ಬೆದರಿಕೆ, ಜೀವ ಭಯವಿರುವ ಪ್ರೇಮಿಗಳ ರಕ್ಷಣೆಗೆ ಕೇರಳದಲ್ಲಿ ಲವ್ ಕಮಾಂಡೊಗಳು
ಕೊಚ್ಚಿ: ರಾಜ್ಯದಲ್ಲಿ ಜೂನ್ ನಲ್ಲಿ ಲವ್ ಕಮಾಂಡೊಸ್ ಎಂಬ ಅಭಿಯಾನ ಆರಂಭಗೊಂಡಿತ್ತು. ಆಗ ಅದಕ್ಕೆ ಅಷ್ಟೊಂದು ಬೆಂಬಲ ಸಿಕ್ಕಿರಲಿಲ್ಲ. ಆದರೆ ಆರಂಭಗೊಂಡ ನಂತರ ಅನೇಕ ಪ್ರೇಮಿಗಳಿಂದ ತಮಗೆ ರಕ್ಷಣೆ ಮತ್ತು ಬೆಂಬಲ ನೀಡಿ ಎಂದು ಹಲವು ಕರೆಗಳು ಬರುತ್ತಿವೆಯಂತೆ. ಕಳೆದ ಜೂನ್ ನಿಂದ ಆಗಸ್ಟ್ ವರೆಗೆ ದೆಹಲಿ ಮೂಲದ ಎನ್ ಜಿಒಗೆ ಕೇರಳದಿಂದ 500ಕ್ಕೂ ಹೆಚ್ಚು ಕರೆಗಳು ಬಂದಿದ್ದು ಅವುಗಳಲ್ಲಿ 52 ಕೇಸುಗಳನ್ನು ನಿರ್ವಹಿಸಲಾಗುತ್ತಿದೆಯಂತೆ.
ನಮ್ಮ ಅಭಿಯಾನಕ್ಕೆ ಆರಂಭಗೊಂಡ ದಿನದಿಂದ ಸಾಕಷ್ಟು ಕರೆಗಳು ಬರುತ್ತಿವೆ. ಕೇರಳದಲ್ಲಿನ ಪ್ರೇಮಿಗಳು ಇಷ್ಟೊಂದು ಒತ್ತಡದಲ್ಲಿದ್ದಾರೆ ಎಂದು ನನಗೆ ಗೊತ್ತಿರಲಿಲ್ಲ. ಪ್ರೇಮಿಗಳಿಗೆ ಅವರ ಕುಟುಂಬ ಸದಸ್ಯರಿಂದ ಬೆದರಿಕೆ ಬಾರದಂತೆ ಮತ್ತು ಯಾವುದೇ ತೊಂದರೆಯಾಗದಂತೆ ನಾವು ಬೆಂಬಲ ನೀಡುತ್ತೇವೆ ಎನ್ನುತ್ತಾರೆ ಲವ್ ಕಮಾಂಡೊದ ಕೇರಳ ರಾಜ್ಯದ ಮುಖ್ಯ ಸಮನ್ವಯಕ ಅನಿಲ್ ಜೋಸೆ.
ಕೇರಳ ರಾಜ್ಯ ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ ಮುಂದುವರಿದ ರಾಜ್ಯ ಎನಿಸಿದರೂ ಕೂಡ ಬೇರೆ ಧರ್ಮ ಮತ್ತು ಜಾತಿಗೆ ಸೇರಿದ ವ್ಯಕ್ತಿಗಳನ್ನು ಮದುವೆಯಾಗುವುದನ್ನು ಜನರು ಪ್ರೋತ್ಸಾಹಿಸುವುದಿಲ್ಲ ಎನ್ನುತ್ತಾರೆ ಜೊಸೆ.
ಲವ್ ಕಮಾಂಡೊ ಪ್ರೇಮಿಗಳಿಗೆ ಕಾನೂನಿನ ಸೇವೆ ಒದಗಿಸುತ್ತದೆ. ಅಲ್ಲದೆ ಕುಟುಂಬದಿಂದ ಬೆದರಿಕೆ ಹೊಂದಿರುವ ಜೋಡಿಗೆ ಆಶ್ರಯ ಕಲ್ಪಿಸಿ ಉದ್ಯೋಗಕ್ಕೆ ಸಹ ಸಹಾಯ ಮಾಡುತ್ತದೆ. ಪೊಲೀಸ್ ಭದ್ರತೆ ಒದಗಿಸಲು ಕೂಡ ನೆರವಾಗುತ್ತದೆ. ತಿಂಗಳಲ್ಲಿ ಎರಡು ಬಾರಿ ನಾವು ಸಭೆ ಕರೆಯುತ್ತೇವೆ. ಮುಂದಿನ ದಿನಗಳಲ್ಲಿ ಸುಮಾರು 800 ತರಬೇತಿ ಪಡೆದ ಲವ್ ಕಮಾಂಡೊಗಳನ್ನು ನೇಮಕ ಮಾಡುವ ಪ್ರಕ್ರಿಯೆ ನಡೆಯುತ್ತಿದೆ ಎನ್ನುತ್ತಾರೆ ಅನಿಲ್ ಜೊಸೆ