HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                          ಕಾಟುಕುಕ್ಕೆ ಶಾಲೆಯಲ್ಲಿ ಎನ್ಎಸ್ಎಸ್ ತರಬೇತಿ ಶಿಬಿರ
            ವಿದ್ಯಾಥರ್ಿಗಳಲ್ಲಿ ಸಾಮಾಜಿಕ ಕಳಕಳಿಯನ್ನು ರೂಪಿಸುವಲ್ಲಿ ಎನ್ಎಸ್ಎಸ್ ಪಾತ್ರ ಗಮನಾರ್ಹ
   ಪೆರ್ಲ: ವಿದ್ಯಾಥರ್ಿಗಳಲ್ಲಿ ಸಾಮಾಜಿಕ ಕಳಕಳಿಯನ್ನು ರೂಪಿಸುವಲ್ಲಿ ಎನ್ಎಸ್ಎಸ್ ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಕೇವಲ ಸ್ವಹಿತವನ್ನು ಮಾತ್ರ ಬಯಸದೇ ಇತರರ ಒಳಿತನ್ನು ಬಯಸುವ ಹಾಗೂ ಇತರಿಗಾಗಿ ಒಂದಿಷ್ಟನಾದರೂ ಮಾಡುವ  ಗಮನಾರ್ಹ ಮನೋಭಾವವನ್ನು ಮೈಗೂಡಿಸಿಕೊಳ್ಳಬೇಕೆಂದು ಆದೂರು ಜಿಎಚ್ಎಸ್ಎಸ್ ಶಾಲೆಯ ಕನ್ನಡ ಶಿಕ್ಷಕ ಹಾಗೂ ಜಿಲ್ಲಾ ಎನ್ಎಸ್ಎಸ್ ಘಟಕದ ಪಿ.ಎ.ಸಿ. ಸದಸ್ಯ ಶಾಹುಲ್ ಹಮೀದ್ ಹೇಳಿದರು.
   ಕಾಟುಕುಕ್ಕೆಯ ಶ್ರೀ ಸುಬ್ರಹ್ಮಣ್ಯೇಶ್ವರ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಇತ್ತೀಚೆಗೆ ಎನ್ಎಸ್ಎಸ್ ವಿದ್ಯಾಥರ್ಿಗಳಿಗಾಗಿ ನಡೆದ ತರಬೇತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
   ಸ್ವಾಮಿ ವಿವೇಕಾನಂದ, ಮಹಾತ್ಮಾ ಗಾಂಧಿ ಹಾಗೂ ಮದರ್ ತೆರೇಸಾ ಮುಂತಾದವರ ತತ್ವಾದರ್ಶಗಳನ್ನು ವಿದ್ಯಾಥರ್ಿಗಳು ಜೀವನದಲ್ಲಿ ಅಳವಡಿಸಿಕೊಳ್ಳುವ ಪ್ರಯತ್ನವನ್ನು ಮಾಡಬೇಕು. ಇದು ಸಾಮಾಜಿಕ ಸುಸ್ಥಿರ ಬಾಳ್ವೆಗೆ ನೈತಿಕ ಬೆಂಬಲವನ್ನು ನೀಡುತ್ತದೆ. ಹಣ ಹಾಗೂ ಅವಕಾಶಗಳನ್ನೇ ನಂಬಿ ಜೀವನದಲ್ಲಿ ಏನನ್ನೂ ಸಾಸುವುದಕ್ಕಾಗುವುದಿಲ್ಲ. ಮಾಡಲೇ ಬೇಕೆಂಬ ಛಲವೊಂದಿದ್ದರೆ ಅವಕಾಶವನ್ನು ನಾವಾಗಿ ಸೃಷ್ಟಿಸಬಹುದು ಎಂದು ಅವರು ಅಭಿಪ್ರಾಯಪಟ್ಟರು.
    ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಶಾಲಾ ಪ್ರಾಂಶುಪಾಲ ಪದ್ಮನಾಭ ಶೆಟ್ಟಿ ಸೇವಾ ಮನೋಭಾವವು ಕೇವಲ ಎನ್ಎಸ್ಎಸ್ ಕಾರ್ಯಕ್ರಮಗಳಲ್ಲಿ ಮಾತ್ರವಾಗಿದೆ. ಅದನ್ನು ಜೀವನಪೂತರ್ಿ ಅಳವಡಿಸಿಕೊಳ್ಳಬೇಕು. ಗುರುಹಿರಿಯರನ್ನು ಗೌರವದಿಂದ ಕಾಣುವಲ್ಲಿ ಎನ್ಎಸ್ಎಸ್ ವಿದ್ಯಾಥರ್ಿಗಳು ಮುಂಚೂಣಿಯಲ್ಲಿರುಬೇಕು ಎಂದರು. ಆಯ್ಕೆಗೊಂಡ 50 ವಿದ್ಯಾಥರ್ಿಗಳು ತರಬೇತಿಯಲ್ಲಿ ಭಾಗವಹಿಸಿದರು. ಅರ್ಥಶಾಸ್ತ್ರ ಶಿಕ್ಷಕಿ ವಾಣಿ ಕೆ. ಸ್ವಾಗತಿಸಿ, ಯೋಜನಾಧಿಕಾರಿ ಮಹೇಶ್ ಏತಡ್ಕ ವಂದಿಸಿದರು. ವಿದ್ಯಾಥರ್ಿಗಳಾದ ಕವಿತಾ ಎಸ್.ವೈ ಹಾಗೂ ಮಶೂಕ್ ನೇತೃತ್ವವನ್ನು ವಹಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries