HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                    ವಾಟೆತ್ತಿಲ ಸುಬ್ರಹ್ಮಣ್ಯೇಶ್ವರ ದೇವಸ್ಥಾನ ಜೀಣರ್ೋದ್ಧಾರ
                        ಅವಲೋಕನ ಸಭೆ
     ಉಪ್ಪಳ: ಸಜ್ಜನ ಭಕ್ತ ಬಾಂಧವರ ಧಾಮರ್ಿಕ ನಂಬಿಕೆಗಳು ಸಹಿತ ಅವರಲ್ಲಿನ ಆಸ್ತಿಕ ಗುಣಗಳು ದೇವಸ್ಥಾನಗಳ ಭೌತಿಕ ಅಭಿವೃದ್ಧಿಗೆ ಮತ್ತು ಆಧ್ಯಾತ್ಮಿಕ ಶಕ್ತಿಕೇಂದ್ರದ ನೆಲೆಯಾಗಲು ಸಹಕಾರಿಯಾಗುತ್ತವೆ. ಆಧುನಿಕ ಪರಿವರ್ತನೆಯ ಯುಗದಲ್ಲಿ ನಂಬಿಕೆಗಳೇ ಮಾನವೀಯ ಅಭ್ಯುದಯಕ್ಕೆ ನಾಂದಿ ಹಾಡುತ್ತವೆ ಎಂದು ಹಳೆಯಂಗಡಿ ಸರಕಾರಿ ಕಾಲೇಜಿನ ಪ್ರಾಂಶುಪಾಲ ವಿಶ್ವನಾಥ ಭಟ್ ಹೇಳಿದರು.
  ಬಾಯಾರು  ವಾಟೆತ್ತಿಲ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ಭಾನುವಾರ ನಡೆದ ಜೀಣರ್ೋದ್ಧಾರ ಅವಲೋಕನ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
   ಗ್ರಾಮದ ಏಕೈಕ ಸುಬ್ರಹ್ಮಣ್ಯೇಶ್ವರ ಕ್ಷೇತ್ರವು ಊರ ಹಾಗೂ ಪರವೂರ ಭಕ್ತ ಬಾಂಧವರ ನೆರವಿನೊಂದಿಗೆ ಜೀಣರ್ೋದ್ಧಾರಗೊಳ್ಳುತ್ತಿದ್ದು, ಧಾಮರ್ಿಕ ಶಕ್ತಿ ಕೇಂದ್ರವಾಗಿ ಬೆಳೆಯುತ್ತಿದೆ ಎಂದರು.
   ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಬಾಯಾರು ಸಹಕಾರಿ ಬ್ಯಾಂಕ್ ಕಾರ್ಯದಶರ್ಿ ಸದಾನಂದ.ಎಂ. ದೇವಸ್ಥಾನ ಧಾಮರ್ಿಕ ನಂಬಿಕೆಗಳ ಶ್ರದ್ಧಾಕೇಂದ್ರವಾಗಿದ್ದು, ಪ್ರಸ್ತುತ ಜೀಣರ್ೋದ್ಧಾರಗೊಳ್ಳುತ್ತಿದೆ. ನಿಧರ್ಿಷ್ಟ ಸಮಯದೊಳಗೆ ದೇವಸ್ಥಾನದ ಕೆಲಸ ಕಾರ್ಯಗಳು ಪೂರ್ಣಗೊಂಡು ಬ್ರಹ್ಮಕಲಶಾದಿ ಕೆಲಸ ಕಾರ್ಯಗಳು ಸುಲಲಿತವಾಗಿ ಮುನ್ನಡೆಯಲು ಎಲ್ಲ ಸಹೃದಯಿ ಭಕ್ತ ಜನರ ಪೂರ್ಣ ಸಹಕಾರ ಅತ್ಯಗತ್ಯ ಎಂದರು. ಎಲಿಗೆನ್ಸ್ ಕನ್ಸ್ಟ್ರಕ್ಷನ್ ಸಂಸ್ಥೆ ಮಾಲಕ ರಾಜೇಶ್ ಮಜಕ್ಕಾರು, ನಿವೃತ್ತ ಮುಖ್ಯೋಪಾಧ್ಯಾಯ ಸಜಂಕಿಲ ಸುಬ್ರಹ್ಮಣ್ಯ ಭಟ್, ಶಂಕರ ಮಾಸ್ತರ್ ಚೇರಾಲು, ಡಾ.ಮನು ಭಟ್ ಕೆದುಕೋಡಿ, ಗೋವಿಂದ ಭಟ್ ಬದಿಯಾರು, ವಿಘ್ನೇಶ್ವರ ಭಟ್, ಸಜಂಕಿಲ ಪದ್ಮನಾಭ ಭಟ್, ಗೋವಿಂದ ಭಟ್ ಆಟಿಕುಕ್ಕೆ, ಆಡಳಿತ ಮೊಕ್ತೇಸರ ಮಾಧವ ಭಟ್ ವಾಟೆತ್ತಿಲ ಮೊದಲಾದವರು ಇದ್ದರು. ಕಾರ್ಯಕ್ರಮದ ಆರಂಭದಲ್ಲಿ ಶ್ರೀರಂಜಿನಿ ಪ್ರಾರ್ಥನೆ ಹಾಡಿದರು. ವಾಟೆತ್ತಿಲ ಶ್ರೀಕಾಂತ್ ಭಟ್ ಕಾರ್ಯಕ್ರಮ ನಿರೂಪಿಸಿದರು. ಅವಲೋಕನ ಸಭೆಯ ದಿನದಂದು ದೇವಸ್ಥಾನದಲ್ಲಿ ಬಲಿವಾಡು ಕೂಟ ಏರ್ಪಟ್ಟಿತು, ಮಧ್ಯಾಹ್ನ ಪ್ರಸಾದ ವಿತರಣೆಯ ನಂತರ ಅನ್ನಸಂತರ್ಪಣೆ ನೆವೇರಿತು.
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries