HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                                ಎಡನೀರಿನಲ್ಲಿ ಗಣೇಶೋತ್ಸವ
                  ಉತ್ಸವಗಳಿಂದ ಧಾಮರ್ಿಕ ಪ್ರಜ್ಞೆ ಜಾಗೃತಿ-ಎಡನೀರು ಶ್ರೀ
       ಬದಿಯಡ್ಕ:  ಯುವ ತಲೆಮಾರಿಗೆ ಧಾಮರ್ಿಕ ಪ್ರಜ್ಞೆ, ಆಧ್ಯಾತ್ಮಿಕ ಅರಿವು ಮೂಡಿಸುವಲ್ಲಿ ಸಾರ್ವಜನಿಕ ಗಣೇಶೋತ್ಸವಗಳು ಮಹತ್ವಪೂರ್ಣವೆನಿಸಿವೆ. ಹಿಂದೂಗಳ ಒಗ್ಗಟ್ಟನ್ನು ಕಾಯ್ದುಕೊಳ್ಳುವಲ್ಲಿ ಸಾರ್ವಜನಿಕವಾಗಿ ಆಚರಿಸುವ ಚಟುವಟಿಕೆಗಳು ಹೆಚ್ಚು ಪ್ರಯೋಜನಕಾರಿಯಾಗಿವೆ ಎಂದು ಶ್ರೀಮದ್ ಎಡನೀರು ಮಠಾಧೀಶ ಶ್ರೀಕೇಶವಾನಂದ ಭಾರತೀ ಶ್ರೀಗಳು ಆಶೀರ್ವಚನ ನೀಡಿದರು.
   ಎಡನೀರು ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿ ನೇತೃತ್ವದಲ್ಲಿ ಗುರುವಾರ ಎಡನೀರು ಮಠದ ಶ್ರೀಕೃಷ್ಣ ರಂಗಮಂಟಪದಲ್ಲಿ ಆಯೋಜಿಸಲಾದ 31ನೇ ವರ್ಷದ ಸಾರ್ವಜನಿಕ ಶ್ರೀಗಣೇಶೋತ್ಸವ ಕಾರ್ಯಕ್ರಮವನ್ನು ದೀಪ ಪ್ರಜ್ವಲನೆಗೈದು ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.
  ಜನಸಾಮಾನ್ಯರ ಸರಳ ಅರ್ಚನೆಗಳಿಗೆ ಒಲಿಯುವ ಸಿದ್ದಿವಿನಾಯಕ ಸುಜ್ಞಾನದ ಪ್ರೇರಣಾ ಶಕ್ತಿಯಾಗಿದ್ದು, ಪ್ರತಿಯೊಬ್ಬ ಭಕ್ತನಲ್ಲೂ ಸತ್ಯ ನಿಷ್ಠೆಗಳ ಪ್ರಚೋದನೆಯನ್ನು ಭಗವಂತ ಅನುಗ್ರಹಿಸುವಂತಾಗಲಿ ಎಂದು ಹೇಳಿದ ಅವರು, ಸನಾತನ ಧರ್ಮ, ನಂಬಿಕೆಗಳ ಬಗ್ಗೆ ಹೊಸ ತಲೆಮಾರಿಗೆ ಮಾರ್ಗದರ್ಶನ ನೀಡುವ ಅಗತ್ಯವಿದೆ ಎಂದು ತಿಳಿಸಿದರು. ಬದುಕಿನ ಸಂಕಟಗಳಿಂದ ಪಾರಾಗಿ ಧರ್ಮನಿಷ್ಠತೆಯ ಮೂಲಕ ಬದುಕನ್ನು ಯಶಸ್ವಿಗೊಳಿಸುವ ಶಕ್ತಿ ಪ್ರಾಪ್ತವಾಗಲಿ ಎಂದು ಅವರು ಆಶೀರ್ವಚನಗೈದು ಹರಸಿದರು.
   ಉತ್ಸವ ಸಮಿತಿ ಅಧ್ಯಕ್ಷ ಮಧುಸೂದನ ಮಾಸ್ತರ್ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಉತ್ತರ ಕೇರಳ ಮಲಯ ಸಮುದಾಯ ಸಂಘದ ರಾಜ್ಯ ಜೊತೆ ಕಾರ್ಯದಶರ್ಿ ರಾಜನ್ ಪಣಿಕ್ಕರ್ ಕಾನತ್ತೂರು ಧಾಮರ್ಿಕ ಭಾಷಣ ಮಾಡಿದರು. ಶ್ರೀಎಡನೀರು ಮಠದ ಪ್ರಬಂಧಕ ನ್ಯಾಯವಾದಿ ಐ.ವಿ.ಭಟ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದರು. ಸ್ಥಾಯೀ ಸಮಿತಿ ಅಧ್ಯಕ್ಷ ಮಧುಸೂದನ ಕೆಮ್ಮಂಗಯ ಉಪಸ್ಥಿತರಿದ್ದರು. ಕಮಲಾಕ್ಷ ಕಲ್ಲುಗದ್ದೆ ಸ್ವಾಗತಿಸಿ, ಜಗನ್ನಾಥ ಕಾಪುಮೂಲೆ ವಂದಿಸಿದರು. ವೇಣು ಮಾಸ್ತರ್ ಕಾರ್ಯಕ್ರಮ ನಿರೂಪಿಸಿದರು.
  ಬೆಳಿಗ್ಗೆ 7ಕ್ಕೆ ಗಣಪತಿ ಹವನ, ಮಹಾಗಣಪತಿ ವಿಗ್ರಹ ಪ್ರತಿಷ್ಠೆ, 8.30ಕ್ಕೆ ಧ್ವಜಾರೋಹಣ ನಡೆಯಿತು. ಬಳಿಕ 9 ರಿಂದ ಶ್ರೀಭಾರತೀ ಬಾಲಗೋಕುಲ ಎಡನೀರು ತಂಡದವರಿಂದ ಭಜನಾ ಸಂಕೀರ್ತನೆ ನಡೆಯಿತು. 
  ವಿವಿಧ ಸ್ಪಧರ್ಾ  ಕಾರ್ಯಕ್ರಮಗಳ ಅಂಗವಾಗಿ ಗಣಪತಿ ಚಿತ್ರ ರಚನಾ ಸ್ಪಧರ್ೆ, ಭಗವದ್ಗೀತಾ ಕಂಠಪಾಠ ಸ್ಪಧರ್ೆ ಮೊದಲಾದವುಗಳು ನಡೆಯಿತು. ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನದಾನ ನಡೆಯಿತು. ಅಪರಾಹ್ನ 2 ರಿಂದ ಸ್ಪಧರ್ೆಗಳು ಮುಂದುವರಿದು, ಸಂಜೆ ಉಡುಪಮೂಲೆಯ ಭೂಮಿಕಾ ಪ್ರತಿಷ್ಠಾನದ ವಿದುಷಿಃ ಅನುಪಮಾ ರಾಘವೇಂದ್ರ ಉಡುಪಮೂಲೆ ಮತ್ತು ಶಿಷ್ಯಂದಿರಿಂದ ನೃತ್ಯ ಸಿಂಚನ ಪ್ರದರ್ಶನಗೊಂಡಿತು. ಸಂಜೆ 6ಕ್ಕೆ ಧ್ವಜಾವರೋಹಣ, ಬಳಿಕ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಗಣಪತಿ ವಿಸರ್ಜಣಾ ಶೋಭಾಯಾತ್ರೆಯೊಂದಿಗೆ ಉತ್ಸವ ಸಂಪನ್ನಗೊಂಡಿತು.


    

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries