ರಾಜ್ಯ ಯುವ ಬರಹಗಾರರ ಕಾಸರಗೋಡು ಜಿಲ್ಲಾ ಘಟಕದ ಉದ್ಘಾಟನೆ ಸೆ.8ರಂದು
ಬದಿಯಡ್ಕ : ಬೆಂಗಳೂರಿನ ರಾಜ್ಯ ಯುವ ಬರಹಗಾರರ ಒಕ್ಕೂಟದ ಕಾಸರಗೋಡು ಜಿಲ್ಲೆ ಹಾಗೂ ತಾಲ್ಲೂಕು ಮತ್ತು ಮಂಜೇಶ್ವರ ತಾಲ್ಲೂಕು ಘಟಕದ ಉದ್ಘಾಟನೆಯು ಸೆ.8ರಂದು ಅಪರಾಹ್ನ 2ರಿಂದ ಬದಿಯಡ್ಕದ ಪೆರಡಾಲ ನವಜೀವನ ಪ್ರೌಢಶಾಲೆಯಲ್ಲಿ ನಡೆಯಲಿದೆ. ಘಟಕವನ್ನು ಹಿರಿಯ ಪತ್ರಕರ್ತ ಪುತ್ತೂರಿನ ವಿ ಬಿ ಅತರ್ಿಕಜೆ ಉದ್ಘಾಟಿಸುವರು. ಒಕ್ಕೂಟದ ಜಿಲ್ಲಾ ಅಧ್ಯಕ್ಷೆ ಪುಂಡೂರು ಪ್ರಭಾವತಿ ಕೆದಿಲಾಯ ಅಧ್ಯಕ್ಷತೆ ವಹಿಸುವರು. ಬೆಂಗಳೂರಿನ ರಾಜ್ಯ ಯುವ ಬರಹಗಾರರ ಒಕ್ಕೂಟದ ಸಂಸ್ಥಾಪಕ ಅಧ್ಯಕ್ಷ ಹೂಹಳ್ಳಿ ನಾಗರಾಜ್, ಕನ್ನಡ ಸಾಹಿತ್ಯ ಪರಿಷತ್ತಿನ ಕಾಸರಗೋಡು ಗಡಿನಾಡ ಘಟಕದ ಅಧ್ಯಕ್ಷ ಎಸ್ ವಿ ಭಟ್, ಧಾಮರ್ಿಕ ವಿದ್ವಾಂಸರಾದ ಸುಗುಣಾ ಬಿ ತಂತ್ರಿ ಉಬ್ರಂಗಳ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಕಾಸರಗೋಡು ತಾಲ್ಲೂಕು ಘಟಕದ ಅಧ್ಯಕ್ಷ ವಿರಾಜ್ ಅಡೂರು ಹಾಗೂ ಮಂಜೇಶ್ವರ ತಾಲ್ಲೂಕು ಘಟಕದ ಅಧ್ಯಕ್ಷೆ ಚೇತನಾ ಕುಂಬಳೆ ಉಪಸ್ಥಿತರಿರುವರು.
ಅಪರಾಹ್ನ 3ರಿಂದ ನಡೆಯುವ ಕನ್ನಡ ಕವಿಗೋಷ್ಠಿಯನ್ನು ಶಿಕ್ಷಣ ತಜ್ಞ ವಿ ಬಿ ಕುಳಮರ್ವ ಉದ್ಘಾಟಿಸುವರು. ಹಿರಿಯ ಸಾಹಿತಿ ರಾಧಾಕೃಷ್ಣ ಉಳಿಯತ್ತಡ್ಕ ಅಧ್ಯಕ್ಷತೆ ವಹಿಸುವರು. ಕವಿಗಳಾದ ಶ್ರೀಕೃಷ್ಣಯ್ಯ ಅನಂತಪುರ, ದೇವರಾಜ್ ಆಚಾರ್ಯ ಕುಂಬಳೆ, ಶ್ವೇತಾ ಕಜೆ, ಲತಾ ಆಚಾರ್ಯ ಬನಾರಿ, ಕೆ ನರಸಿಂಹ ಭಟ್ ಏತಡ್ಕ, ರಂಗ ಶರ್ಮ ಉಪ್ಪಂಗಳ, ಶ್ರೀಧರ ನಾಯಕ್ ಕುಕ್ಕಿಲ, ದಯಾನಂದ ರೈ ಕಳ್ವಾಜೆ, ಆನಂದ ರೈ ಅಡ್ಕಸ್ಥಳ, ಮಣಿರಾಜ್ ವಾಂತಿಚ್ಚಾಲ್, ಹರೀಶ್ ಪೆರ್ಲ, ಸುಭಾಷ್ ಪೆರ್ಲ, ಕೆ ಎ ಎಂ ಅನ್ಸಾರಿ, ಜ್ಯೋತ್ಸ್ನಾ ಎಂ ಕಡಂದೇಲು, ಶಾರದಾ ಎಸ್ ಭಟ್ ಕಾಡಮನೆ, ಶಶಿಕಲಾ ಕುಂಬಳೆ, ಸುಶೀಲಾ ಪದ್ಯಾಣ, ಸಂದೀಪ ಬದಿಯಡ್ಕ, ಗಣೇಶ್ ಪೈ ಬದಿಯಡ್ಕ, ಪರಿಣಿತ ಎನರ್ಾಕುಳಂ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಶ್ಯಾಮಲಾ ರವಿರಾಜ್ ಕುಂಬಳೆ, ಕರಿಂಬಿಲ ಲಕ್ಷ್ಮಣ ಪ್ರಭು, ಸುಂದರ ಬಾರಡ್ಕ, ಶ್ರೀಶಕುಮಾರ ಪಂಜಿತ್ತಡ್ಕ, ಜಯ ಮಣಿಯಂಪಾರೆ ಮೊದಲಾದವರು ಭಾಗವಹಿಸಲಿದ್ದಾರೆ. ರಾಜ್ಯ ಯುವ ಬರಹಗಾರರ ಒಕ್ಕೂಟದ ಕಾಸರಗೋಡು ಜಿಲ್ಲಾ ಘಟಕವು ಕಾಸರಗೋಡು ಜಿಲ್ಲೆಯಲ್ಲಿ ಕನ್ನಡ ನುಡಿ ಹಾಗೂ ಸಂಸ್ಕೃತಿಯ ರಕ್ಷಣೆ, ಕನ್ನಡ ಪ್ರತಿಭಾನ್ವಿತರ ಶೋಧನೆ, ಕನ್ನಡಿಗರ ಕೃತಿಗಳ ರಚನೆ, ಕನ್ನಡ ಸಾಹಿತ್ಯದ ಬಗ್ಗೆ ಶಾಲಾ ಮಕ್ಕಳಿಗೆ ಮಾಹಿತಿ, ಕನ್ನಡ ಭಾಷೆಯ ಶಿಬಿರಗಳು, ಕಮ್ಮಟ ಹಾಗೂ ಕಾಯರ್ಾಗಾರಗಳು, ಮಕ್ಕಳ ಸಾಹಿತ್ಯ ಗೋಷ್ಠಿ ಮೊದಲಾದ ಅನೇಕ ಯೋಜನೆಯನ್ನು ಹಮ್ಮಿಕೊಂಡಿದೆ ಎಂದು ಪ್ರಕಟಣೆ ತಿಳಿಸಿದೆ.