ಲೋಡ್ ಶೆಡ್ಡಿಂಗ್ ಮುಂದುವರಿಕೆ
ಕಾಸರಗೋಡು: ರಾಜ್ಯವು ಭಾರೀ ವಿದ್ಯುತ್ ಕೊರತೆ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಶುಕ್ರವಾರದಿಂದ ರಾತ್ರಿ ವೇಳೆ ವಿದ್ಯುತ್ ಲೋಡ್ ಶೆಡ್ಡಿಂಗ್ ಏರ್ಪಡಿಸಲಾಗಿದೆ. ಲೋಡ್ ಶೆಡ್ಡಿಂಗ್ನ್ನು ಎಷ್ಟು ಸಮಯಕ್ಕೆ ಮುಂದುವರಿಸಬೇಕು ಎಂಬ ಬಗ್ಗೆ ಕೇರಳ ವಿದ್ಯುತ್ ಮಂಡಳಿಯು ಅವಲೋಕನ ನಡೆಸಲಿದೆ.
ಅಗತ್ಯವಿದ್ದಲ್ಲಿ ಲೋಡ್ಶೆಡ್ಡಿಂಗ್ನ್ನು ಕೆಲವು ತಿಂಗಳ ವರೆಗೆ ಮುಂದುವರಿಸಲಾಗುವುದು ಎಂದು ಮಂಡಳಿಯ ಅಧಿಕಾರಿಗಳು ತಿಳಿಸಿದ್ದಾರೆ. ಕೇಂದ್ರ ವಿದ್ಯುತ್ ವ್ಯೂಹದಿಂದ ಲಭಿಸುತ್ತಿದ್ದ 200 ಮೆಗಾವಾಟ್ ವಿದ್ಯುತ್ ಪೂರೈಕೆ ಕಾರಣಾಂತರದಿಂದ ನಿಲುಗಡೆಗೊಂಡಿರುವುದು ಮತ್ತು ಪ್ರವಾಹದಿಂದಾಗಿ ರಾಜ್ಯದ ಹಲವು ಜಲವಿದ್ಯುತ್ ಯೋಜನೆಗಳ ಕಾರ್ಯರಹಿತಗೊಂಡಿರುವುದು ರಾಜ್ಯ ವಿದ್ಯುತ್ ಕ್ಷಾಮ ಎದುರಿಸಲು ಪ್ರಮುಖ ಕಾರಣಗಳಾಗಿವೆ.