ಸಮಾಜವನ್ನು ಜಾಗೃತವಾಗಿರಿಸಲು ಸಾಹಿತ್ಯ ಸಾರ್ವಕಾಲಿಕ ಮಾಧ್ಯಮ- ರಾಜಾ ಬೆಳ್ಚಪಾಡ
ಉದ್ಯಾವರದಲ್ಲಿ ವಿಶ್ವಕರ್ಮ ಸಾಹಿತ್ಯ ದರ್ಶನದ ಸದಸ್ಯ ಸಂಗಮ ಸಂಪನ್ನ
ಮಂಜೇಶ್ವರ: ಸಮಾಜದಲ್ಲಿರುವ ಅಂಕು ಡೊಂಕುಗಳನ್ನು ತಿದ್ದಿ ತೀಡಿ ಯಾವುದೇ ರಂಗದ ವಿಚಾರಧಾರೆಯಲ್ಲೂ ಜಾಗೃತಿ ಮೂಡಿಸಲು ಸಾಹಿತ್ಯ ಸಾರ್ವಕಾಲಿಕ ಮಾಧ್ಯಮವಾಗಿದೆ.ಆದ್ದರಿಂದಲೇ ಕವಿ,ಸಾಹಿತಿಗಳಿಗೆ ಸಮಾಜದಲ್ಲಿ ಮನ್ನಣೆ ನೀಡಲಾಗುತ್ತದೆ ಎಂದು ಮಾಡ ಶ್ರೀ ಅರಸು ಮಂಜಿಷ್ಣಾರ್ ದೈವಸ್ಥಾನದ ಅಣ್ಣ ದೈವದ ಪಾತ್ರಿ ರಾಜಾ ಬೆಳ್ಚಪ್ಪಾಡ ನುಡಿದರು.
ಅವರು ಉದ್ಯಾವರ ಮಾತೃಕೃಪಾದಲ್ಲಿ ಭಾನುವಾರ ಜರಗಿದ ವಿಶ್ವಕರ್ಮ ಸಾಹಿತ್ಯ ದರ್ಶನ ಕಾಸರಗೋಡು ಇದರ ದ್ವಿತೀಯ ವರ್ಷದ ಸದಸ್ಯ ಸಂಗಮವನ್ನು ದೀಪ ಪ್ರಜ್ವಲನೆಯ ಮೂಲಕ ಉದ್ಘಾಟಿಸಿ ಅನುಗ್ರಹಗೈದು ಮಾತನಾಡಿದರು.
ವಿಶ್ವಕರ್ಮ ಸಾಹಿತ್ಯ ದರ್ಶನದ ಹಿರಿಯ ಸದಸ್ಯ ಕವಿ ಆಶೋಕ್ ಸನಾಗ ಸಭೆಯ ಅಧ್ಯಕ್ಷತೆವಹಿಸಿದ್ದರು. ಪ್ರಾಚ್ಯ ವಸ್ತು ಸಂಗ್ರಹಗಾರ ರಾಮಕೃಷ್ಣ ಆಚಾರ್ಯ ಪುತ್ತೂರು,ಎಂ.ಪಿ.ಚಿದಾನಂದ ಆಚಾರ್ಯ ಕಟ್ಟೆಬಜಾರ್, ದಾಕ್ಷಯಿಣಿ ಆರ್.ಆಚಾರ್ಯ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡರು. ಅಕ್ಷಿತಾ ಮಾಯಿಪ್ಪಾಡಿ,ನಿವೇದಿತಾ ಪ್ರಾರ್ಥನೆ ಹಾಡಿದರು.ಜಯ ಮಣಿಯಂಪಾರೆ ಪ್ರಸ್ತಾವಿಕವಾಗಿ ಮಾತನಾಡಿದರು. ಕೆ.ಎಸ್.ದೇವರಾಜ್ ಆಚಾರ್ಯ ಕುಂಬಳೆ ಸ್ವಾಗತಿಸಿ, ಚಿತ್ರಕಲಾ ವಂದಿಸಿದರು. ಕಿರಣ್ ಆಚಾರ್ಯ ಮಧೂರು ನಿರೂಪಿಸಿದರು. ಬಳಿಕ ಸದಸ್ಯರ ಸಂವಾದ,ವಿಶ್ವದರ್ಶನ ಕಾರ್ಯಕ್ರಮದ ರೂಪುರೇಷೆ ನಡೆಯಿತು.ವಿವಿಧ ಸ್ಪಧರ್ಾ ವಿಜೇತರಿಗೆ ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ನ್ಯಾಯವಾದಿ ಪ್ರಭಾಕರ ಆಚಾರ್ಯ ಕೋಟೆಕ್ಕಾರು ಬಹುಮಾನ ವಿತರಿಸಿದರು.ಗುಡ್ಡೆಮನೆ ಪದ್ಮನಾಭ ಆಚಾರ್ಯ,ಕನಕ ಪ್ರಭಾಕರ ಆಚಾರ್ಯ,ರತ್ನಾವತಿ ಆಚಾರ್ಯ ಬನಾರಿ,ದೇವದಾಸ್ ಆಚಾರ್ಯ ಕೋಟೆಕ್ಕಾರು ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ಕವಿ,ಸಂಘಟಕ, ಬಂಗ್ರಮಂಜೇಶ್ವರ ಶ್ರೀಕಾಳಿಕಾಪರಮೇಶ್ವರಿ ದೇವಸ್ಥಾನದ ಆಡಳಿತ ಮೋಕ್ತೇಸರ ಆಶೋಕ್ ಆಚಾರ್ಯ-ಆಶಾ ಹಾಗೂ ಪುತ್ರಿ ಐಶ್ವರ್ಯ ಆಚಾರ್ಯ ಅವರನ್ನು ಸನ್ಮಾನಿಸಲಾಯಿತು.