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries