HEALTH TIPS

ಯಾವುದೇ ಶೀರ್ಷಿಕೆಯಿಲ್ಲ

          ಇನ್ನು ಕಲಿಕೆ ಸುಲಭ-ಪರಭಾಷಿಗರು ಕನ್ನಡ ಕಲಿಯಲು ನೆರವಾಗಬಲ್ಲ ನೂತನ ಜಾಲತಾಣಕ್ಕೆ ಜಯಮಾಲ ಚಾಲನೆ
    ಬೆಂಗಳೂರು: ಪರಭಾಷಿಗರು ಸುಲಭವಾಗಿ ಕನ್ನಡ ಕಲಿಯಲು ನೆರವಾಗಬಲ್ಲ ನೂತನ ಜಾಲತಾಣಕ್ಕೆ ಸಚಿವೆ ಜಯಮಾಲ ಬುಧವಾರ ಚಾಲನೆ ನೀಡಿದ್ದಾರೆ.
   ದೆಹಲಿಯ ಜವಹರಲಾಲ್ ನೆಹರು ವಿವಿ ಕನ್ನಡ ಅಧ್ಯಯನ ಪೀಠ ರೂಪಿಸಿದ ಈ ಜಾಲತಾಣದಲ್ಲಿ ಪರಭಾಷಿಕರಿಗೆ ಸರಳವಾಗಿ ಕನ್ನಡ ಕಲಿಯುವುದಕ್ಕೆ ಸಹಾಯಕ ಪಠ್ಯಗಳಿದೆ.
ಹಾಡು, ಮಾತುಗಳ ಅನುಕರಣೆ ಸೇರಿ ಅನೇಕ ವಿಷಯಗಳ ಬಗೆಗೆ ಇದರಲ್ಲಿ 30 ವೀಡಿಯೋಗಳನ್ನು ಹಾಕಲಾಗಿದೆ.
    ಜಾಲತಾಣಕ್ಕೆ ಚಾಲನೆ ನಿಡಿದ ಸಚಿವರು ಸುದ್ದಿಗಾರರೊಡನೆ ಮಾತನಾಡಿ, ಯೋಜನೆಗೆ ಕನ್ನಡ ಸಂಸ್ಕೃತಿ ಇಲಾಖೆ 30 ಲಕ್ಷ ಅನುದಾನವನ್ನು ನಿಡಿದೆ. ಇದಕ್ಕೆ ಹೆಚ್ಚಿನ ಅನುದಾನ ಬೇಕಿದ್ದಲ್ಲಿ ಪ್ರಸ್ತಾವನೆ ಸಲ್ಲಿಸಲಾಗುತ್ತದೆ ಎಂದರು.
   ಆನ್ ಲೈನ್ ಮೂಲಕ 'ಸಕಾಲ' ಸೇವೆ ಪ್ರಾರಂಭವಾಗಿದ್ದು ಆಡಳಿತ ಪಾರದರ್ಶಕತೆ ಜತೆಗೆ ಸುಲಭ ಸೇವೆಗೆ ಇದು ನೆರವಾಗಲಿದೆ ಸಚಿವೆ ಜಯಮಾಲ ಹೇಳಿದ್ದಾರೆ.
   ಜಾಲತಾಣದಲ್ಲಿ ಕನರ್ಾಟಕದ ಇತಿಹಾಸ, ಜನಪದ ಸಾಹಿತ್ಯ, ರಂಗಭೂಮಿ, ವರ್ತಮಾನ ವಿಚಾರ, ಸೇರಿ ಅನೇಕ ವಿಷಯಗಳನ್ನು ಸೇರಿಸಲಾಗಿದೆ.ಹಿಂದಿ ಹಾಗೂ ಉದರ್ು ಹೊರತಾಗಿ ಇದುವರೆಗೆ ಬೇರಾವ ಭಾಷೆಯಲ್ಲಿಯೂ ಇಂತಹಾ ಪ್ರಯೋಗ ನಡೆದಿಲ್ಲ ಎಂದು ದೆಹಲಿಯ ಜೆ ಎನ್ ಯು ನ ಕನ್ನಡ ವಿಭಾಗ ಮುಖ್ಯಸ್ಥ ಪುಷರ್ೋತ್ತಮ ಬಿಳಿಮಲೆ  ಹೇಳಿದ್ದಾರೆ.
  ಆಸಕ್ತರು ಜಾಲತಾಣದ    www.kannadakalike.org  ಕೊಂಡಿ ಬಳಸಬಹುದು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries