ಜಿಲ್ಲಾಧಿಕಾರಿ ಕಚೇರಿ ಮುಂದೆ ಬಿಜೆಪಿ ಧರಣಿ ಸತ್ಯಾಗ್ರಹ
ಕಾಸರಗೋಡು: ವಿವಿಧ ಬೇಡಿಕೆಗಳನ್ನು ಮುಂದಿರಿಸಿ ಬಿಜೆಪಿ ಕಾಸರಗೋಡು ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಸೋಮವಾರ (ಸೆ.17ರಂದು) ಬೆಳಿಗ್ಗೆ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ಪರಿಸರದಲ್ಲಿ ಬೃಹತ್ ಧರಣಿ ಸತ್ಯಾಗ್ರಹ ನಡೆಯಿತು.
ಧರಣಿ ಸತ್ಯಾಗ್ರಹವನ್ನು ಬಿಜೆಪಿ ರಾಜ್ಯ ಉಪಾಧ್ಯಕ್ಷ ಕೆ.ಪಿ.ಶ್ರೀಶನ್ ಮಾಸ್ತರ್ ಉದ್ಘಾಟಿಸಿದರು. ಜಿಲ್ಲಾಧ್ಯಕ್ಷ ನ್ಯಾಯವಾದಿ ಕೆ.ಶ್ರೀಕಾಂತ್ ಅಧ್ಯಕ್ಷತೆ ವಹಿಸಿದರು.
ಶತಮಾನಗಳಲ್ಲೇ ಕೇರಳ ರಾಜ್ಯವು ಎದುರಿಸಿದ ಪ್ರಾಕೃತಿಕ ವಿಕೋಪವನ್ನು ಉಂಟುಮಾಡಿದ ಹಾಗೂ ಯಾವುದೇ ಮೂನ್ಸೂಚನೆಗಳನ್ನು ನೀಡದೇ ಅಣೆಕಟ್ಟುಗಳನ್ನು ತೆರೆದುಬಿಟ್ಟು ಕೇರಳವನ್ನು ದುರಂತಕ್ಕೀಡು ಮಾಡಿದ ರಾಜ್ಯ ಸರಕಾರದ ಆಡಳಿತ ವೈಫಲ್ಯಕ್ಕೆದುರಾಗಿ ಮತ್ತು ಯಾವುದೇ ಸೂಚನೆಗಳನ್ನು ನೀಡದೆ ಅಣೆಕಟ್ಟುಗಳನ್ನು ತೆರೆದುಬಿಟ್ಟು ರಾಜ್ಯವನ್ನು ಮಹಾಪ್ರಳಯದಲ್ಲಿ ಮುಳುಗಿಸಿದ ಪಿಣರಾಯಿ ವಿಜಯನ್ ಸರಕಾರದ ಬೇಜವಾಬ್ದಾರಿ ಬಗ್ಗೆ ನ್ಯಾಯಾಂಗ ತನಿಖೆ ನಡೆಯಬೇಕು, ನೆರೆ ನೆರವು ವಿತರಣೆಯಲ್ಲಿ ಭೇದ ಭಾವವನ್ನು ಕೊನೆಗೊಳಿಸಬೇಕು, ಶೀಘ್ರದಲ್ಲೇ ಎಲ್ಲಾ ಅರ್ಹರಿಗೂ ರಾಜ್ಯ ಸರಕಾರವು ನೆರವು ಒದಗಿಸಬೇಕು, ಜಿಲ್ಲೆಯಲ್ಲಿನ ಅಡಿಕೆ ಕೃಷಿಕರಿಗೆ ಉಂಟಾದ ನಾಶನಷ್ಟಗಳಿಗೆ ತುತರ್ು ಪರಿಹಾರ ಒದಗಿಸಬೇಕು ಮುಂತಾದ ಬೇಡಿಕೆಗಳನ್ನು ಮುಂದಿರಿಸಿ ಧರಣಿ ಸತ್ಯಾಗ್ರಹ ಆಯೋಜಿಸಿತ್ತು.