HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                ಮೇಲ್ಮಟ್ಟದ ಹುದ್ದೆಗೇರಲು ಬಂಟರು ಮುಂದಾಗಬೇಕು-ಆರ್.ಉಪೇಂದ್ರ ಶೆಟ್ಟಿ
                   ಜಿಲ್ಲಾ ಬಂಟರ ಸಂಘದಿಂದ ಸಹಾಯ, ಪ್ರತಿಭಾ ಪುರಸ್ಕಾರ ವಿತರಣೆ
   ಕುಂಬಳೆ: ಬಂಟರು ಇಂದು ಎಲ್ಲಾ ಕ್ಷೇತ್ರಗಳಲ್ಲೂ ಅಪೂರ್ವ ಸಾಧನೆಗಳ ಮೂಲಕ ಗುರುತಿಸಿಕೊಳ್ಳುತ್ತಿದ್ದಾರೆ. ಆದರೆ ಭಾರತೀಯ ಆಡಳಿತ ಸೇವೆಯಾದ ಐಎಎಸ್ ಮತ್ತು ಐಪಿಎಸ್ಗಳಂತಹ ಉನ್ನತ ಹುದ್ದೆಗಳಿಗೆ ತಲಪುವಲ್ಲಿ ಹಿಂದುಳಿದಿದ್ದೇವೆ. ಈ ಕಾರಣದಿಂದ ಪ್ರತಿಭಾವಂತ ಬಂಟ ವಿದ್ಯಾಥರ್ಿಗಳು ಆ ಎತ್ತರಕ್ಕೇರಲು ಪ್ರಯತ್ನಿಸಬೇಕು ಎಂದು ಬೆಂಗಳೂರು ಬಂಟರ ಸಂಘದ ನೂತನ ಅಧ್ಯಕ್ಷ ಆರ್.ಉಪೇಂದ್ರ ಶೆಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದರು.
   ಕುಂಬಳೆ ಸಿಹಾಲ್ ಸಭಾಂಗಣದಲ್ಲಿ ಜಿಲ್ಲಾ ಬಂಟರ ಸಂಘ  ಬೆಂಗಳೂರಿನ ಬಂಟರ ಸಂಘದ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡ ವಿದ್ಯಾಭ್ಯಾಸ ಸಹಾಯ ವಿತರಣೆ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
  ಐಎಎಸ್-ಐಪಿಎಸ್ ಸೇವೆಗಳ ಪರೀಕ್ಷೆಗಳಿಗೆ ಪ್ರತಿಭಾವಂತ ಬಂಟ ವಿದ್ಯಾಥರ್ಿಗಳಿಗೆ ತರಬೇತಿ, ಮಾರ್ಗದರ್ಶನ ನೀಡುವಲ್ಲಿ ಬಂಟರ ಸಂಘ ಮುತುವಜರ್ಿ ವಹಿಸಬೇಕೆಂದು ಅವರು ಈ ಸಂದರ್ಭ ತಿಳಿಸಿದರು.
  ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಬಂಟರ ಸಂಘದ ಅಧ್ಯಕ್ಷ ನ್ಯಾಯವಾದಿ ಎ.ಸದಾನಂದ ರೈ ಅವರು ಮಾತನಾಡಿ, ಕಾಸರಗೋಡಿನಲ್ಲಿರುವ ಬಂಟ ಸಮುದಾಯ ವಿದ್ಯಾಥರ್ಿಗಳು ಸವಾಲುಗಳನ್ನು ಎದುರಿಸುತ್ತಿದ್ದಾರೆ. ಬಂಟ ವಿಭಾಗಕ್ಕೆ ಮೀಸಲಾತಿ ನೀಡದಿರುವುದರಿಂದ ಶಿಕ್ಷಣ ಹಾಗೂ ಉದ್ಯೋಗವಕಾಶಗಳಿಂದ ವಂಚಿತರಾಗುತ್ತಿದ್ದಾರೆ. ಕಾಸರಗೋಡಿನ ವಿದ್ಯಾಥರ್ಿಗಳಿಗೂ ಕನರ್ಾಟಕದ ತುಳು ಕೋಟಾದಡಿ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿದರು.
   ಉದ್ಯಮಿ ಅರಿಯಡ್ಕ ಏಳ್ನಾಡುಗುತ್ತು ಗಣೇಶ ರೈ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಸಹಾಯ ಧನ ವಿತರಿಸಿದರು. ಯುರೋಪ್ ಕಾರು ರ್ಯಾಲಿ ಚಾಂಪಿಯನ್ ಅಶ್ವಿನ್ ನಾಕ್, ಬೆಂಗಳೂರು ಬಂಟರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಸದಾನಂದ ಸುಲಾಯ, ಜಿಲ್ಲಾ ಬಂಟರ ಸಂಘದ ನಿಕಟಪೂರ್ವ ಅಧ್ಯಕ್ಷ ಜಿ.ಕೆ.ಶೆಟ್ಟಿ ಬೊಳ್ನಾಡುಗುತ್ತು, ಮಂಜೇಶ್ವರ ಬಂಟರ ಯಾನೆ ನಾಡವರ ಸಂಘದ ಅಧ್ಯಕ್ಷ ದಾಸಣ್ಣ ಆಳ್ವ ಕುಳೂರುಬೀಡು, ಕುಂಬಳೆ ಬಂಟ್ಸ್ ಸವರ್ೀಸ್ ಸೊಸೈಟಿ ಅಧ್ಯಕ್ಷ ಪದ್ಮನಾಭ ಶೆಟ್ಟಿ ವಳಮಲೆ, ಕಾಸರಗೋಡು ವಲಯ ಬಂಟರ ಸಂಘದ ಅಧ್ಯಕ್ಷ ಸುಬ್ಬಣ್ಣ ಶೆಟ್ಟಿ ಕುಚಚಕ್ಕಾಡು ಉಪಸ್ಥಿತರಿದ್ದು ಶುಭಹಾರೈಸಿದರು.
  ಸಿ.ಎ.ಪರೀಕ್ಷೆಯ ಮೊದಲ ಯತ್ನದಲ್ಲಿ ಉತ್ತೀರ್ಣರಾದ ಅನಸೂಯಾ ರೈ ಕಾಜೂರು ಹಾಗೂ ವಿಖ್ಯಾತ ರೈ ಅರಿಬೈಲು ಅವರನ್ನು ಅಭಿನಂದಿಸಲಾಯಿತು. ಬೆಂಗಳೂರು ಬಂಟರ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡ ಉಪೇಂದ್ರ ಶೆಟಿ ಯವರನ್ನು ಗೌರವಿಸಲಾಯಿತು. ಸುಬ್ಬಣ್ಣ ಶೆಟ್ಟಿ, ಸದಾಶಿವ ರೈ ಬೆಳ್ಳಿಪ್ಪಾಡಿ, ಪದ್ಮನಾಭ ಶೆಟ್ಟಿ, ಶ್ಯಾಮಲಾ ಎಂ.ಶೆಟ್ಟಿ ಅತಿಥಿಗಳನ್ನು ಪರಿಚಯಿಸಿದರು. ಜಿಲ್ಲಾ ಬಂಟರ ಸಂಘದ ಉಪಾಧ್ಯಕ್ಷ ವಸಂತರಾಜ ಶೆಟ್ಟಿ ಸ್ವಾಗತಿಸಿ, ಪ್ರಧಾನ ಕಾರ್ಯದಶರ್ಿ ನ್ಯಾಯವಾದಿ ಎಂ.ದಾಮೋದರ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೋಶಾಧಿಕಾರಿ ಚಂದ್ರಹಾಸ ರೈ, ಜೊತೆ ಕಾರ್ಯದಶರ್ಿ ಅರವಿಂದಾಕ್ಷ ಭಂಡಾರಿ ಅವರು ವಿದ್ಯಾಭ್ಯಾಸ, ಪ್ರತಿಭಾ ಪುರಸ್ಕಾರ ಧನಸಹಾಯ ವಿತರಣೆ ಕಾರ್ಯಕ್ರಮ ನಿರೂಪಿಸಿದರು. ಸದಾಶಿವ ರೈ ಬೆಳ್ಳಿಪ್ಪಾಡಿ ವಂದಿಸಿದರು. ಸುಶ್ಮಿತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.


  

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries